ಬಂಟ್ವಾಳ: ಗೋವಾದಲ್ಲಿ ರಸ್ತೆ ಅಪಘಾತ: ಸಿದ್ದಕಟ್ಟೆ ನಿವಾಸಿ ಮೃತ್ಯು

ಬಂಟ್ವಾಳ: ಗೋವಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸಿದ್ದಕಟ್ಟೆ ನಿವಾಸಿಯೊಬ್ಬರು ಮೃತಪಟ್ಟರುವುದಾಗಿ ತಿಳಿದು ಬಂದಿದೆ. ಸಿದ್ದಕಟ್ಟೆ ನಿವಾಸಿ ವಿಕ್ಟರ್ ಮೊರಾಸ್ ಪುತ್ರ ರೋಶನ್ ಮೊರಾಸ್ (28) ಮೃತಪಟ್ಟವರು.
ಸುಮಾರು 3 ವರುಷಗಳಿಂದ ಗೋವಾದಲ್ಲಿ ಉದ್ಯೋಗದಲ್ಲಿದ್ದ ರೋಷನ್ ಅವರು ವಿಕ್ಟರ್ ಮೋರಾಸ್ ಅವರ 6 ಮಂದಿ ಮಕ್ಕಳಲ್ಲಿ 5ನೇಯವರು. 2012 ರಲ್ಲಿ ಸಿದ್ದಕಟ್ಟೆಯಲ್ಲಿ ಜೆರಾಲ್ಡ್ ಲೋಬೊ ಅವರ ಓಮಿನಿ ಕಾರಿನ ಕಾರ್ ಸ್ಟಿರಿಯೋ ಕಳವು ಪ್ರಕರಣದಲ್ಲಿ ಈತನ ಸಹಿತ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ತಲೆಮರೆಸಿಕೊಂಡಿದ್ದ ಈತನಿಗಾಗಿ ಬಂಟ್ವಾಳ ಗ್ರಾಮಾಂತರ ಪೋಲಿಸರು ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.
ಮೂರು ವರ್ಷಗಳ ಬಳಿಕ ಕಳೆದ ಜನವರಿಯಲ್ಲಿ ರೋಶನ್ ಗೋವಾದ ಮಡಗಾವ್ನಲ್ಲಿ ಪತ್ತೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಜಾಮೀನು ಪಡೆದು ತೆರಳಿದ್ದ ಈತ, ವಾರದ ಹಿಂದೆಯಷ್ಟೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.

Leave a Reply

Please enter your comment!
Please enter your name here