ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ – ಗೃಹ ಸಚಿವ ಪರಮೇಶ್ವರ್

ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ – ಗೃಹ ಸಚಿವ ಪರಮೇಶ್ವರ್

ಮಂಗಳೂರು: ಗೋ ರಕ್ಷಣೆಯ ಹೆಸರಿನಲ್ಲಿ ದೇಶದಾದ್ಯಂತ ಹಲ್ಲೆ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದ ಇದಕ್ಕೆ ಕೊನೆ ಹಾಡಬೇಕಾದರೆ ಕೇಂದ್ರ ಸರಕಾರವೇ ಒಂದು ಸ್ಪಷ್ಟ ಕಾನೂನು ತಂದರೆ ಉತ್ತಮ ಎಂದು ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಂಗಳೂರಿನಲ್ಲಿ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

home-minister-Dr-G-Parameshwer (9)-01 drparameshwar-mangaluru-20160826 prameshwar-minister-20160826

ಪ್ರಧಾನಿ ಮೋದಿಯವರು ಗೋರಕ್ಷಕರ ಹೆಸರಿನಲ್ಲಿ ದಾಂಧಲೆ ನಡೆಸುವವರ ದಾಖಲೆ ಸಂಗ್ರಹಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದ ಬಳಿಕೂ ಕರಾವಳಿಯಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕೊಲೆ ನಡೆದಿದ್ದು, ಕಾನೂನು ತನ್ನದೆ ಆದ ಕ್ರಮ ಕೈಗೊಳ್ಳಲಿದೆ. ಯಾರಿಗೂ ಕಾನೂನು ಮುರಿಯಲು ಸಾಧ್ಯವಿಲ್ಲ ಎಂದರು.

ಕರಾವಳಿಯ ಯುವಕರು ಐಸಿಎಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆಂತರಿಕ ಭದ್ರತಾ ವಿಭಾಗವು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂಘಟನೆಗಳು ಐಸಿಸ್ ನೇಮಕಾತಿಗೆ ಯುವಕರನ್ನು ಕರೆದೊಯ್ಯುತ್ತಿದ್ದಾರೆಂಬ ನಿಖರ ಮಾಹಿತಿ ದೊರಕಿದ್ದಲ್ಲಿ ಅಂತಹ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೋಲಿಸರ ವೇತನ ಪರಿಷ್ಕರಣೆ ಕುರಿತಂತೆ ಸಮಿತಿ ಮಾಡಲಾಗಿದ್ದು, ಸಮಿತಿಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಡರ್ಲಿ ವ್ಯವಸ್ಥೆಯನ್ನು ತೆಗೆದು ಹಾಕಲು ತಾನು ಬದ್ಧನಿದ್ದು ಆ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ತೆಗೆಯಬೇಕೆಂದರೆ ಹಿರಿಯ ಅಧಿಕಾರಿಗಳಿಗೆ ಸಹಾಯಕರನ್ನು ಒದಗಿಸಬೇಕು. ಅದಕ್ಕಾಗಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ಸಹಾಯಕ ಸಿಬಂಧಿಗಳನ್ನು ಒದಗಿಸುವ ಕುರಿತು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ರಮ್ಯಾ ವಿರುದ್ದ ನಡೆದ ಪ್ರತಿಭಟನೆಯ ಕುರಿತ ಮಾತನಾಡಿದ ಸಚಿವರು ಇಂತಹ ಪ್ರತಿಭಟನೆಗಳು ನಡೆಯುತ್ತಾ ಇರುತ್ತವೆ ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ಜೀವನದಲ್ಲಿ ಇರುವವರು ಹೆದರಿ ಕೂರಲು ಸಾಧ್ಯವಿಲ್ಲ. ಕೆಲವೊಮ್ಮೆ ಬೇಕೆಂದೇ ಈ ರೀತಿಯ ವಾತಾವರಣ ಸೃಷ್ಟಿಸಲಾಗುತ್ತದೆ. ಮಂಗಳೂರಿನ ಜನ ಆತಿಥ್ಯಕ್ಕೆ ಹೆಸರಾದವರು ಮಂಗಳೂರಿನ ಜನ ಒಳ್ಳೆಯವುರ ಬೆಂಗಳೂರಿಗೆ ಪರ್ಯಾಯವಾಗಿರುವ ನಗರ ಮಂಗಳೂರು. ಇಂತಹ ಸಣ್ಣ ಪುಟ್ಟ ಘಟನೆಗಳು ಮಂಗಳೂರಿಗೆ ಹೊಂದಾಣಿಕೆ ಆಗುವುದಿಲ್ಲ ಎಂದರು.

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ಸತ್ಯಾಸತ್ಯತೆ ತನಿಖೆ ಮೂಲಕ ಹೊರಗೆ ಬರಲಿ. ಇಲಾಖೆಯಿಂದ ವಿಳಂಬ, ಸಾಕ್ಷ್ಯ ನಾಶ ಮಾಡಿದರೆ ಅದು ಹೊರ ಬರುವುದು ನಾವು ಸಿಐಡಿಗೆ ಕೊಟ್ಟಿದ್ದೇವೆ ಎಂದರು.

Leave a Reply

Please enter your comment!
Please enter your name here