ಬಂಟ್ವಾಳ: ಎಂಡಿಎಂಎ, ಗಾಂಜಾ ಸಹಿತ ಮೂವರ ಬಂಧನ

Spread the love

ಬಂಟ್ವಾಳ: ಎಂಡಿಎಂಎ, ಗಾಂಜಾ ಸಹಿತ ಮೂವರ ಬಂಧನ

ಬಂಟ್ವಾಳ: ನಿಷೇಧಿತ ಎಂಡಿಎಂಎ, ಗಾಂಜಾ ಹೊಂದಿದ ಆರೋಪದಲ್ಲಿ ಬುಧವಾರ ಇಬ್ಬರನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಒಟ್ಟು 4.90 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿರುವುದು ವರದಿಯಾಗಿದೆ.

ಮಂಗಳೂರ ಅಡ್ಯಾರ್‌ನ ನಾಸಿರ್ ಹುಸೇನ್(37), ಕಂಕನಾಡಿಯ ಅಫ್ರಿದಿ(24) ಮತ್ತು ಬಂಟ್ವಾಳ ಗೋಳ್ತಮಜಲುವಿನ ಜುನೈದ್(38) ಬಂಧಿತ ಆರೋಪಿಗಳು.

ಇವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 225 ಲಕ್ಷ ರೂ. ಮೌಲ್ಯದ 22.57 ಗ್ರಾಂ ಎಂಡಿಎಂಎ ಹಾಗೂ 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್ ಗಳು ಸೇರಿದಂತೆ ಒಟ್ಟು 4.90 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love
Subscribe
Notify of

0 Comments