ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಸಮುದ್ರ ಪಾಲು

ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹಾರಕ್ಕೆ ಬಂದ ಪಾಂಡಿಚೇರಿ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಬೆಂಗಳೂರಿನ ವಿಪ್ರೋ ಇಂಡಿಯಾ ಕಂಪೆನಿಯ ಉದ್ಯೋಗಿ ವಿವೇಕಾನಂದ (26) ಎಂದು ಗುರುತಿಸಲಾಗಿದೆ.
ವಿವೇಕಾನಂದ ಅವರು ತನ್ನ ಇತರ ನಾಲ್ವರು ಗೆಳೆಯರೊಂದಿಗೆ ತಮ್ಮ ಉಡುಪಿಯಲ್ಲಿರುವ ಸಹೋದ್ಯೋಗಿಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದು, ಶನಿವಾರ ಸಂಜೆ ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಸುತ್ತಾಡಲು ತೆರಳಿದ್ದರು. ವಿವೇಕಾನಂದ ಮತ್ತು ಅವರ ಇನ್ನೋರ್ವ ಗೆಳೆಯ ಮಣಿಕಂಠನ್ ಅವರು ಬಂಡೆಯ ಮೇಲೆ ಕುಳಿತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ಇಬ್ಬರೂ ನೀರು ಪಾಲಾಗಿದ್ದು, ಮಣಿಕಂಠನ್ ಈಜಿ ದಡ ಸೇರಿದ್ದು, ವಿವೇಕಾನಂದ ಈಜು ಬಾರದೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋದರು ಎನ್ನಲಾಗಿದೆ.
ಘಟನೆಯ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply