ಕಾಂಗ್ರೆಸಿಗರು ಜನಪರ ಸರಕಾರ ನೀಡುವಲ್ಲಿ ಮುತುವರ್ಜಿ ವಹಿಸಲಿ: ದ.ಕ ಜಿಲ್ಲಾ ಬಿಜೆಪಿ

Spread the love

ಕಾಂಗ್ರೆಸಿಗರು ಜನಪರ ಸರಕಾರ ನೀಡುವಲ್ಲಿ ಮುತುವರ್ಜಿ ವಹಿಸಲಿ: ದ.ಕ ಜಿಲ್ಲಾ ಬಿಜೆಪಿ

ಮಂಗಳೂರು : ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರವನ್ನು ಹೀಯಾಳಿಸುವುದರ ಬದಲಿಗೆ ರಾಜ್ಯದಲ್ಲಿ ಜನಪರ ಸರಕಾರವನ್ನು ಕಾಂಗ್ರೆಸಿಗರು ನೀಡಲಿ, ಇಲ್ಲವಾದಲ್ಲಿ ರಾಜ್ಯದ ಜನರಿಗೆ ಮೋಸ ಮಾಡಿರುವ ಸರಕಾರ ಈ ಎಲ್ಲಾ ಸಮಸ್ಯೆಗಳಿಗೆ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆಯನ್ನು ನೀಡಿ ನ್ಯಾಯ ಒದಗಿಸಲಿ ದ.ಕ ಜಿಲ್ಲಾ ಬಿಜೆಪಿ ವಕ್ತಾರರಾದ ಜಿತೇಂದ್ರ ಎಸ್.ಕೊಟ್ಟಾರಿ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸಿಗರು ಪ್ರತಿ ಬಾರಿ ಪತ್ರಿಕಾಗೋಷ್ಠಿಯ ಮೂಲಕ ಬಿಜೆಪಿಯನ್ನು ಮತ್ತು ಸಂಘುಪರಿವಾರವನ್ನು ದೂಷಿಸುವುದು ರೂಢಿಯಾಗಿದೆಯೇ ಹೊರತು ರಾಜ್ಯದಲ್ಲಿ ಜನಪರ ಆಡಳಿತವನ್ನು ನೀಡಿ, ಪ್ರಜಾಪ್ರಭುತ್ವದ ನೆಲೆಗಟ್ಟನಲ್ಲಿ ಸ್ವಚ್ಚ ಸರಕಾರವನ್ನು ನೀಡುವ ಜವಾಬ್ದಾರಿಯನ್ನೇ ಮರೆತಿದ್ದಾರೆ. ಇತ್ತೀಚೆಗೆ ಕೇಂದ್ರದ ಮತ್ತು ರಾಜ್ಯದ ಯಾವುದೇ ಕಾಂಗ್ರೆಸ್ ನಾಯಕರು ಜಿಲ್ಲೆಗೆ ಭೇಟಿ ಕೊಟ್ಟಾಗ ಜಿಲ್ಲೆಯ ನಾಯಕರೊಂದಿಗೆ ಪತ್ರಿಕಾಗೋಷ್ಠಿ ಕರೆಯುವುದು ಇದೊಂದು ಪ್ರಚಾರದ ತಂತ್ರ ಮತ್ತು ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚುವುದಕೋಸ್ಕರ ಮಾಡುವ ವ್ಯವಸ್ಥೆಯಾಗಿದೆ.

  ಕಾಂಗ್ರೆಸ್‍ನ ರಾಷ್ಠೀಯ ಪ್ರಧಾನ ಕಾರ್ಯದರ್ಶಿಯಾದ  ಬಿ.ಕೆ.ಹರಿಪ್ರಸಾದರು ಕರೆದ ಪತ್ರಿಕಾಗೋಷ್ಠಿಯಲ್ಲಿ  ಶಾಂತಿ,ಸೌಹಾರ್ದತೆಗೆ ಹೆಸರಾಗಿರುವ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಹೇಳಿಕೆ ನೀಡಿರುವುದು ಕರ್ನಾಟಕ ರಾಜ್ಯದ ಸಿದ್ದರಾಮಯ್ಯರ ನೇತ್ರತ್ವದ ಕಾಂಗ್ರೆಸಿನ ಸರಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಅದೇ ಪಕ್ಷದ ಹಿರಿಯ ನಾಯಕರಿಂದಲೇ ತಿಳಿಯುವಂತದ್ದು ಈ ರಾಜ್ಯದ ಜನರ ದುರ್ದೈವವಾಗಿದೆ ಮತ್ತು ಪೆÇಲೀಸ್ ವ್ಯವಸ್ಥೆಯ ಮುಖಾಂತರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗೃಹ ಇಲಾಖೆ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

