ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಕೈ ಜೋಡಿಸಲು ಡಾ. ಮೋಹನ್ ಆಳ್ವ ಕರೆ

ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಕೈ ಜೋಡಿಸಲು ಡಾ. ಮೋಹನ್ ಆಳ್ವ ಕರೆ

ಮಂಗಳೂರು: ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಜೀವನ ಮೌಲ್ಯಗಳು ಬಹಳ ಬೇಗ ಅರ್ಥವಾಗುತ್ತಿರುವುದರಿಂದಲೇ ಮಾತೃಭಾಷೆಗೆ ಪ್ರಾಮುಖ್ಯ ಕೊಡಲಾಗುತ್ತಿದೆ. ಹೆತ್ತವರು, ಶಿಕ್ಷಕರು ಪ್ರೋತ್ಸಾಹಿಸಿ ಮಕ್ಕಳನ್ನು ವಿಶಿಷ್ಟ ಶ್ರೇಣಿಗೆ ತರಬೇತುಗೊಳಿಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.

ಅವರು ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಯ ಉನ್ನತಿಗೆ ಇಚ್ಛಾಶಕ್ತಿಯ ಕೊರತೆಯಾಗದಂತೆ ಹೆತ್ತವರು, ಶಿಕ್ಷಕರು ಪ್ರೋತ್ಸಾಹಿಸಿ ಎಲ್ಲಾ ಮಕ್ಕಳನ್ನು ತರಬೇತುಗೊಳಿಸುವಲ್ಲಿ ಕೈಜೋಡಿಸಬೇಕೆಂದರು.

img_0875_resize-mhon-allva

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಜ್ರನಾಭ ಶೆಟ್ಟಿ, ಫರಂಗಿಪೇಟೆ ಚರ್ಚ್ ಧರ್ಮಗುರು ಜೆರಾಲ್ಡ್ ಲೋಬೊ, ಫರಂಗಿಪೇಟೆ ಜುಮ್ಮಾ ಮಸೀದಿಯ ಧರ್ಮಗುರು ಜನಾಬ್ ಹಾಜಿ ಅಬೂಬಕ್ಕರ್ ದಾರಿಮಿ, ಶತಮಾನೋತ್ಸವ ಸಮಿತಿಯ ಝಫುಲ್ಲಾ ಒಡೆಯರ್ ಅರ್ಕುಳ, ರಾಮದಾಸ್ ಕೋಟ್ಯಾನ್, ಸುಂದರ ಶೆಟ್ಟಿ ಕಲ್ಲತಡಮೆ, ಯೂಸುಫ್, ಎ.ಡಿ.ಹೆಗ್ಡೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಕುಮಾರ ಕುಂಪಣ ಮಜಲು ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ್ ಶೇಖ ಸ್ವಾಗತಿಸಿದರು. ಶಾಲಾ ಸಂಚಾಲಕ ಎ.ಗೋವಿಂದ ಶೆಣೈ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಕೆ.ಆರ್.ದೇವದಾಸ್ ವಂದಿಸಿದರು.

Leave a Reply