ಕಾರ್ಕಳ: ರಸ್ತೆ ಅಫಘಾತಕ್ಕೆ ನ್ಯಾಯವಾದಿ ಬಲಿ

ಕಾರ್ಕಳ: ನಲ್ಲೂರು ಪರಪ್ಪಾಡಿ ಸಮೀಪ ಹೋಂಡಾ ಆಕ್ಟೀವಾ ಮತ್ತು ಸ್ಕಾರ್ಪಿಯೋ ನಡುವೆ ರವಿವಾರ ಸಂಭವಿಸಿದ ಅಫಘಾತದಲ್ಲಿ ಬೆಳ್ತಂಗಡಿ ಪಡಂಗಡಿ ನಿವಾಸಿಯಾದ ನ್ಯಾಯವಾದಿ ಪ್ರಶಾಂತ್ ಶೆಟ್ಟಿ (50) ಮೃತಪಟ್ಟಿದ್ದಾರೆ.
ಪ್ರಶಾಂತ್ ಶೆಟ್ಟಿಯವರು ರವಿವಾರ ತನ್ನ ಮಗ ಪ್ರಜ್ವತ್ ಜೊತೆಗೆ ಮಿಯಾರು ಕಂಬಳ ವೀಕ್ಷಿಸಿ ವಾಪಾಸಾಗುತ್ತಿದ್ದು, ಲಾರಿಯನ್ನು ಒವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಫಘಾತ ಸಂಭವಿಸಿದೆ. ಘಟನೆಯಲ್ಲಿ ಪ್ರಜ್ವತ್ ಕೂಡ ಗಾಯಗೊಂಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply