ಸುರತ್ಕಲ್: ಡ್ರೈನೇಜ್ ಸಂಪರ್ಕ ಸಕ್ರಮಗೊಳಿಸಲು ಮಹಾನಗರಪಾಲಿಕೆ ಸೂಚನೆ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಸುರತ್ಕಲ್ ಪ್ರದೇಶದ (ಇಡ್ಯಾ ವೆಟ್ ವೆಲ್ಗೆ ಹೊಂದಿಕೊಂಡಿರುವ ಒಳಚರಂಡಿ ಜಾಲವನ್ನು ಹೊರತು ಪಡಿಸಿ) ವಾರ್ಡ್ ನಂ. 1, 2, 3, 4, 5, 6, 8 ರ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಕಟ್ಟಡಗಳಿಗೆ ಅನಧಿಕೃತವಾಗಿ ಒಳಚರಂಡಿ ಸಂಪರ್ಕವನ್ನು ಪಡೆದಿರುವ ಕಟ್ಟಡಗಳ ಮಾಲೀಕರು ಕಡ್ಡಾಯವಾಗಿ ಮಹಾನಗರಪಾಲಿಕೆಯಿಂದ ಅಧಿಕೃತ ಒಳಚರಂಡಿ ಸಂಪರ್ಕವನ್ನು ಪಡೆದುಕೊಳ್ಳಬೇಕು.
ಅನಧಿಕೃತ ಒಳಚರಂಡಿ ಸಂಪರ್ಕ ಹೊಂದಿರುವ ಕಟ್ಟಡಗಳ ಮಾಲೀಕರು ನಿಗದಿತ ದಾಖಲೆಗಳೊಂದಿಗೆ ಸುರತ್ಕಲ್ ವಲಯ ಕಛೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಸಲ್ಲಿಸಿ ಅಗತ್ಯ ಶುಲ್ಕ ಹಾಗೂ ದಂಡವನ್ನು ಪಾವತಿಸಿ ಈ ಪ್ರಕಟಣೆ ಪ್ರಕಟವಾದ 30 ದಿನಗಳೊಳಗೆ ತಮ್ಮ ಸಂಪರ್ಕವನ್ನು ಕಾನೂನು ಬದ್ಧವಾಗಿ ಸಕ್ರಮಗೊಳಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಅನಧಿಕೃತ ಸಂಪರ್ಕವನ್ನು ಸಕ್ರಮಗೊಳಿಸದವರ ವಿರುದ್ಧ ಕೆ.ಎಂ.ಸಿ ಕಾಯ್ದೆ 1976ರಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಆದುದರಿಂದ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಿಸಿಕೊಂಡು ತಮ್ಮ ಅನಧಿಕೃತ ಒಳಚರಂಡಿ ಸಂಪರ್ಕಗಳನ್ನು ಸಕ್ರಮಗೊಳಿಸಿ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಹಕರಿಸಬೇಕು. ಇಡ್ಯಾ ವೆಟ್ ವೆಲ್ಗೆ ಹೊಂದಿಕೊಂಡಿರುವ ಪ್ರದೇಶಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













