ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಸ್ವಚ್ಚತಾ ಆಂದೋಲನ

ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಸ್ವಚ್ಚತಾ ಆಂದೋಲನ

ಮಂಗಳೂರು: ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಜೋಕಟ್ಟೆ, ಇದರ 20ನೇ ವಾರ್ಷಿಕೋತ್ಸವ ಪ್ರಯುಕ್ತ ಜೋಕಟ್ಟೆಯ ನೂತನ ಮೊಹಿದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಯಿತು.

azad-cultural0association azad-cultural0association-00

ನೂತನ ಮೊಹಿದ್ದೀನ್ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಮುಜಿಬುರ್ರಹ್ಮಾನ್ ಅವರು ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿದರು. ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್, ಜೋಕಟ್ಟೆ ಇದರ ಅಧ್ಯಕ್ಷರಾದ ಫಯಾಝ್. ಬಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, AYCA ಸದಸ್ಯರು ನೂತನ ಮಸೀದಿಯ ವಠಾರ ಹಾಗೂ ಖಬರ್ ವಠಾರವನ್ನು ಸ್ವಚ್ಚಗೊಳಿಸಿದರು.

ಈ ವೇಳೆ AYCA ಪ್ರಧಾನ ಕಾರ್ಯದರ್ಶಿ ಇಮ್ರಾನ್, AYCA ಮಾಜಿ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರುಕ್, AYCA ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್, ಶಮೀರ್ ಅಬೀಲ್ , ಸೇರಿದಂತೆ AYCA ಸರ್ವ ಸದಸ್ಯರು ಭಾಗಿಯಾಗಿದ್ದರು.

Leave a Reply

Please enter your comment!
Please enter your name here