ಸ್ವಾತಂತ್ರ್ಯದ ಸಂಭ್ರಮಕ್ಕೆ ಮಕ್ಕಳ ಸೃಜನಶೀಲತೆಯ ಬಣ್ಣ: ರೋಹನ್ ಕಾರ್ಪೊರೇಶನ್ ವತಿಯಿಂದ ‘ಫ್ರೀಡಮ್ ಪ್ಯಾಲೆಟ್ 2026’ ಚಿತ್ರಕಲಾ ಸ್ಪರ್ಧೆ

Spread the love

ಸ್ವಾತಂತ್ರ್ಯದ ಸಂಭ್ರಮಕ್ಕೆ ಮಕ್ಕಳ ಸೃಜನಶೀಲತೆಯ ಬಣ್ಣ: ರೋಹನ್ ಕಾರ್ಪೊರೇಶನ್ ವತಿಯಿಂದ ‘ಫ್ರೀಡಮ್ ಪ್ಯಾಲೆಟ್ 2026’ ಚಿತ್ರಕಲಾ ಸ್ಪರ್ಧೆ

ಮಂಗಳೂರು: ಭಾರತದ 80ನೇ ಸ್ವಾತಂತ್ಯೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ರೋಹನ್ ರೋಹನ್ ಕಾರ್ಪೊರೇಶನ್, ‘ಫ್ರೀಡಮ್ ಪ್ಯಾಲೆಟ್ 2026’ ಹೆಸರಿನ ಚಿತ್ರಕಲಾ ಸ್ಪರ್ಧೆಯನ್ನು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಆಯೋಜಿಸಿದೆ. ಮಕ್ಕಳಲ್ಲಿರುವ ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಹಾಗೂ ದೇಶಪ್ರೇಮದ ಭಾವನೆಯನ್ನು ಉತ್ತೇಜಿಸುವ ಆಶಯದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

‘ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಭಾಗವಹಿಸುವವರು ಸ್ವಾತಂತ್ರೋತ್ಸವದ ವಿಷಯವನ್ನಾಧರಿಸಿ ತಮ್ಮ ಚಿತ್ರವನ್ನು ರಚಿಸಿ, 10 ಆಗಸ್ಟ್ ಒಳಗಾಗಿ ರೋಹನ್ ಕಾರ್ಪೊರೇಶನ್ ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಲಿಂಕ್ ಅಥವಾ QR ಕೋಡ್ ಮೂಲಕ ಸಲ್ಲಿಸಬಹುದಾಗಿದೆ. ಮನೆ ಅಥವಾ ಶಾಲೆಯಲ್ಲಿಯೇ ಚಿತ್ರವನ್ನು ರಚಿಸಿ ಅಪ್‌ಲೋಡ್ ಮಾಡಲು ಅವಕಾಶವಿದ್ದು, ಸಲ್ಲಿಕೆಯಾಗುವ ಎಲ್ಲ ಚಿತ್ರಗಳ ಪೈಕಿ ಅತ್ಯುತ್ತಮ 60 ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ‘ಫ್ರೀಡಮ್ ಪ್ಯಾಲೆಟ್ 2026’ರ ಅಧಿಕೃತ ತೀರ್ಪುಗಾರರ ಸಹಭಾಗಿಯಾಗಿ ಪಿಕ್ಟಿಲ್ (Pixncil) ಕೈಜೋಡಿಸಿದೆ.
ಅಂತಿಮ ಸುತ್ತು 2026ರ ಆಗಸ್ಟ್ 13ರಂದು ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಸ್ಪರ್ಧಿಗಳು ನೇರ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಂತಿಮ ಸುತ್ತಿನ ವಿಷಯವನ್ನು ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗುವುದು. ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಚಿತ್ರಕಲಾ ಸಾಮಗ್ರಿಗಳನ್ನು ಆಯೋಜಕರೇ ಒದಗಿಸಲಿದ್ದಾರೆ.

ವಿಜೇತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ₹25,000, ದ್ವಿತೀಯ ಬಹುಮಾನವಾಗಿ ₹15,000, ತೃತೀಯ ಬಹುಮಾನವಾಗಿ ₹10,000 ನೀಡಲಾಗುವುದು. ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ ಎಲ್ಲಾ ಸ್ಪರ್ಧಿಗಳಿಗೂ ಅವರ ಪ್ರತಿಭೆ ಮತ್ತು ಭಾಗವಹಿಸುವಿಕೆಯನ್ನು ಗೌರವಿಸಿ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.

ಈ ಕುರಿತು ಮಾತನಾಡಿದ ರೋಹನ್ ರೋಹನ್ ಕಾರ್ಪೊರೇಶನ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ, “ಪ್ರತಿಯೊಂದು ಮಗುವಿನಲ್ಲೂ ತನ್ನ ಸೃಜನಶೀಲತೆಯ ಮೂಲಕ ಸಮಾಜಕ್ಕೆ ಸೂರ್ತಿಯಾಗುವ ಸಾಮರ್ಥ್ಯ ಅಡಗಿದೆ ಎಂಬುದು ನಮ್ಮ ನಂಬಿಕೆ. ಭಾರತ ತನ್ನ 80ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ, ‘ಫ್ರೀಡಮ್ ಪ್ಯಾಲೆಟ್’ ಮೂಲಕ ಮಕ್ಕಳಲ್ಲಿ ದೇಶಪ್ರೇಮ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಒಂದು ಅರ್ಥಪೂರ್ಣ ವೇದಿಕೆಯನ್ನು ರೂಪಿಸುವುದು ನಮ್ಮ ಉದ್ದೇಶ. ಮಕ್ಕಳಲ್ಲಿರುವ ಪ್ರತಿಭೆಗೆ ಈ ಸ್ಪರ್ಧೆ ಹೊಸ ಆಯಾಮ ನೀಡಲಿದ್ದು, ಅವರ ಕಲ್ಪನಾ ಶಕ್ತಿ ಎಲ್ಲರಿಗೂ ಸ್ಫೂರ್ತಿಯಾಗಲಿದೆ ಎಂಬ ನಂಬಿಕೆ ನಮ್ಮದು,’ ಎಂದು ಹೇಳಿದರು.

ರೋಹನ್ ರೋಹನ್ ಕಾರ್ಪೊರೇಶನ್ ನ ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೇರೊ ಮಾತನಾಡಿ, “”ಫ್ರೀಡಮ್ ಪ್ಯಾಲೆಟ್ ಕೇವಲ ಸ್ಪರ್ಧೆಯಲ್ಲ; ಇದು ಮಕ್ಕಳ ಚಿಂತನೆ ಮತ್ತು ಕಲ್ಪನೆಯನ್ನು ಗೌರವಿಸುವ ವೇದಿಕೆಯಾಗಿದೆ. ಕಲೆಯ ಮೂಲಕ ಮಕ್ಕಳು ತಮ್ಮ ಭಾವನೆಗಳ ಜೊತೆಗೆ, ಸಮಾಜ ಮತ್ತು ರಾಷ್ಟ್ರದ ಬಗ್ಗೆ ಹೊಂದಿರುವ ತಮ್ಮ ದೃಷ್ಟಿಕೋನವನ್ನ ಅರ್ಥಪೂರ್ಣವಾಗಿ ವ್ಯಕ್ತಪಡಿಸುತ್ತಾರೆ. ಈ ಉದ್ದೇಶಪೂರ್ಣ ಪ್ರಯತ್ನದ ಭಾಗವಾಗಿರುವುದು ನಮ್ಮೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ,” ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳ ಚಿತ್ರಗಳನ್ನು 2026ರ ಆಗಸ್ಟ್ 10ರೊಳಗೆ ಕಳುಹಿಸುವಂತೆ ಸೂಚಿಸಲಾಗಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ರೋಹನ್ ರೋಹನ್ ಕಾರ್ಪೊರೇಶನ್ ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ: +91 9035511821


Spread the love
Subscribe
Notify of

0 Comments