ದುಬಾಯಿಯಲ್ಲಿ 2015 ಆಗಸ್ಟ್ 28 ರಂದು ವಿಜೃಂಬಣೆಯಿಂದ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಪೂಜೆ

ದುಬಾಯಿಯಲ್ಲಿ ಶ್ರೀ ವರ ಮಹಾಲಕ್ಷ್ಮೀ ಸಮಿತಿಯ ಸುಮಂಗಲೆಯರು ಒಟ್ಟು ಸೇರಿ ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಶ್ರೀ ವರಮಹಾಲಕ್ಷ್ಮೀ ಪೂಜೆ ಈ ಬಾರಿ ದುಬಾಯಿ ಗಿಸೆಸ್ ನಲ್ಲಿರುವ ಇಂಡಿಯನ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ 2015 ಆಗಸ್ಟ್ 28 ನೇ ತಾರೀಕು ಶುಕ್ರವಾರ ಸಂಜೆ 3.00 ಗಂಟೆಯಿಂದ ನಡೆಯಲಿದೆ.

ಮಧ್ಯಾಹ್ನ 3.00 ಗಂಟೆಗೆ ಜ್ಯೋತಿ ಬೆಳಗುವುದರ ಮೂಲಕ ಪ್ರಾರಂಭವಾಗುವ ಪೂಜೆ ಶ್ರೀ ರಾಜರಾಜೇಶ್ವರಿ ಭಜನಾ ವೃಂದವರಿಂದ ಭಜನೆ, ಶ್ರೀಮತಿ ಮಧುರಾ ವಿಶ್ವನಾಥ್ ಮತ್ತು ಶ್ರೀಮತಿ ಸಂಗೀತಾ ರಾಜೇಶ್ ರವರಿಂದ “ಮಧುರ ಸಂಗೀತ” ಭಕ್ತಿ ಗೀತೆಗಳು, ರಾತ್ರಿ 7.00 ಗಂಟೆಗೆ ಮಹಾಮಂಗಾಳಾರತಿ, ಸುಮಂಗಲಿ ಆರಾಧನೆ, ಕನ್ನಿಕಾರಾಧನೆ, ಬ್ರಾಹ್ಮಣಾರಾಧನೆ ನಂತರ ತೀರ್ಥ ಪ್ರಸಾದ, ಮಹಾಪ್ರಸಾದ ವಿತರಣೆ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಬಂಧುಗಳು ಆಗಮಿಸಿ ಪೂಜಾಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಶ್ರೀ ವರ ಮಹಾಲಕ್ಷ್ಮೀ  ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.

VML INVITATION

Leave a Reply