ಇಳಿಜಾರಿಗೆ ವಾಲಿ ಸಿಲುಕಿದ ಮರಳು ಲಾರಿ: ಕಣ್ವಗುಡ್ಡೆ ಪರ್ಯಾಯ ರಸ್ತೆ ಸಂಚಾರ ಸ್ಥಗಿತ

Spread the love

ಮಂಗಳೂರು: ಕುಲಶೇಖರ-ಕಣ್ವಗುಡ್ಡೆ ಸಂಪರ್ಕಿಸುವ ಪರ್ಯಾಯ ರಸ್ತೆಯಲ್ಲಿ ಮರಳು ಲಾರಿಯೊಂದು ರಸ್ತೆ ಬದಿಯ ಇಳಿಜಾರಿಗೆ ವಾಲಿ ಸಿಲುಕಿದ್ದರ ಪರಿಣಾಮ ಕಣ್ವಗುಡ್ಡೆ ಸಂಪರ್ಕಿಸುವ ರಸ್ತೆ ಸಂಚಾರ ಮತ್ತೆ ಸ್ಥಗಿತವಾಗಿದೆ.

1-lorry-accident 2-lorry-accident-001 3-lorry-accident-002

ವಾರದ ಹಿಂದಷ್ಟೇ ಇಲ್ಲಿನ ಪ್ರಮುಖ ರಸ್ತೆಯ ಮಧ್ಯಭಾಗದ ಸೇತುವೆ ಕುಸಿದ ಪರಿಣಾಮ ವಾಹನಗಳು ಈ ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಆದರೆ ಇದೀಗ ಮರಳು ಲಾರಿಯೊಂದು ಈ ರಸ್ತೆ ಬದಿಯ ಇಳಿಜಾರಿಗೆ ವಾಲಿ ಸಿಲುಕಿದ್ದು ಮತ್ತೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಈ ರಸ್ತೆಯ ಕೆಳಭಾಗದಲ್ಲಿ ಅನೇಕ ಮನೆಗಳಿದ್ದು ಲಾರಿ ಬಿದ್ದಿದ್ದರೆ ದೊಡ್ಡ ಪ್ರಮಾಣದ ಅವಘಡ ಸಂಭವಿಸುವ ಸಾಧ್ಯತೆಯಿತ್ತು ಎನ್ನಲಾಗಿದೆ.

ಸ್ಥಳೀಯರು ಹೇಳುವ ಪ್ರಕಾರ, ಈ ಪರ್ಯಾಯ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಲು ಸಾಧ್ಯವಿಲ್ಲದ್ದರೂ ಸಂಚರಿಸುತ್ತಿವೆ. ಈ ಬಗ್ಗೆ ಕಾರ್ಪೋರೇಟರ್ ಪ್ರಕಾಶ್ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಪ್ರಮುಖ ರಸ್ತೆಯಲ್ಲಿ ಸೇತುವೆ ತುಂಡಾಗಿ ತಿಂಗಳು ಸಮೀಪಿಸಿದರೂ ಕಾಮಗಾರಿ ಮುಗಿದಿಲ್ಲ. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೇ ಪರದಾಡುವಂತಾಗಿದ್ದು ಜನರ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿ ಕೊಳ್ಳುತ್ತಾರೆ.


Spread the love