ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ಸು, ಲಾರಿ ನಡುವೆ ಅಫಘಾತ : ನಾಲ್ಕು ಸಾವು

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್‍ನಲ್ಲಿದ್ದ ಇಬ್ಬರು ಚಾಲಕರು ಸಾವನ್ನಪ್ಪಿ, 16ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಬಸ್ ಚಾಲಕರಾದ ರಾಮಕೃಷ್ಣ ಆಚಾರಿ (51) ಹಾಗೂ ಲಕ್ಷ್ಮಿನಾರಾಯಣ ಸಾವಿಗೀಡಾದವರು. ರಾತ್ರಿ ಪ್ರಯಾಣದ ಬಸ್ ಆಗಿದ್ದರಿಂದ ಇಬ್ಬರು ಚಾಲಕರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ರಾತ್ರಿ ಬೆಂಗಳೂರಿನಿಂದ 11 ಗಂಟೆಗೆ ಬಸ್ ಧರ್ಮಪುರಿಗೆ ತೆರಳಿದೆ. ಧರ್ಮಪುರಿಯ ಗುಂಡಲ್ ಪಟ್ಟಿ ಬಳಿ ವರುವಾನ್ ವಡಿವೇಲನ್ ಇಂಜಿನಿಯರಿಂಗ್ ಕಾಲೇಜಿನ ಬಳಿ ಬಸ್‍ಗೆ ಮುಂದಿನಿಂದ ಬಂದ ಲಾರಿಯೊಂದು ಬಸ್‍ಗೆ ಡಿಕ್ಕಿಯೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‍ನ ಮುಂಭಾಗದಲ್ಲಿದ್ದ ಇವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಿದ್ರೆಯಲ್ಲಿದ್ದ 16 ಪ್ರಯಾಣಿಕರು ಗಾಯಗೊಂಡಿದ್ದಾರೆ. ತಿರುಚ್ಚಿ ನಿವಾಸಿಗಳಾದ ರಘುರಾಂ, ರಮ್ಯಾ, ರಾಧಾಕೃಷ್ಣ, ಜಿನ್ನಿಫರ್, ರಾಮನಾಥ್, ಸುಧಾರಾಂನಾಥ, ಬೆಂಗಳೂರಿನ ನಿವಾಸಿಗಳಾದ ಬಾಲಾಜಿ (25), ಸೌಂದರ್ಯ (30), ರಂಗರಾಜನ್ (54), ಕಾರ್ತಿಕ್ (24), ಅನಿತಾ (41) ಗಾಯಗೊಂಡು ಧರ್ಮಪುರಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply