ಉಡುಪಿ: ಪಂಚಾಯತ್ ರಾಜ್ ವ್ಯವಸ್ಥೆಗೆ  ನೇರ ಅನುದಾನ ಬಿಡುಗಡೆಗೊಳಿಸುವ ಚಿಂತನೆ  ದಿ. ರಾಜೀವ ಗಾಂಧಿಯವರದ್ದು : ಆಸ್ಕರ್ ಫೆರ್ನಾಂಡಿಸ್

 

ಉಡುಪಿ: ಪಕ್ಷದ ಬಲವರ್ಧನೆಯಿಲ್ಲ್ಲದೆ ಉತ್ತಮ ಫಲಿತಾಂಶ  ಬರಲಾರದು ಜನರ ನೇರ ಸಂಪರ್ಕ  ಹಾಗೂ ಮುಖಂಡತ್ವ ಹೊರಹೊಮ್ಮಲು ಗ್ರಾಮಪಂಚಾಯತ್ ಪ್ರೇರಣೆಯಾಗಿದೆ, ಗ್ರಾಮೀಣ ಅಭಿವೃದ್ದಿಯಾಗಲು ಪಂಚಾಯತ್ ರಾಜ್  ವ್ಯವಸ್ಥೆಗೆ 73 ನೇ ತಿದ್ದುಪಡಿ ತರುವುದರ ಮೂಲಕ ನೇರ ಅನುದಾನದ ಬಿಡುಗಡೆಗೊಳ್ಳಲು ಮಾಜಿ ಪ್ರಧಾನಿ ದಿ. ರಾಜೀವಗಾಂಧಿಯವರು ಕಾರಣೀಭೂತರಾಗಿದ್ದಾರೆ.  ಈ ಹಿನ್ನೆಲೆಯಲ್ಲಿ  ದೇಶ ಇಂದು ಸಮಗ್ರ ಅಭಿವೃದ್ಧಿ   ಹೊಂದಲು ಕಾರಣವಾಗಿದೆ. ಇಂದಿರಾ ಗಾಂಧಿಯವರು ಬಡತನ ನಿರ್ಮೂಲನಕ್ಕಾಗಿ  ಗರೀಬಿ ಹಠಾವೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ ಸೋನೀಯಾ ಗಾಂಧಿಯವರು  ಹಸಿವು ಮುಕ್ತ ಭಾರತದ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದಾರೆ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ  ಸ್ಪರ್ಧಿಸಿದ ಮತ್ತು ವಿಜೇತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

cong

ಕರ್ನಾಟಕ ರಾಜ್ಯದ  ಉನ್ನತ ಶಿಕ್ಷಣ ಹಾಗೂ  ಪ್ರವಾಸೋದ್ಯಮ ಸಚಿವರಾದ ಆರ್. ವಿ ದೇಶ್ ಪಾಂಡೆಯವರು ಮಾತನಾಡಿ ಪಕ್ಷದ  ಶಕ್ತಿಯೆಂದರೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ  ಸಾಮಾಜಿಕ ನ್ಯಾಯದÀಲ್ಲಿ  ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು ನಾಡಹಿತ , ಜನಹಿತವನ್ನು ಗಮನದಲ್ಲಿಟ್ಟುಕೊಂಡು  ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಿಂದಲೇ ಪಕ್ಷದ ಸಂಘಟನೆ ಬೆಳೆಯುವಂತೆ  ಕಾರ್ಯೋನ್ಮುಖರಾಗಿ  ಎಂದು ನೂತನ ಸದಸ್ಯರಿಗೆ  ಶುಭ ಹಾರೈಸಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ ಸತತವಾಗಿ  ಜನ ಸಂಪರ್ಕ ಹೊಂದಿದ ಅಭ್ಯರ್ಥಿಗಳು ಈ ಬಾರಿ ವಿಜಯಗಳಿಸಿದ್ದಾರೆ. ಪಂಚಾಯತಿಗೆ ನೇರವಾಗಿ ಬರುವ ಅನುದಾನಗಳನ್ನು ಕ್ರಿಯಾಯೋಜನೆ ಮೂಲಕ  ಕಾರ್ಯಗತಗೊಳಿಸಬೇಕೆಂದರು.

ಶಾಸಕ ಪ್ರಮೋದ್ ಮಧ್ವರಾಜ್ ರವರು  ಮಾತನಾಡುತ್ತಾ ಸೋಲು ಗೆಲುವು ಪ್ರಜಾ ಪ್ರಭುತ್ವದ  ವೈಶಿಷ್ಟ್ಯ ಜನರ ಸಮಸ್ಯೆಯ  ಸ್ಪಷ್ಟ ಅರಿವು  ಇರುವುದು ಗ್ರಾಮ ಪಂಚಾಯತ್ ಸದಸ್ಯರಿಗೆ ಮಾತ್ರ  ಸೋಲೆ ಮುಂದಿನ ಗೆಲುವಿನ ಸೋಪಾನ ಎಂದು ಪರಿಗಣಿಸಿ ಸೋತವರು ಮನೆಂiÀiಲ್ಲಿ ಕುಳಿತುಕೊಳ್ಳದೆ ಜನತೆಯ ಸಂಪರ್ಕವನ್ನು ನಿರಂತರ ಬೆಳೆಸಬೇಕೆಂದರು.

ಈ ಸಂದರ್ಭದಲ್ಲಿ  ವಿಧಾನ ಪರಿಷತ್ ಸದಸ್ಯರಾದ  ಪ್ರತಾಪ್ ಚಂದ್ರ ಶೆಟ್ಟಿ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜನಾರ್ಧನ ತೋನ್ಸೆ  , ಕೆಎಸ್ ಡಿಲ್ ನಿಗಮದ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋ , ನಗರಸಭಾ ಅಧ್ಯಕ್ಷರಾದ ಪಿ. ಯುವರಾಜ್ , ಸೇವಾದಳದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು , ನಗರಸಭಾ ಉಪಾಧ್ಯಕ್ಷರಾದ ಅಮೃತ ಕೃಷ್ಣಮೂರ್ತಿ , ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಮಲ್ಲಿಕಾ ಬಾಲಕೃಷ್ಣ, ಮಲ್ಲಿಕಾ ಅಶೋಕ್ ,  ಗೋಪಿ ನಾಯ್ಕ , ಯುವ ಕಾಂಗ್ರೆಸ್ ಅಧ್ಯಕ್ಷರಾದ  ವಿಕಾಸ್ ಶೆಟ್ಟಿ, ಪಕ್ಷದ ಮುಖಂಡರುಗಳಾದ ಬಿರ್ತಿ ರಾಜೇಶ್ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯರಾದ ದಿನೇಶ್ ಪುತ್ರನ್  , ಸತೀಶ್ ಅಮೀನ್ , ಎಸ್ ನಾರಾಯಣ ,  ಡಾ. ಸುನೀತಾ ಡಿ ಶೆಟ್ಟಿ , ಕೇಶವ್ ಕುಮಾರ್ , ನಿತ್ಯಾನಂದ ಶೆಟ್ಟಿ ಹಾರಾಡಿ  , ಗಣೇಶ್ ನೆರ್ಗಿ ,  ಬಿ ನರಸಿಂಹ ಮೂರ್ತಿ  , ಮನೋಜ್ ಕರ್ಕೇರ , ಪ್ರಕಾಶ್ ಎಂ. ಕೊಡವೂರು , ಸುಜಯ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಕೀರ್ತಿಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ರಮೇಶ್ ಕಾಂಚನ್, ನಾರಾಯಣ ಕುಂದರ್, ಸೆಲಿನಾ ಕರ್ಕಡ , ಶೋಭ ಕಕ್ಕುಂಜೆ , ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್ , ಶಶಿರಾಜ್ ಕುಂದರ್, ವಿಜಯ ಪೂಜಾರಿ, ಲತಾ ಆನಂದ ಸೇರಿಗಾರ   ಮೊದಲಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಕೆ. ಜನಾರ್ಧನ ಭಂಡಾರ್ ಕಾರ್, ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್  ಕಾಂಗ್ರೆಸ್ ವಕ್ತಾರ  ಭಾಸ್ಕರ್ ರಾವ್ ಕಿದಿಯೂರು  ವಂದಿಸಿದರು.

Leave a Reply