ಪಾಟೀಲ ಪುಟ್ಟಪ್ಪ ಅವರಿಗೆ ಶತಮಾನದ ಕನ್ನಡಿಗ ಸಹಿತ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವಕ್ಕೆ ಆಯ್ಕೆ

Spread the love

ಪಾಟೀಲ ಪುಟ್ಟಪ್ಪ ಅವರಿಗೆ ಶತಮಾನದ ಕನ್ನಡಿಗ ಸಹಿತ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವಕ್ಕೆ ಆಯ್ಕೆ

ಅಜೆಕಾರು: 11 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಶತಮಾನದ ಕನ್ನಡಿಗ ಗೌರವಕ್ಕೆ ಹಿರಿಯ ಹೋರಾಟಗಾರ, ಪತ್ರಕರ್ತ ಪಾಟೀಲ ಪುಟ್ಟಪ್ಪ ಆಯ್ಕೆಯಾಗಿದ್ದಾರೆ. ಸಾಧಕ ಮಕ್ಕಳಿಗೆ ಕರ್ನಾಟಕ ಪ್ರತಿಭಾ ರತ್ನ, ಯುವ ಸಾಧಕರಿಗೆ ಕರ್ನಾಟಕ ಯುವ ರತ್ನ, ಹಿರಿಯ ಸಾಧಕರಿಗೆ ಕರ್ನಾಟಕ ಸಾಧನಾ ರತ್ನ ಮತ್ತು ಸಾಧಕ ಸಂಸ್ಥೆಗಳಿಗೆ ಕರ್ನಾಟಕ ಸಂಘ ರತ್ನ ಗೌರವವನ್ನು ಪ್ರ್ರತಿ ವರ್ಷದಂತೆ ರಾಜ್ಯಮಟ್ಟದಲ್ಲಿ ನೀಡಲಾಗುತ್ತಿದೆ ಎಂದು ಸಮಿತಿಯ ಸ್ಥಾಪಕ ಅಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹತ್ತು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆದಿದ್ದು ಈ ವರ್ಷ ಸೀಮೋಲಂಘನ ನಡೆಸಿ ಬಳ್ಳಾರಿ ಜಿಲ್ಲೆಯಲ್ಲಿ 11 ರ ಸಂಭ್ರಮ ನಡೆಯುತ್ತಿದೆ. ಖ್ಯಾತ ಸಾಹಿತಿ ಭುವನೇಶ್ವರಿ ಹೆಗಡೆ ಅಶದಕ್ಷತೆಯಲ್ಲಿ ಪ್ರೊ. ಎ.ವಿ.ನಾವಡ ಮತ್ತು ಡಾ.ಗಾಯತ್ರಿ ನಾವಡ ದಂಪತಿ ಸಮ್ಮೇಳನವನ್ನು ಉದ್ಘಾಟಿಸುವರು. ಉದ್ಘಾಟನಾ ಸಮಾರಂಬದ ಅಧ್ಯಕ್ಷತೆಯನ್ನು ಕರ್ನಾಟಕ ಸಮಾಜ ರತ್ನ ಕಡಂದಲೆ ಸುರೇಶ ಭಂಡಾರಿ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವ ಪ್ರದಾನಿಸುವರು ಎಂದು ತಿಳಿಸಿದ್ದಾರೆ.

ಸುವರ್ಣ ಸಂಭ್ರಮದಲ್ಲಿರುವ ಉದುಯವಾಣಿ ದೈನಿಕಕ್ಕೆ ಸುವರ್ಣ ಮಾಧ್ಯಮ ರತ್ನ ಗೌರವವನ್ನು ಸಲ್ಲುತ್ತಿದೆ. ಭಾರತ ಧರ್ಮ ಭೂಷಣ ಗೌರವವನ್ನು ಶ್ರೀ ಮು.ನಿ.ಪ್ರ. ಚೆನ್ನಬಸವ ಶಿವಯೋಗಿಗಳು, ಗುಡ್ಡದ ವಿರಕ್ತ ಮಠ, ನೀಲಗುಂದ, ಕರ್ನಾಟಕ ದಂಪತಿ ಗೌರವವನ್ನು ಕಲಾ-ಸಾಹಿತ್ಯ-ಶಿಕ್ಷಣ ಕ್ಷೇತ್ರದ ಅನನ್ಯ ಸಾಧಕರಾದ ಪ್ರಕಾಶ ದಾಸನೂರು ಮತ್ತು ವೇದಾವತಿ ದಾಸನೂರ್ ದಂಪತಿಗೆ ನೀಡಲಾಗುತ್ತಿದೆ.

