ಡಾ| ರಾಧಕೃಷ್ಣನ್ ಸ್ಮಾರಕ ಸ್ಥಾಪಿಸಲು ಮೋದಿ ಆಗಮನ: ದಕ ಜಿಲ್ಲಾ ಜೆಡಿಎಸ್

161

ಡಾ| ರಾಧಕೃಷ್ಣನ್ ಸ್ಮಾರಕ ಸ್ಥಾಪಿಸಲು ಮೋದಿ ಆಗಮನ: ದಕ ಜಿಲ್ಲಾ ಜೆಡಿಎಸ್

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದು ಕರ್ನಾಟಕದಲ್ಲಿ ಡಾ| ರಾಧಕೃಷ್ಣನ್ ಸ್ಮಾರಕ ಯಾಕೆ ಸ್ಥಾಪಿಸಿಲ್ಲ ಎಂಬ ಹೇಳಿಕೆ ಕೇಂದ್ರದಲ್ಲಿರುವ ಬಿ.ಜೆಪಿ ಪಕ್ಷಕ್ಕೆ ಕೇವಲ ಸ್ಮಾರಕ ಸ್ಥಾಪಿಸುವ ಬಗ್ಗೆ ಆಸಕ್ತಿ ತೋರುತ್ತದೆ ಎಂಬ ಬಗ್ಗೆ ಎದ್ದು ಕಾಣುತ್ತದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟದಕ್ಕೆ ಈ ಜಿಲ್ಲೆಗಳಿಗೆ ಕೇಂದ್ರ ಸರಕಾರ ಏನು ಕೊಟ್ಟಿದೆ ಹಾಗೂ ಮುಂದೆ ಏನು ಕೊಡುತ್ತಿದೆ ಎಂದು ಹೇಳಿಕೆ ನೀಡದೆ ನಿರಾಶೆಯನ್ನು ಉಂಟು ಮಾಡಿದ್ದಾರೆ. ಕರಾವಳಿ ಸಂಸದರ ಬಗ್ಗೆ ಒಂದು ಮಾತನ್ನು ಆಡದೆ ಅವರ ಬಗ್ಗೆ ಜನ ಸಾಮಾನ್ಯರಿಗೆ ಇದ್ದ ಭ್ರಮೆ ನಿರಾಸನೆ ಪ್ರಧಾನ ಮಂತ್ರಿಗೆ ತಿಳಿದಿತ್ತು ಎಂಬ ಸಂಶಯ ಜನ ಸಾಮಾನ್ಯರಲ್ಲಿ ಮೂಡಿದೆ. ಬಡತನ ಕಡಿಮೆಯಾಗಿ ಮಾಧ್ಯಮ ವರ್ಗದ ಜನತೆ ಹೆಚ್ಚಾಗಿದೆ ಎಂಬ ಹೇಳಿಕೆ ಎಷ್ಟು ಸಮಂಜಸ? ಇಡೀ ರಾಷ್ಟ್ರದಲ್ಲಿ ಪ್ರತ್ಯೇಕವಾಗಿ ಈ ಜಿಲ್ಲೆಯಲ್ಲಿ ಉದ್ಯೋಗವಿಲ್ಲದೆ ಬಡ ಜನತೆ, ಮಾಧ್ಯಮ ವರ್ಗದ ಜನತೆ ಬಡತನ ರೇಖೆಗಿಂತ ಪಾತಾಳಕ್ಕೆ ಕುಸಿದಿದ್ದಾರೆ. ಎಂಬುದು ಪ್ರದಾನಿಗಳಿಗೆ ತಿಳಿಯದಿರುವುದು ಖೇದಕರ.

ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ಹರಿದ ಚಪ್ಪಲಿಯನ್ನು ಧರಿಸಿ ರಾಷ್ಟ್ರಪತಿ ಭವನಕ್ಕೆ ಬಂದ ಬಗ್ಗೆ ಹೆಮ್ಮೆ ಪಡುವುದಕ್ಕಿಂತ ಈ ಪ್ರಶಸ್ತಿ ಸ್ವೀಕರಿಸಲು ಬಂದ ರಾಷ್ಟ್ರದ ಬಡ ಜನತೆಯ ಪರಿಸ್ಥಿತಿ ಹೇಗೆ ಇದೆಯೆಂದು ಅರಿಯುವುದು ಸೂಕ್ತ. ಮುಂದಿನ ಐದು ವರುಷಗಳಲ್ಲಿ ನವ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡುವ ಪ್ರಧಾನ ಮಂತ್ರಿಗಳು ಕಳೆದ ಐದು ವರುಷಗಳ ತಮ್ಮ ಅವದಿಯಲ್ಲಿ ಭಾರತದ ಅಂತರಿಕ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದರ ಬಗ್ಗೆ ಚಿಂತನೆ ಮಾಡುವುದು ಸೂಕ್ತ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.