ಉಡುಪಿ: ಪ್ರತ್ಯೇಕ ಅಫಘಾತ ಪ್ರಕರಣ ; ಎರಡು ಸಾವು

ಉಡುಪಿ: ಪ್ರತ್ಯೇಕ ಅಫಘಾತ ಪ್ರಕರಣಗಳಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಕಾಪು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಮೊದಲ ಪ್ರಕರಣದಲ್ಲಿ ಮೆಸ್ಕಾಂ ಉದ್ಯೋಗಿ ಸಂತೋಶ್ ಪೂಜಾರಿ (40) ಎಂಬವರು ಉದ್ಯಾವರದಿಂದ ಕಟಪಾಡಿ ಕಡೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಆಸ್ಪತ್ರೆಗೆ ಸಾಗುತ್ತಿದ್ದ ವೇಳೆ ಮೃತಪಟ್ಟಿದ್ದಾರೆ

ಇನ್ನೋಂದು ಪ್ರಕರಣದಲ್ಲಿ ಶಾಹಿದಾ ಎಂಬ ಮಹಿಳೆಯ ದ್ವಿಚಕ್ರ ವಾಹನಕ್ಕೆ ನಾಯಿಯೊಂದು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ವಾಹನ ರಸ್ತೆಯ ತಡೆಗೊಡೆಗೆ ಡಿಕ್ಕಿ ಹೊಡೆದ ಪರಿಣಾಮ ತೀವೃ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ

ಎರಡು ಅಫಘಾತ ಪ್ರಕರಣಗಳು ಕಾಪು ಠಾಣೆಯಲ್ಲಿ ದಾಖಲಾಗಿವೆ.

Leave a Reply