ಉಡುಪಿ: ಮಹಿಳೆಗೆ ವರದಕ್ಷಿಣೆ ಕಿರುಕುಳ: ದೂರು ದಾಖಲು

ಉಡುಪಿ: ಮಹಿಳೆಯೋರ್ವರು ತನ್ನ ಪತಿ, ಅತ್ತೆ ಸೋದರತ್ತೆಯ ವಿರುದ್ದ ವರದಕ್ಷಿಣೆ ಕಿರುಕುಳದ ದೂರನ್ನು ಉಡುಪಿ ನಗರ ಠಾಣೆಯಲ್ಲಿ ದಾಖಲಿಸಿದ್ದಾರೆ.

ಚಿಟ್ಪಾಡಿ ನಿವಾಸಿ ಡಾ||ಅಪೇಕ್ಷಾ ಡಿ. ರಾವ್‌ (31) ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರನ್ನು ಕಾನೂನುಬದ್ದವಾಗಿ ದಿನಾಂಕ:31/05/2013 ರಂದು ಉಡುಪಿ ಶ್ಯಾಮಿಲಿ ಸಭಾಭವನದಲ್ಲಿ ಜಾತಿ ಪದ್ಧತಿಯಂತೆ ಮದುವೆಯಾಗಿದ್ದು, ಮದುವೆಯ ಮುಂಚೆ ದಿನಾಂಕ:16/12/2012 ರಂದು 5,00,000 ರೂಪಾಯಿ ಕೊಡುವಂತೆ ಅಭಿಷೇಕ್ ಒತ್ತಾಯಿಸಿದ್ದು ಆದರೆ ಡಾ ಅಪೇಕ್ಷಾ ತವರು ಮನೆಯವರು 3 ಲಕ್ಷ ಹಣವನ್ನು ಮಾತ್ರ ನೀಡಿರುತ್ತಾರೆ, ಮದುವೆಯ ಬಳಿಕ ಅಪೇಕ್ಷಾ ತನ್ನ ಗಂಡನೊಂದಿಗೆ ಸೊದರತ್ತೆ ನೀನಾರಾವ್‌ರವರ ಜೊತೆಯಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು ಬಳಿಕ ಉತ್ತರಪ್ರದೇಶದ ಝಾನ್ಸಿಯಲ್ಲಿ ಅಪೇಕ್ಷಾ ಗಂಡನ ವಸತಿ ಗೃಹದಲ್ಲಿ ವಾಸ್ತವ್ಯವಿದ್ದರು.ಸದ್ರಿ ಸಮಯ ಅಭಿಷೇಕ್ ಆರ್ ಚಂದಾವರ್ಕರ್, ಅತ್ತೆ ಪ್ರಿಯಾ ಆರ್ ಚಂದಾವರ್ಕರ್ ಹಾಗೂ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರ ಸೋದರತ್ತೆ ನೀನಾ ರಾವ್‌ರವರು ಸೇರಿಕೊಂಡು, ಅಪೇಕ್ಷಾರವರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದುದ್ದಲ್ಲದೇ, ತಿರಸ್ಕಾರದಿಂದ ನೋಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದುದ್ದಾಗಿದೆ ಅಲ್ಲದೇ ಮಾರ್ಚ್ ತಿಂಗಳ 2014 ರಂದು ಆರೋಪಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರು ಅಪೇಕ್ಷಾರ ಮನೆಗೆ ಬಂದು ಅಪೇಕ್ಷಾ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ವರದಕ್ಷಿಣೆ ಬೇಡಿಕೆಯನ್ನು ಪುನರುಚ್ಚರಿಸಿ ಹೋಗಿದ್ದಾರೆ. 2015ರ ಮಾರ್ಚ್ ತಿಂಗಳಿನಲ್ಲಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ ಡಾ ಅಪೇಕ್ಷಾರವರಿಗೆ ವಿವಾಹ ವಿಚ್ಛೇದನದ ನೋಟೀಸ್ ಕಳುಹಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ
ಉಡುಪಿ ನಗರ ಠಾಣಾ ಪೋಲಿಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Leave a Reply