ಜೂನ್ 19 ರಿಂದ 25  ಗೋವಾದ ರಾಮನಾಥಿಯಲ್ಲಿ ಹಿಂದೂ ಅಧಿವೇಶನ

ಹಿಂದೂ ಸಂಘಟನೆಯ ಹಾಗೂ ಹಿಂದೂ ರಾಷ್ಟ್ರದ ಅವಶ್ಯಕತೆ !

ಸ್ವಾತಂತ್ರ್ಯಪೂರ್ವದಲ್ಲಿ ಪ್ರಥಮ ಬಾರಿ ಮಂಡಿಸಿದ ಹಿಂದೂ ರಾಷ್ಟ್ರದ ಸಂಕಲ್ಪನೆಯು ಮುಂದೆ ಸ್ವಾತಂತ್ರ್ಯದನಂತರ ಕಾಂಗ್ರೆಸ್ಸಿನ ಜಾತ್ಯತೀತ ರಾಜ್ಯ ಪದ್ಧತಿಯಲ್ಲಿ ಕರಗಿ ಹೋಯಿತು. ಏಕೆಂದರೆ ಕಾಂಗ್ರೆಸ್ ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಹಾಗೂ ಅದರೊಂದಿಗೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ಭಾರತ ದೇಶದಿಂದ ಸಂಪೂರ್ಣ ಉಚ್ಚಾಟನೆ ಮಾಡುವ ಎಂಬ ಒಂದೇ ಧ್ಯೇಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರಿಂದ ಹಿಂದೂ ರಾಷ್ಟ್ರವೆಂಬ ಶಬ್ದವನ್ನು ಉಚ್ಚರಿಸುವುದೆಂದರೆ ರಾಷ್ಟ್ರದ್ರೋಹವೇ ಆಗುತ್ತದೆ, ಎಂಬ ಹಿಂದೂದ್ವೇಷಿ ಸ್ಥಿತಿಯು ರಾಜಕೀಯ ಹಾಗೂ ಸಾಮಾಜಿಕ ಸ್ತರದಲ್ಲಿ ನಿರ್ಮಾಣಗೊಳಿಸಲಾಯಿತು. ಆದರೂ ಸನಾತನ ಸಂಸ್ಥೆಯು 10-15 ವರ್ಷಗಳ ಹಿಂದೆ ಹಿಂದೂ ರಾಷ್ಟ್ರ ಸ್ಥಾಪನೆಯ ಘೋಷಣೆ ಮಾಡಿತು. ಸನಾತನವು ಹೀಗೆ ಕೇವಲ ಘೋಷಣೆ ಮಾಡಿಸುಮ್ಮನಾಗದೇ, ದೇಶದ ಹಿಂದೂಗಳಲ್ಲಿ ಧರ್ಮ ಹಾಗೂ ರಾಷ್ಟ್ರ ಪ್ರೇಮವನ್ನು ನಿರ್ಮಿಸಲು ರಭಸದಿಂದ ಕಾರ್ಯವನ್ನು ಆರಂಭಿಸಿತು. ಜೂನ್ 19 ರಿಂದ 25 ಜೂನ್ 2016 ಈ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ನೆರವೇರಲಿಕ್ಕಿರುವ 5 ನೇ ಅಖಿಲ ಭಾರತೀಯ ಹಿಂದೂ ಅಧಿವೇಶನವು ಅದರದ್ದೇ ಪರಿಣಾಮವಾಗಿದೆ. ದೇಶದಾದ್ಯಂತದ ಹಿಂದೂಗಳ ವಿವಿಧ ಸಂಘಟನೆಗಳು ಹಾಗೂ ಹಿಂದೂ ಧರ್ಮದಲ್ಲಿನ ಸಂಪ್ರದಾಯಗಳ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಲಿಕ್ಕಿದ್ದಾರೆ. ಹಿಂದೂ ರಾಷ್ಟ್ರವೆಂದರೆ, ರಾಜಕಾರಣವಲ್ಲ, ಅದು ಜೀವನಪದ್ಧತಿಯಾಗಿದೆ. ಈ ಹಿಂದೂ ರಾಷ್ಟ್ರ ಸ್ಥಾಪನೆಯಿಂದಲೇ ಮಾನವನ ಕಲ್ಯಾಣವಾಗಲಿಕ್ಕಿದೆ. ಈ ಲೇಖನದ ಮೂಲಕ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ ಏಕಿದೆ, ಎಂಬುದರ ವಿಚಾರಮಂಥನ ಮಾಡಲಾಗಿದೆ.