  ಸ್ವಾತಂತ್ರ ಹೋರಾಟದಲ್ಲಿ ಬಲಿದಾನಗೈದ ವೀರರಾಣಿ ಅಬ್ಬಕ್ಕನ ನಾಡಿನಲ್ಲಿ ತನ್ನದೇ ಪಕ್ಷದ ಶಾಸಕರನ್ನು ಹೊಂದಿರುವ ಕಾಂಗ್ರೆಸು ಪಕ್ಷ ಅಬ್ಬಕ್ಕನ ಬಲಿದಾನವನ್ನು ದೇಶಕ್ಕೆ ಪರಿಚಯಿಸುವ ಪ್ರಯತ್ನವನ್ನು ಬಿಟ್ಟು, ಸ್ಮಾರಕ ನಿರ್ಮಾಣ ಮಾಡುವ ಬಗ್ಗೆಯೂ ಪ್ರಯತ್ನಿಸಿರಲಿಲ್ಲ. ಭಾರತೀಂiÀi ಜನತಾ ಪಾರ್ಟಿ ಅಬ್ಬಕ್ಕನಿಗೆ ಗೌರವ ಸೂಚಿಸುವುದಕೋಸ್ಕರ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಯಡಿಯೂರಪ್ಪರ ನೇತ್ರತ್ವದಲ್ಲಿ 25ಲಕ್ಷ ಅನುದಾನದೊಂದಿಗೆ ರಾಣಿ ಅಬ್ಬಕ್ಕನ ಸಮಿತಿಯನ್ನು ಪೆÇ್ರೀತ್ಸಾಯಿಸಿರುವುದು ಶ್ಲಾಘನೀಯ. ದೇಶದ 70ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾŒರವರು ರಾಣಿ ಅಬ್ಬಕ್ಕನ ಬಲಿದಾನವನ್ನು ದೇಶಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅದಕೋಸ್ಕರ ರಾಣಿ ಅಬ್ಬಕ್ಕನ ವಿಚಾರದಲ್ಲಿ ರಾಜಕೀಯ ಮಾಡುವ ನೈತಿಕ ಹಕ್ಕು ಕಾಂಗ್ರೆಸಿಗರಿಗಿಲ್ಲ.

   ರಾಷ್ಟ್ರ ವಿರೋಧಿ ಮತ್ತು ದೇಶದ ರಕ್ಷಣಾ ಸಚಿವರ ಹೇಳಿಕೆಯ ವಿರುದ್ಧ ಪಾಕಿಸ್ತಾನದ ಪರವಾಗಿ ಹೇಳಿಕೆಯನ್ನು ಕೊಟ್ಟು, ಪರಶುರಾಮನ ನಾಡು ದ.ಕ ಜಿಲ್ಲೆಯನ್ನು ನರಕಕ್ಕೆ ಹೋಲಿಸಿದ, ಇತಿಹಾಸದ ಜ್ಞಾನವೇ ಇಲ್ಲದ, ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸಿನ ಮಾಜಿ ಸಂಸದೆ ರಮ್ಯಾರವರು ನೀಡಿದ ಹೇಳಿಕೆಯಿಂದ ಆಕ್ರೋಶಿತರಾಗಿ ಮಂಗಳೂರಿನ ಜನತೆ ತಕ್ಕ ಉತ್ತರವನ್ನು ನೀಡಿದ್ದಾರೆ ಮತ್ತು ಬಿಜೆಪಿಯು ಕೂಡ ಕರಿಪತಾಕೆ ಪ್ರದರ್ಶನದ ಮೂಲಕ ತಮ್ಮ ವಿರೋದವನ್ನು ತೋರಿಸಿದೆ. ಮಂಗಳೂರಿಗರ ಸ್ಥಿತಿ ಚೆನ್ನಾಗಿರುವುದರಿಂದಲೇ ಈ ಹೇಳಿಕೆಯ ವಿರುದ್ಧ ಇಂತಹ ಉತ್ತರವನ್ನು ನೀಡಿರುತ್ತಾರೆಯೇ ಹೊರತು ಕಾಂಗ್ರೆಸಿಗರ ಹಾಗೆ ದೇಶ ವಿರೋದಿ ಹೇಳಿಕೆಗಳನ್ನು ಸಮರ್ಥಿಸುವಷ್ಟು ಕೆಲ ಮಟ್ಟಕ್ಕೆ ಇಳಿದಿಲ್ಲ.

  ಎ.ಓ.ಹ್ಯೂಮ್ ರಂತಹ ಬ್ರಿಟೀಷ್ ಅಧಿಕಾರಿ ಸ್ಥಾಪಿಸಿದ ಮತ್ತು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್‍ನ ಹೆಸರಲ್ಲಿ ಸ್ವಾತಂತ್ರ್ಯ ಪಡೆದ  ತಕ್ಷಣ ಕಾಂಗ್ರೆಸನ್ನು ವಿಸರ್ಜಿಸಿ ಎಂದು ಮಹಾತ್ಮಗಾಂಧೀಜಿಯ ಮಾತುಗಳನ್ನು ದಿಕ್ಕರಿಸಿ, ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ ಕಳೆದ 70ವರ್ಷಗಳಿಂದ ಈ ದೇಶದಲ್ಲಿ ತುಷ್ಟೀಕರಣದ ರಾಜಕೀಯವನ್ನು ಮಾಡುವ ಕಾಂಗ್ರೆಸಿಗರಿಂದ ಇತಿಹಾಸವನ್ನು ತಿಳಿಯುವ ಅಗತ್ಯ ಈ ದೇಶದ ಜನರಿಗಿಲ್ಲ.

   ಸಂಘಪರಿವಾರ ಸ್ವಾತಂತ್ರ್ಯದ  ಹೋರಾಟದಲ್ಲಿ ತೊಡಗಿರುವುದನ್ನು ಕಾಂಗ್ರೆಸಿನ ನಾಯಕರು ಇತಿಹಾಸದ ಪುಟಗಳಲ್ಲಿ ತಿಳಿಯುವುದೇ ಸೂಕ್ತ ಹೊರತು ಇನ್ಯಾವುದರಿಂದಲ್ಲ. ಕಳೆದ 60 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಮಾಡಲಾಗದ ಬದಲಾವಣೆಯನ್ನು ಕೇವಲ 2ವರ್ಷಗಳಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರು ಸಾದಿಸಿರುವುದನ್ನು ಜೀರ್ಣಿಸಿಕೊಳ್ಳಾಲಾಗದೆ ಹತಾಶರಾಗಿರುವ ಕಾಂಗ್ರೆಸಿಗರಿಗೆ ಕಾಂಗ್ರೆಸ್ ಮುಕ್ತ ಭಾರತವಾಗುವುದೆಂಬ ಭಯ ಆವರಿಸಿದೆ.

   ಬಿಜೆಪಿಯ ನಾಯಕರು ಪಾಕಿಸ್ತಾನಕ್ಕೆ ಕೇವಲ ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಹೋಗಿದ್ದಾರೆಯೇ ಹೊರತು, ಕಾಂಗ್ರೆಸ ನಾಯಕರುಗಳಾದ ಮಣಿಶಂಕರ್ ಅಯ್ಯರ್, ಸಲ್ಮಾನ್ ಖುರ್ಷಿದ್ ರಂತವರು ಭಾರತದ ಪ್ರಧಾನಿಯ ವಿರುದ್ಧ ಪಾಕಿಸ್ತಾನಕ್ಕೆ ದುರುಕೊಟ್ಟಿರುವುದು  ನಾಚಿಕೆಗೇಡಾಗಿದೆ.

 ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುವ ಗೋ ಸಾಗಟವನ್ನ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದ ಗೋಹತ್ಯಾ ನಿಷೇದ ಕಾಯಿದೆಯನ್ನು ರದ್ದು ಮಾಡಿ ಅಕ್ರಮವಾಗಿ ಗೋ ಸಾಗಟ ಮಾಡುವ ಸಮಾಜ ಬಾಹಿರ ವ್ಯಕ್ತಿಗಳನ್ನು ಬೆಂಬಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಈ ವಿಚಾರದಲ್ಲಿ ಹೇಳಿಕೆ ಕೊಡುವ ನೈತಿಕ ಹಕ್ಕು ಇರುವುದಿಲ್ಲ.

  ಕಾವೇರಿ ಮತ್ತು ಮಹಾದಾಯಿ ನದಿಯ ಅಂತರಾಜ್ಯ ಸಮಸ್ಯೆಗಳ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಲಯದಲ್ಲಿ ಕರ್ನಾಟಕ ರಾಜ್ಯದ ಸಮಸ್ಯೆಯ ಬಗ್ಗೆ ಸರಿಯಾದ ರೀತಿಯಲ್ಲಿ ಅಫಿಡವಿತ್ ನೀಡಿ ಮನವರಿಕೆ ಮಾಡಲು ವಿಫಲವಾಗಿರುವುದು, ರಾಜ್ಯ ಎದುರಿಸುವ ಈಗಿನ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಿದೆ ಎಂದಿದ್ದಾರೆ.

 


Spread the love