ಜುಲೈ 2 ಮತ್ತು 3 ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

ಉದ್ಯೋಗಾಕಾಂಕ್ಷಿಗಳಿಗೊಂದು ಆಹ್ವಾನ ಜುಲೈ 2 ಮತ್ತು 3 ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಆಳ್ವಾಸ್ ಎಜುಕೇಶನ್ ಫೌಂಡೇಷನ್ `ಪ್ರಗತಿ’-2016 ಉದ್ಯೋಗಮೇಳವನ್ನು ಆಯೋಜಿಸಿದೆ. ಈ ಮೂಲಕ ಉದ್ಯೋಗದಾತರಿಗೆ ಮತ್ತು ನಿರುದ್ಯೋಗಿಗಳಿಗೆ ಒಂದು ಅತ್ಯದ್ಭುತ ವೇದಿಕೆ ಕಲ್ಪಿಸುತ್ತಿದೆ. ಇಬ್ಬರನ್ನೂ ಬೆಸೆಯುವ ಕೊಂಡಿಯಂತೆ ಕೆಲಸ ಮಾಡಲು ಮುಂದಾಗಿದೆ.

ಈ ಬಾರಿ ಅನೇಕ ದಿಗ್ಗಜ ಕಂಪನಿಗಳು, ಪ್ರತಿಭಾನ್ವಿತ ಅಭ್ಯರ್ಥಿಗಳ ಆಯ್ಕೆಗಾಗಿ `ಪ್ರಗತಿ’ 2016 ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಐಬಿಎಂ, ಅಮೆಜಾನ್, ಬಯೋಕಾನ್, ಅದಾನಿ ಗ್ರೂಫ್, ಐಸಿಐಸಿಐ, ತಾಜ್ ಗ್ರೂಫ್ ಟಿವಿಎಸ್.. ಸೇರಿದಂತೆ 400ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಲಿವೆ.

ಬ್ಯಾಂಕಿಂಗ್, ಸೇಲ್ಸ್ ಅಂಡ್ ಮಾರ್ಕೆಟಿಂಗ್, ಹೋಟೆಲ್ ಮ್ಯಾನೇಜ್‍ಮೆಂಟ್, ನರ್ಸಿಂಗ್, ಐಟಿ, ಬಿಟಿ ಹೀಗೆ ಹಲವು ಕೇತ್ರಗಳಲ್ಲಿ ಸಾವಿರಾರು ಉದ್ಯೋಗಾವಶಗಳನ್ನು ಈ ಮೇಳ ನಿಮ್ಮ ಮುಂದೆ ತೆರೆದಿಡಲಿದೆ. ಬೆಂಗಳೂರಿನ ಟ್ರಾಫಿಕ್‍ಜಾಮ್, ಜಂಜಡ ಬದುಕಿನಿಂದ ಬೇಸತ್ತ ಉದ್ಯೋಗಾಕಾಂಕ್ಷಿಗಳು, ಜುಲೈ 2 ಮತ್ತು 3 ರಂದು ಕರಾವಳಿಯ ಪ್ರಶಾಂತ ವಾತಾವರಣದಲ್ಲಿ; ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುವ `ಪ್ರಗತಿ’ ಉದ್ಯೋಗಮೇಳಕ್ಕೆ ಹೋಗಿಬರಬಹುದು. ಬೆಂಗಳೂರಿನ ಯುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕಳೆದ ವರ್ಷ ನಡೆದ ಆಳ್ವಾಸ `ಪ್ರಗತಿ’ ಉದ್ಯೋಗ ಮೇಳದಲ್ಲಿ 272ಕ್ಕೂ ಹೆಚ್ಚು ಕಂಪನಿಗಳು 18 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶವನ್ನು ಹೊತ್ತು ತಂದಿದ್ದವು. ಐದೂವರೆ ಸಾವಿರಕ್ಕೂ ಹೆಚ್ಚು ಮಂದಿ ಇದರ ಲಾಭ ಪಡೆದಿದ್ದರು. ಅಲ್ಲದೆ ಕಳೆದ ವರ್ಷ ಆಳ್ವಾಸ್ ಎಜುಕೇಷನ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ  ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿತ್ತು.

ಈ ಬಾರಿಯ ಉದ್ಯೋಗಮೇಳದ ವಿಶೇಷತೆ:

ವಿವಿಧ ಕಂಪನಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಚಿಟvಚಿsಠಿಡಿಚಿgಚಿಣi.ಛಿom ನಲ್ಲಿ ಉಚಿತ (ಆನ್‍ಲೈನ್ ಮೂಲಕವೂ) ನೋಂದಣಿ ಮಾಡಿಕೊಳ್ಳಬಹುದು. ಈ ಮಾಹಿತಿ  ಮೊಬೈಲ್ ಆ್ಯಪ್‍ನಲ್ಲಿ ಸಹ ಲಭ್ಯ ಇದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9611686148/8494934852/9008907716

Email us at: placement.alvas@gmail.com

Leave a Reply