ನಿತೀಶ್. ಪಿ.ಬೈಂದೂರಿಗೆ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ” ಪ್ರಶಸ್ತಿ

ನಿತೀಶ್. ಪಿ.ಬೈಂದೂರಿಗೆ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ” ಪ್ರಶಸ್ತಿ

ಕಾರ್ಕಳ : ಮಿತ್ರಮಂಡಳಿ ,ಕೋಟ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಸಹಕಾರದಲ್ಲಿ  ಡಾ| ಕೋಟ ಶಿವರಾಮ ಕಾರಂತರ ನೆನಪಲ್ಲಿ ಮಿತ್ರಮಂಡಳಿ ಕೋಟ ಆಯೋಜಿಸಿದ “ವಿಂಶತಿ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಛಾಯಚಿತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿ ದೇಶದ ಸತ್ಪ್ರಜೆಯಾಗಿ ಬೆಳಗುವ ನಿರೀಕ್ಷೆ ಮೂಡಿಸಿದ ಸಾಧಕ ನಿತೀಶ್. ಪಿ.ಬೈಂದೂರು ಇವರಿಗೆ “ಡಾ| ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

npb_2263

ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ನಕ್ರೆ ಜಾರ್ಜ್ ಕ್ಯಾಸ್ತೆಲಿನೋ, ಪಂಚಮಿ ಮಾರೂರು, ಮಹಮ್ಮದಾಲಿ ಅಬ್ಬಾಸ್, ಶ್ರೀವರ್ಮ ಅಜ್ರಿ, ಶೇಖರ ಅಜೇಕಾರು, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಗಿರಿಧರ ನಾಯಕ್, ಯೋಗೀಶ್ ಡಿ.ಎಚ್, ಸಮದ್ ಖಾನ್, ರಕ್ಷಾ ಆರ್.ಶೆಣೈ, ಆಶ್ವಿತಾ ಎಂ. ನೆಟ್ಟಣಾ ಉಪಸ್ಥಿತರಿದ್ದರು.

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Leave a Reply