ಅಸುರಕ್ಷಿತ ಹಿಂದೂ !
ನಿನ್ನೆಯ ವರೆಗೆ ನೇಪಾಳವು ಜಗತ್ತಿನ ಏಕೈಕ ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿತ್ತು; ಆದರೆ ದುರ್ದೈವದಿಂದ ಸಾಮ್ಯವಾದಿಗಳು ಈ ಹಿಂದೂ ರಾಷ್ಟ್ರವನ್ನು ನುಂಗಿದರು. ಆದ್ದರಿಂದ ಹಿಂದೂಗಳಿಗೆ ತಮ್ಮ ಸ್ವಂತದ್ದೆಂದು ಒಂದೂ ರಾಷ್ಟ್ರವೂ ಪೃಥ್ವಿಯ ಮೇಲಿಲ್ಲ. ಭಾರತದಲ್ಲಿ ಹಿಂದೂ ಬಹುಸಂಖ್ಯಾತರಿದ್ದರೂ, ಸ್ವಾತಂತ್ರ್ಯದನಂತರ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಹಿಂದೂ ರಾಷ್ಟ್ರದಿಂದ ವಂಚಿತರನ್ನಾಗಿ ಮಾಡಲಾಯಿತು. ತದ್ವಿರುದ್ಧ ಜಗತ್ತಿನಲ್ಲಿ ಕ್ರೈಸ್ತರ 157, ಮುಸಲ್ಮಾನರ 52, ಬೌದ್ಧರ 12 ಹಾಗೂ ಜ್ಯೂಗಳ 1 ರಾಷ್ಟ್ರವಿದೆ; ಆದರೆ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವೂ ಇಲ್ಲ. ಒಂದು ರೀತಿಯಲ್ಲಿ ಹಿಂದೂಗಳು ಜಗತ್ತಿನಲ್ಲಿ ಅನಾಥರಾಗಿದ್ದಾರೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ರಾಜ್ಯವ್ಯವಸ್ಥೆ ಮತ್ತು ಸಮಾಜವ್ಯವಸ್ಥೆಗೆ ಹಿಂದೂ ಹಿತವು ಪ್ರಾಧಾನ್ಯತೆಯ ವಿಷಯವಲ್ಲ; ಆದ್ದರಿಂದ ಹಿಂದೂ ಬಹುಸಂಖ್ಯಾತರಾಗಿದ್ದರೂ ಅವರು ಒಂದು ರೀತಿಯಲ್ಲಿ ಭಾರತದಲ್ಲಿ ಆಶ್ರಯ ಪಡೆದಿರುವ ಹಾಗೆ ಅನುಭವಿಸುತ್ತಿದ್ದಾರೆ, ಎಂದು ಹೇಳಿದರೆ ತಪ್ಪಾಗಲಾರದು. ಇದರ ಪರಿಣಾಮವೆಂದು ಇಂದು ಹಿಂದೂಗಳ ಸ್ಥಿತಿ ದಯನೀಯವಾಗಿದೆ. ಹಿಂದೂಗಳ ಈ ದುರವಸ್ಥೆಯನ್ನು ಭಾರತದ ಜಾತ್ಯತೀತ ಸರಕಾರಿ ವ್ಯವಸ್ಥೆಯಿಂದ ಬದಲಾಯಿಸಲು ಸಾಧ್ಯವಿಲ್ಲವೆಂಬುದನ್ನು ಗಮನಿಸಬೇಕು. ಹಿಂದೂಗಳ ಸ್ಥಿತಿಯನ್ನು ಸುಧಾರಿಸಲು ಹಾಗೂ ಭಾರತ ಎದುರಿಸುತ್ತಿರುವ ಅಂತರ್ಬಾಹ್ಯ ಸಮಸ್ಯೆಗಳನ್ನು ನಿವಾರಿಸಲು ಹಿಂದೂ ರಾಷ್ಟ್ರದ ಅವಶ್ಯಕತೆ ಏಕಿದೆ, ಎಂಬುದನ್ನು ನೋಡೋಣ.
1 ಅ. ಜಾತ್ಯತೀತ ಸರಕಾರಿ ವ್ಯವಸ್ಥೆಯಲ್ಲಿ ಹಿಂದೂಗಳ ದುರವಸ್ಥೆ: ಇತ್ತೀಚೆಗೆ ಜಾತ್ಯತೀತ ರಾಜ್ಯದ ವೈಭವೀಕರಣ ನಡೆದಿದೆ. ಭಾರತದಲ್ಲಿ ಕಳೆದ 68 ವರ್ಷಗಳ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷವು ಹಿಂದೂಗಳ ಪ್ರಶ್ನೆಗಳನ್ನು ನಿವಾರಿಸುವುದಂತೂ ದೂರದ ಮಾತು; ಅದನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನವೂ ಆಗಿಲ್ಲ. ಗಲಭೆಕೋರ ಮತಾಂಧರಿಂದ ಹಿಂದೂಗಳ ಮೇಲೆ ನಿರಂತರ ಆಕ್ರಮಣವಾಗುತ್ತಲೇ ಇದೆ. ಲವ್ ಜಿಹಾದ್‍ನಿಂದ ಹಿಂದೂ ಹುಡುಗಿಯರ ಜೀವನ ಧ್ವಂಸವಾಗುತ್ತಿದೆ. ಹಿಂದೂಗಳ ರಕ್ಷಣೆಯ ವಿಚಾರ ಮಾಡಿದರೆ, ಸಾಮಾನ್ಯ ಹಿಂದೂಗಳಿಗೆ ಯಾರೂ ರಕ್ಷಕರಿಲ್ಲ. ಗೋಮಾತೆಯನ್ನು ಹಾಡುಹಗಲೇ ಹತ್ಯೆ ಮಾಡಲಾಗುತ್ತಿದೆ. ಹಿಂದೂಗಳ ದೇವಸ್ಥಾನಗಳನ್ನು ಸರಕಾರ ವಶಪಡಿಸಿಕೊಳ್ಳುತ್ತಿದೆ ಹಾಗೂ ಅದರ ಹಣವನ್ನು ಅಲ್ಪಸಂಖ್ಯಾತರಿಗಾಗಿ ಉಪಯೋಗಿಸುತ್ತಿದೆ. ಬೆಲೆ ಏರಿಕೆಯಿಂದ, ಬರಗಾಲದಿಂದ ಜನರು ತತ್ತರಿಸಿದ್ದಾರೆ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಕಾನೂನು, ಧೋರಣೆ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಅಭಾವ ಇತ್ಯಾದಿಗಳಿಂದ ಈ ಜಾತ್ಯತೀತ ಸರಕಾರದ ಆಡಳಿತದಲ್ಲಿ ಜಿಹಾದಿ, ಭ್ರಷ್ಟಾಚಾರಿ, ಬಲಾತ್ಕಾರಿ ಮುಂತಾದವರು ಸುಖವಾಗಿ ಬಾಳುತ್ತಿದ್ದಾರೆಂದಾದರೆ, ಇಂತಹ ರಾಜ್ಯವು ನಿಜವಾದ ಹಿಂದೂಹಿತವನ್ನು ಸಾಧಿಸಲು ಸಾಧ್ಯವಿದೆಯೇ? ಅಂತರ್‍ರಾಷ್ಟ್ರೀಯ ಕಂಪನಿಗಳು, ಹಿಂದೂಯೇತರರ ನಿಯಂತ್ರಣದಲ್ಲಿರುವ ದೂರಚಿತ್ರವಾಹಿನಿಗಳು, ಕಾನ್ವೆಂಟ್ ಶಾಲೆಗಳು, ಜಾತ್ಯತೀತ ಶಿಕ್ಷಣಪದ್ಧತಿ ಇತ್ಯಾದಿಗಳಿಂದಾಗಿ ಜನ್ಮಹಿಂದೂ ಆಗಿದ್ದು ಮನಸ್ಸಿನಿಂದ ಮತ್ತು ಆಚರಣೆಯಿಂದ ಇತರ ಪಂಥೀಯ ಅಥವಾ ಅಧರ್ಮಿಯಾಗಿದ್ದಾನೆ.
