ಕಾಶ್ಮೀರದ ಉರಿ ಪ್ರದೇಶದಲ್ಲಿ ಭಯೋತ್ಪಾದಕ ಕೃತ್ಯ ದಕ ಬಿಜೆಪಿ ಖಂಡನೆ

ಕಾಶ್ಮೀರದ ಉರಿ ಪ್ರದೇಶದಲ್ಲಿ ಭಯೋತ್ಪಾದಕ ಕೃತ್ಯ ದಕ ಬಿಜೆಪಿ ಖಂಡನೆ

ಮಂಗಳೂರು: ಕಾಶ್ಮೀರದ ಉರಿ ಎಂಬ ಪ್ರದೇಶದಲ್ಲಿ ಸೆ.18 ರಂದು ಪಾಕಿಸ್ತಾನದ ಭಯೋತ್ಪಾದಕರು ಸೇನಾ ಕಾರ್ಯಾಲಯದ ಮೇಲೆ ಧಾಳಿ ಮಾಡಿ 18 ಯೋಧರನ್ನು ಕೊಂದು ಹಲವಾರು ಯೋಧರಿಗೆ ತೀವ್ರ ತರದ ಗಾಯಗೊಳಿಸಿದ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ, ದ.ಕ ಜಿಲ್ಲೆ ಗಂಭೀರವಾಗಿ ಪರಿಗಣಿಸಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಸರಕಾರ ಮತ್ತು ಉಗ್ರಗಾಮಿಗಳ ಉಪಟಳ ಕಾಶ್ಮೀರದ ಗಡಿಯಲ್ಲಿ ಮತ್ತು ಭಾರತದ ನೆಲದಲ್ಲಿ ನಿರಂತರವಾಗಿ ನಡೆಯುತ್ತಾ ಇದೆ. ಇದಕ್ಕೆ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಅಲ್ಲಿಯ ಮಿಲಿಟ್ರಿ ನೇರ ಹೊಣೆಯಾಗಿದೆ. ಹಲವಾರು ವರ್ಷಗಳಿಂದ ನಿರಂತರವಾಗಿ ಭಾರತದ ಜನರ ಮತ್ತು ಇನ್ನಿತರ ಪ್ರದೇಶದಲ್ಲಿ ಯೋಧರ ಮೇಲೆ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದಂತಹ ಉಗ್ರಗಾಮಿಗಳಿಗೆ ಮತ್ತು ಪಾಕಿಸ್ತಾನಕ್ಕೆ ಸ್ಪಷ್ಟ ಉತ್ತರವನ್ನು ಭಾರತದ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಬಿಜೆಪಿ ಒತ್ತಾಯಿಸುತ್ತದೆ.

ಸೆ.18ರಂದು ಉರಿಯಲ್ಲಿ ನಡೆದ ಘಟನೆಯನ್ನು ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿ ಖಂಡಾ ತುಂಡವಾಗಿ ಖಂಡಿಸುತ್ತದೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ರವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Leave a Reply

Please enter your comment!
Please enter your name here