ಪುತ್ತೂರು : ಪೆರಾಜೆ ಗ್ರಾಮ ಕತ್ತಲು ಮುಕ್ತ ಸೋಲಾರ್ ಗ್ರಾಮ ; ಐವನ್ ಡಿಸೋಜಾ

ಪುತ್ತೂರು : ಪೆರಾಜೆ ಗ್ರಾಮವನ್ನು ಸಂಪೂರ್ಣವಾಗಿ ಕತ್ತಲುಮುಕ್ತ ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವ ಬಗ್ಗೆ ಅಲ್ಲಿನ ಜನರ ಆಶಯದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಪೆರಾಬೆ ಪ್ರದೇಶದ 40 ಎಂಡೋಸಲ್ಫಾನ್ ಕುಟುಂಬದ ಜನರ ಮನೆಗೆ ಎರಡು ದೀಪ ಹಾಗೂ ಒಂದು ಪ್ಯಾನನ್ನು ಅಳವಡಿಸಲು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರ ಪ್ರದೇಶಾಭೀವೃದ್ದಿ ನಿಧಿಯಿಂದ ಒಟ್ಟು ರೂ. 8,36,000/- ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಜನವರಿ 12 ರಂದು  ಸದ್ರಿ ಪ್ರದೇಶಕ್ಕೆ ಭೇಟಿ ನೀಡಿ ಮಧ್ಯಾಹ್ನದವವರೆಗೆ  ಅಲ್ಲಿನ ಚಟುವಟಿಕೆಗಳ ಬಗ್ಗೆ ವೀಕ್ಷಿಸಿ ಚರ್ಚಿಸಲಿರುವರು ಎಂದು ಶ್ರೀ ಐವನ್ ಡಿಸೋಜಾರವರು ತಿಳಿಸಿರುತ್ತಾರೆ. ಎಂದು ಶಾಸಕರ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here