1 ಅ 1. ಕಾಶ್ಮೀರಿಗಳ ಪುನರ್ವಸತಿಯ ಸಮಸ್ಯೆ ಮಿತಿ ಮೀರಿದೆ : ಕಾಶ್ಮೀರದಿಂದ ನಿರಾಶ್ರಿತರಾದ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿಗಾಗಿ ನೀಡಲ್ಪಡುವ ವಸತಿಯ ಜಾಗವನ್ನು ಮುಸಲ್ಮಾನರಿಗೂ ನೀಡಲಾಗುವುದು. ಕಾಶ್ಮೀರದಲ್ಲಿನ ಹೆಚ್ಚಿನ ಸ್ಥಳೀಯ ಮುಸಲ್ಮಾನರು ಪಾಕಿಸ್ತಾನಪ್ರೇಮಿಗಳಾಗಿದ್ದಾರೆ ಹಾಗೂ ಉಗ್ರವಾದಿಗಳು ಅವರ ಸಹಾಯದಿಂದಲೇ ಕಾಶ್ಮೀರದಿಂದ ಹಿಂದೂಗಳನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ. ಹೀಗಿರುವಾಗ ಕಾಶ್ಮೀರಿ ಪಂಡಿತರ ಪುನರ್ವಸತಿ ಇರುವ ವಸತಿಗಳಲ್ಲಿ ಮುಸಲ್ಮಾನರಿಗೂ ಜಾಗ ನೀಡುವುದೆಂದರೆ ಉಗ್ರವಾದಿಗಳ ದೌರ್ಜನ್ಯವನ್ನು ಅನುಭವಿಸಿದ ಕಾಶ್ಮೀರಿ ಪಂಡಿತರಿಗೆ ಅತ್ಯಂತ ದುಃಖದಾಯಕ ಹಾಗೂ ಅಸುರಕ್ಷಿತೆಯದ್ದಾಗಿದೆ. ಇಂತಹ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳನ್ನು ಸಮರ್ಥಿಸುವ ಪಿಡಿಪಿ ಪಕ್ಷಕ್ಕೆ ಬೆಂಬಲ ನೀಡಿ ಭಾಜಪವು ಈ ಪಕ್ಷವನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗದ್ದುಗೆಯನ್ನು ನೀಡಿದೆ. ಆದ್ದರಿಂದ ಕಾಶ್ಮೀರಿ ಪಂಡಿತರ ಘರ್‍ವಾಪಸಿಯ ಆಶೆ ನಿರಾಶೆಯಾಗಿದೆ; ಆದ್ದರಿಂದ ಕಾಶ್ಮೀರಿ ಹಿಂದೂ ಪಂಡಿತರ ಕಾಶ್ಮೀರದಲ್ಲಿನ ಪುನರ್ವಸತಿಗಾಗಿ ಈಗ ಹಿಂದೂ ರಾಷ್ಟ್ರ ಸ್ಥಾಪನೆಯೇ ಆವಶ್ಯಕವಾಗಿದೆ.
1 ಅ 2. ಹಿಂದೂಗಳ ನೇತಾರರು ಅಸುರಕ್ಷಿತ: ಹಿಂದೂಬಹುಸಂಖ್ಯಾತರಿರುವ ಭಾರತದಲ್ಲಿ ಇಷ್ಟರವರೆಗೆ 127ಹಿಂದೂ ನೇತಾರರನ್ನು ಮತಾಂಧರು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅನೇಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರನ್ನು ಗಾಯಗೊಳಿಸಿದ್ದಾರೆ. ಎಲ್ಲಿ ಹಿಂದೂಗಳ ನೇತಾರರ ಹತ್ಯೆಯಾಗುತ್ತಿರುವಾಗ ಇತರ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು, ಎಂಬುದು ಅರಿವಾಗಬಹುದು. ಈ ಹತ್ಯೆಗಳ ಮಾಲಿಕೆ ಇಂದು ಸಹ ಮುಂದುವರಿದಿದೆ. ಪೂರ್ವಾಂಚಲ, ದಕ್ಷಿಣ ಭಾರತದಲ್ಲಿ ಹಿಂದೂ ನೇತಾರರು ಅಲ್ಲಿನ ಸ್ಥಳೀಯ ಆಡಳಿತದ ವಿರುದ್ಧ ಹೋಗಿ ಹಿಂದೂಗಳ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು.
2. ಐಸಿಸ್‍ನ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ಹಿಂದೂರಾಷ್ಟ್ರ : ಜಾಗತಿಕ ಮಟ್ಟದಲ್ಲಿ ಇಂದು ಸಿರಿಯಾದಲ್ಲಿನ ಅತ್ಯಂತ ಕ್ರೂರಿ ಇಸ್ಲಾಮೀ ಉಗ್ರವಾದಿ ಸಂಘಟನೆಯಾಗಿರುವ ಐಸಿಸ್ ಭಯಭೀತ ವಾತಾವರಣವನ್ನು ನಿರ್ಮಾಣ ಮಾಡಿದೆ. ಒಂದೊಂದೇ ರಾಷ್ಟ್ರವನ್ನು ವಶಪಡಿಸಿಕೊಂಡು ಜಗತ್ತಿನಲ್ಲಿ ಇಸ್ಲಾಮೀ ಆಡಳಿತವನ್ನು ಸ್ಥಾಪಿಸುವ ಈ ಸಂಘಟನೆಯ ಉದ್ದೇಶವಿದೆ. ಅದಕ್ಕಾಗಿ ಈ ಸಂಘಟನೆಯು ಒಂದೊಂದೇ ರಾಷ್ಟ್ರದ ಮೇಲೆ ಆಕ್ರಮಣ ಮಾಡಿ ಆ ರಾಷ್ಟ್ರವನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಾಲೂರಿದೆ. ಇತ್ತೀಚೆಗಷ್ಟೇ ಈ ಸಂಘಟನೆಯು ಭಾರತದಲ್ಲಿ ಮೊದಲು ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗುವುದು, ಎಂದು ಎಚ್ಚರಿಕೆ ನೀಡಿದೆ. ಅಮಾಯಕರ ಕತ್ತು ಸೀಳುವ ಹಾಗೂ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವ ಐಸಿಸ್‍ನಂತಹ ಉಗ್ರವಾದಿ ಸಂಘಟನೆಯಿಂದ ಹಿಂದೂಗಳನ್ನು ರಕ್ಷಿಸಲು ಹಾಗೂ ಹಿಂದೂಗಳನ್ನು ಈ ಸಂಘಟನೆಯ ವಿರುದ್ಧ ಹೋರಾಡಲು ಅವರ ಮಾನಸಿಕ ಹಾಗೂ ಶಾರೀರಿಕ ಬಲವನ್ನು ಹೆಚ್ಚಿಸಲು ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಆವಶ್ಯಕವಾಗಿದೆ. ಸದ್ಯ ಅಧಿಕಾರದಲ್ಲಿರುವ ನೇತಾರರಿಂದ ಹಿಂದೂಗಳ ಅಪೇಕ್ಷೆ ಇದೆ; ಆದರೆ ಪ್ರತ್ಯಕ್ಷವಾಗಿ ನೋಡಿದರೆ ಹಿಂದೂಗಳಿಗೆ ನಿರಾಶೆಯೇ ಕಾಣಿಸುತ್ತಿದೆ. ಏಕೆಂದರೆ ಈ ಸರಕಾರಕ್ಕೆ ಜಾತ್ಯತೀತ ವ್ಯವಸ್ಥೆ ಇರುವ ಭಾರತೀಯ ರಾಜ್ಯವೇ ಬೇಕಾಗಿದೆ. ಹಿಂದೂ ರಾಷ್ಟ್ರವೆಂಬ ವಿಷಯವೇ ಅವರ ಲೆಕ್ಕಾಚಾರದಲ್ಲಿ ಬರುವುದಿಲ್ಲ.