ಕರ್ನಾಟಕ ಪ್ರತಿಭಾ ರತ್ನ ಗೌರವ: ಎ. ಆದ್ಯ ಮಂಗಳೂರು, ಮಂದಾರ ಮೂಡುಬಿದಿರೆ, ಅಮನ್ ಕರ್ಕೇರಾ, ದ.ಕ. ಧನ್ವಿ ಮರವಂತೆ- ಕುಂದಾಪುರ, ಚುಕ್ಕಿ ವಿಟ್ಲ-ದಕ್ಷಿಣ ಕನ್ನಡ, ಮಹನ್ಯ ಹುಬ್ಬಳ್ಳಿ, ಸಾರ್ಥಕ್ ಶೆಣೈ ಮಂಗಳೂರು, ಬೇಬಿಶ್ರೀ ಹೊನ್ನಾವರ, ಅನನ್ಯ ಬೆಳಾಲ್-ಮೈಸೂರು, ಪ್ರೇಕ್ಷಿತ್ ರಾಜ್ ಮೈಸೂರು, ತನುಶ್ರೀ ಮಂಗಳೂರು,ಆಶಿಶ್ ಎಂ.ರಾವ್ ಸಂಜಯ.ಕುಮಾರ..ಯ.ಬಿರಾದಾರ,ಬಿಜಾಪುರ, ಅಜಯ್ ಗಾಯ್‍ತೊಂಡೆ,ಉತ್ತರಕನ್ನಡ,ತೇಜಸ್ವಿನಿ ಬೆಳಗಾವಿ, ಮೇಧಾ ನಾಯರ್‍ಪಳ್ಳ ಕಾಸರಗೋಡು, ರುಬಿನಾ ನಾದಾಫ್ ಹಾವೇರಿ.

ಕರ್ನಾಟಕ ಯವ ರತ್ನ ಗೌರವ: ಡಾ.ಆಕಾಶರಾಜ್,ಉಡುಪಿ, ಅನಿಲ್ ಕುಮಾರ್ ಸಸಿಹಿತ್ಲು ಮುಂಬಯಿ, ಡಾ..ರವಿ ಶೆಟ್ಟಿ, ಬೈಂದೂರು, ಪರಮೇಶಿ ನಾಗಪ್ಪ ಕುರುವತ್ತಿ ಗೌಡರ್, ಗುತ್ತಲ, ಪ್ರಮಲ್ ಕುಮಾರ್ ಮಂಗಳೂರು, ಭಾವನ ಬೀದರೆ ಧಾರವಾಡ, ರಾಘವೇಂದ್ರ ಕರ್ವಾಲೋ- ಹಿರಿಯಡ್ಕ, ಉಡುಪಿ, ಶ್ರೀದೇವಿ -ಬಾಗಲಕೋಟೆ, ಧರ್ಮೇಂದ್ರ ಮುರಾರಿ-ಧಾರವಾಡ, ರಾಖೇಶ್ ಕುಂಜೂರು, ಕಾಪು, ಎನ್..ಡಿ ಜೋಶಿ ಹೊಳಲು, ಸುಧೀರ್ ಶ್ಯಾನುಭೋಗ್ ಕಾರ್ಕಳ, ಉಡುಪಿ, ಸೋಮಶೇಖರ್ ಬಿ. ಇಟಗಿ, ರವೀಂದ್ರ ಪುರೋಹಿತ್ ಹೆಬ್ರಿ, ಜಹಾನ್ ಅರಾ. ಕುಷ್ಟಗಿ, ವಿಶಾಲಾಕ್ಷಿ ಅಕ್ಕಿ, ಶಿಗ್ಗಾಂವಿ, ಬದರಿನಾಥ ಜಾಗೀರದಾರ- ಬೆಂಗಳೂರು, ಚಿತ್ತೂರು ಪ್ರಭಾಕರ ಆಚಾರ್ಯ ಬ್ರಹ್ಮಾವರ, ಪ್ರಮೋದ್ ಎಸ್..ಜ್ಯೋತಿ ಹೊಳಲು, ದೀಪಕ್ ದುರ್ಗಾ- ಹೆಬ್ರಿ, ಡಾ..ಕಾಂತಿ ಶೆಟ್ಟಿ, ಕಾರ್ಕಳ, ಬಿ. ಬಸವರಾಜ ಮಾಗಳ ಹೂವಿನ ಹಡಗಲಿ, ರತನ್ ಕುಮಾರ್ ಹೊಸಂಗಡಿ ಕಾಸರಗೋಡು, ಸೋನಿಯಾ ಮಾರ್ಟಿನ್ ಬಳ್ಳಾರಿ.

