ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಂಪ್ಯೂmರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಮೂಹದ ವಾರ್ಷಿಕೋತ್ಸವ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಂಪ್ಯೂmರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಮೂಹ TRICS (Tribune of Computer Saviours)  ನ 5ನೇ ವಾರ್ಷಿಕೋತ್ಸವ ಹಾಗೂ ಹೊಸ ಕಾರ್ಯಗಾರಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

moodlakatte

ಕಾರ್ಯಕ್ರಮದ ಮುಖ್ಯ ಅಥಿತಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಜ್ಯೋತಿ ಕೆ.ವಿ., ಸಿಸ್ಟಮ್ ಇಂಜಿನಿಯರ್, ಇನ್ಪೋಸಿಸ್, ಪುಣೆ ಇವರು ಆಗಮಿಸಿದ್ದರು.  ವಿದ್ಯಾರ್ಥಿಗಳಿಗೆ ಐ.ಟಿ. ಕಂಪನಿಯ ವಾತಾವರಣದ ಬಗ್ಗೆ ಹಾಗೂ ಹೊಸ ತಂತ್ರಜ್ಞಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ನೀಡಿದರು.  ಅಂದಿನ ಪ್ರಭಾರ ಪ್ರಾಂಶುಪಾಲರಾದ ಡಾ| ರಾಜೇಶ ಎನ್. ಹೆಗಡೆಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪ್ಯೂmರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಮೆಲ್ವಿನ್ ಡಿಸೋಜಾ ವಹಿಸಿದ್ದರು.

ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ನವೀನ್ ಬಿ.ಎಮ್. ಉಪಸ್ಥಿತರಿದ್ದರು.  TRICS ನ ಅಧ್ಯಕ್ಷ ಐವನ್ (7ನೇ ಸೆಮಿಸ್ಟರ್, ಕಂಪ್ಯೂmರ್ ಸೈನ್ಸ್) ಕಾರ್ಯಕ್ರಮದ ಅತಿಥಿಗಳಿಗೆ ಸ್ವಾಗತ ಕೋರಿದರು.  ಕೀರ್ತನಾ (7ನೇ ಸೆಮಿಸ್ಟರ್, ಕಂಪ್ಯೂmರ್ ಸೈನ್ಸ್) ವಂದಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಸಾನಿಯಾ (7ನೇ ಸೆಮಿಸ್ಟರ್, ಕಂಪ್ಯೂmರ್ ಸೈನ್ಸ್) ರವರು ಮಾಡಿದರು.

Leave a Reply