3. ಹಿಂದೂ ರಾಷ್ಟ್ರವು ಜಾತ್ಯತೀತವಲ್ಲ, ಧರ್ಮಾಧಿಷ್ಠಿತವಾಗಿರುವುದು!: ಭಾರತದಲ್ಲಿನ ರಾಜ್ಯಪದ್ಧತಿ ಹಾಗೂ ಕಾನೂನು ಪದ್ಧತಿಯು ಅಲ್ಪಸಂಖ್ಯಾತರಿಗಾಗಿ ವಿಶೇಷವಾಗಿ ಮುಸಲ್ಮಾನರು ಮತ್ತು ಕ್ರೈಸ್ತರಿಗೆ ಮಹಾಮಾರ್ಗವನ್ನು ಮಾಡಿಕೊಡುವುದಾಗಿದೆ, ಹಾಗೂ ಹಿಂದೂಗಳೊಂದಿಗೆ ಮಲತಾಯಿ ಧೋರಣೆಯಿಂದ ವರ್ತಿಸುವುದಾಗಿದೆ. ಆದ್ದರಿಂದ ಹಿಂದೂಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಅಸುರಕ್ಷಿತವೆನಿಸುತ್ತಿದೆ. ಸ್ವಾತಂತ್ರ್ಯದಿಂದ ಇಂದಿನ ವರೆಗೆ ಹಿಂದೂಗಳಿಗೆ ನೀಡಿದ ನಿರಂತರ ಅವಮಾನಾಸ್ಪದ ವರ್ತನೆಯಿಂದ ಈ ದೇಶದಲ್ಲಿ ಹಿಂದೂಗಳು ಮಾನಸಿಕವಾಗಿ ದುರ್ಬಲರಾಗಿದ್ದಾರೆ. ಅವರ ಶ್ರದ್ಧಾಸ್ಥಾನಗಳ ಮೇಲೆ ನಿರಂತರ ಆಘಾತ ಮಾಡಿ ಒಂದು ರೀತಿಯಲ್ಲಿ ಅವರಲ್ಲಿನ ಧಾರ್ಮಿಕತೆಯ ಹತ್ಯೆ ಮಾಡಲಾಗಿದೆ; ಆದರೆ ಅದರೊಂದಿಗೇ ಇತರ ಧರ್ಮದವರ ಶ್ರದ್ಧಾಸ್ಥಾನಗಳಿಗೆ ಅಪಾರ ಗೌರವ ತೋರಿಸಲಾಗುತ್ತಿದೆ. ಆದ್ದರಿಂದ ಸಹಜವಾಗಿಯೇ ಹಿಂದೂಗಳನ್ನು ಬಿಟ್ಟು ಇತರ ಪಂಥೀಯರು ಸಂಘಟಿತರಾಗಿದ್ದಾರೆ, ಆದರೆ ಹಿಂದೂಗಳು ಹಂಚಿಹೋಗಿದ್ದಾರೆ. ಕಾಂಗ್ರೆಸ್ಸಿನ ಜಾತ್ಯತೀತ ರಾಜ್ಯಪದ್ಧತಿಯ ಷಡ್ಯಂತ್ರಕ್ಕೆ ಹಿಂದೂಗಳು ಬಲಿಯಾಗಿದ್ದಾರೆ. ಆದ್ದರಿಂದ ತಮ್ಮ ದೇಶದಲ್ಲಿಯೇ ಹಿಂದೂಗಳ ಮನಸ್ಸಿನಲ್ಲಿ ಪರಕೀಯರಂತಹ ಭಾವನೆ ಹೆಚ್ಚುತ್ತಾ ಇದೆ. ಅಖಿಲ ಮನುಕುಲದ ಕಲ್ಯಾಣ ಮಾಡುವ ಕ್ಷಮತೆ ಇರುವ ಹಿಂದೂ ಧರ್ಮಗ್ರಂಥ, ವೇದ, ಉಪನಿಷತ್ತುಗಳ ಉತ್ತರಾಧಿಕಾರಿಯಾಗಿರುವ ಈ ಭಾರತದೇಶವು ಜಾತ್ಯತೀತ ರಾಜ್ಯಪದ್ಧತಿಯಿಂದಾಗಿ ಅವನತಿಯ ಮಾರ್ಗದಲ್ಲಿದೆ. ಆದ್ದರಿಂದ ದೇಶದ ಹಾಗೂ ಹಿಂದೂಗಳ ಉತ್ಕರ್ಷಕ್ಕಾಗಿ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಂತ ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದ ಸಂಕಲ್ಪನೆಯೆಂದರೆ ರಾಜಕಾರಣವಲ್ಲ, ಅದು ಧರ್ಮಾಧಿಷ್ಠಿತ ಹಾಗೂ ರಾಷ್ಟ್ರನಿಷ್ಠ ಜೀವನವನ್ನು ನಡೆಸುವ ಒಂದು ಪ್ರಗಲ್ಭ ಸಂಸ್ಕೃತಿ ಮತ್ತು ವ್ಯವಸ್ಥೆಯಾಗಿರುವುದು. ಮಾನವ, ಪಶು, ಪಕಿ, ಕೀಟಗಳು, ಇರುವೆಗಳು, ಮರಗಿಡಗಳು ಹಾಗೂ ಬಳ್ಳಿಗಳಿಂದ ಹಿಡಿದು ಸೂಕಾತಿಸೂಕ್ಷ್ಮ ಜೀವಗಳ ಉದ್ಧಾರದ ವಿಚಾರ ಮಾಡುವ ಒಂದು ಈಶ್ವರಸಂಕಲ್ಪಿತ ಸಾಮಾಜಿಕ ವ್ಯವಸ್ಥೆ ಆಗಿರುವುದು; ಅದಲ್ಲದೆ ಸಮೃದ್ಧ ರಾಷ್ಟ್ರಕ್ಕಾಗಿ ಜನರು ಸುಖಿಗಳಾಗಿ ಕೇವಲ ಆರ್ಥಿಕ ವಿಕಾಸ ಸಾಕಾಗದು, ಜೀವನವನ್ನು ವ್ಯಾಪಿಸುವ ಎಲ್ಲ ಅಂಗಗಳ ವಿಕಾಸವಾಗುವುದು ಆವಶ್ಯಕವಾಗಿರುತ್ತದೆ. ಧರ್ಮವು ಜೀವನದ ಸರ್ವಾಂಗವನ್ನು ವ್ಯಾಪಿಸಿರುವುದರಿಂದ ರಾಷ್ಟ್ರವು ಜಾತ್ಯತೀತವಲ್ಲ, ಧರ್ಮಾಧಿಷ್ಠಿತವಾಗಿರುವುದೇ ಆವಶ್ಯಕವಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತವಾಗಿಯೇ ಇರುವುದು!

Leave a Reply

Please enter your comment!
Please enter your name here