ಉಡುಪಿ: ಮತಗಟ್ಟೆ ಅಧಿಕಾರಿಗಳ ಹೆಸರು ಬದಲಾವಣೆ- ಅಮಾನತ್ತು

ಉಡುಪಿ: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ 2016 ಗೆ ಸಂಬಂಧಿಸಿ ಹೊರಡಿಸಲಾದ ಮತಗಟ್ಟೆ ಅಧಿಕಾರಿಗಳ ನೇಮಕಾತಿ ಆದೇಶದಲ್ಲಿನ ಹೆಸರನ್ನು ಜಿಲ್ಲಾಧಿಕಾರಿಗಳ ಪೂರ್ವಾನುಮತಿಯಿಲ್ಲದೆ , 30 ಸಿಬ್ಬಂದಿಗಳ ಪಟ್ಟಿಯನ್ನು ಬದಲಾಯಿಸಿ ಬೇರೆ ಅಧಿಕಾರಿಗಳ ಹೆಸರನ್ನು ಅಂಟಿಸಿರುವ , ರಾಮ ಕೆ, ಪ್ರಥಮ ದರ್ಜೆ ಸಹಾಯಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಡುಪಿ ವಲಯ ಇವರನ್ನು ಸರಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ದುರುಪಯೋಗಪಡಿಸಿರುವ ಬಗ್ಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ, ಸದ್ರಿ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಸದರಿ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿದ್ದಾರೆ.

Leave a Reply

Please enter your comment!
Please enter your name here