ಕರ್ನಾಟಕ ಸಾಧನ ಗೌರವ:ಡಾ. ಸುಬ್ಭಣ್ಣ ರೈ, ಹಂಪೆ, ಲೀಲಾಧರ ಬೈಂಕಪಾಡಿ-ಯು.ಎ.ಇ, ಪ್ರಕಾಶ ರಾವ್ ಪಯ್ಯಾರ್-ದುಬಾಯಿ, ಜಯರಾಮ ಅಡಿಗ ಬೆಂಗಳೂರು ಡಾ.ರಾಮ್ ಭಟ್,ಕೆ.ಎಂ.ಸಿ.ಮಣಿಪಾಲ, ಸಂಕಮ್ಮ ಸಂಕಣ್ಣನವರ ಬ್ಯಾಡಗಿ- ಹಾವೇರಿ, ಗಂಗಮ್ಮ ಪಾಟೀಲ, ಇಚ್ಚಂಗಿ, ಬಸಪ್ಪ ನಾಗಪ್ಪ ಗಂಗಣ್ಣನವರ್-ಗುತ್ತಲ, ಚಿಕ್ಕಪ್ಪ ಲಿಂಗಪ್ಪ ಉದಕಟ್ಟಿ ಲಿಂಗನಾಯಕನಹಳ್ಳಿ, ಜಯದೇವಪ್ಪ ಜೈನಕೇರಿ ಶಿವಮೊಗ್ಗ, ಸತ್ಯನಾರಾಂiÀiಣ ಪುಣಿಚಿತ್ತಾಯ ಕಾಸರಗೋಡು, ಕೆ. ವಿ ರಮಣ್ ಮೂಡುಬಿದಿರೆ, ಶಂಕರಲಿಂಗ ಮುಲಗುಂದ ಗದಗ, ಶರಭೇಂದ್ರ ಸ್ವಾಮಿ ರಾಯಚೂರು, ಯಾಕೂಬ್ ಖಾದರ್ ಗುಲ್ವಾಡಿ, ಕುಂದಾಪುರ.

ಕರ್ನಾಟಕ ಸಂಘ ರತ್ನ ಗೌರವ: ಉತ್ಸವ ರಾಕ್ ಗಾರ್ಡನ್, ಗೊಟಗೋಡಿ, ಹಾವೇರಿ ಜಿಲ್ಲೆ, ಸಮಾಜ ಪುಸ್ತಕಾಲಯ-ಧಾರವಾಡ, ಅಭಿನಯ ಮಂಟಪ-ಮುಂಬಯಿ, ಎಂ.ಸಿ.ಸಿ ಬ್ಯಾಂಕ್-ಮೂಡುಬಿದಿರೆ, ಕರ್ನಾಟಕ ವಿದ್ಯಾವರ್ಧಕ ಸಂಘ-ಧಾರವಾಡ, ಮೆ.ಪಿ.ಸಿ ಶಾಭಾದಿಮಠ ಬುಕ್ ಡಿಪೋಟ್ ಗದಗ, ನವಜ್ಯೋತಿ ಯುವಕವೃಂದ(ರಿ)ಬೈಂಕಪಾಡಿ ದಕ್ಷಿಣ ಕನ್ನಡ ಮತ್ತು ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ, ದುರ್ಗಾ ನಂದಳಿಕೆ ಉಡುಪಿಜಿಲ್ಲೆ.


Spread the love