ಬೆಳ್ತಂಗಡಿ: ವಿದ್ಯಾರ್ಥಿನಿ ಭಾಗ್ಯಶ್ರೀ ಮೃತ್ಯುನೊಂದ ತಂದೆ ಆತ್ಮಹತ್ಯೆ

ಬೆಳ್ತಂಗಡಿ: ಮರೋಡಿಯಲ್ಲಿ ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ವಿದ್ಯಾರ್ಥಿನಿಯ ತಂದೆ ರಾಮಣ್ಣ ಸಾಲ್ಯಾನ್ ಎಂಬವರು ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ರಾತ್ರಿ ಸಂಭವಿಸಿದೆ.

ಕಳೆದ ಎ. 6ರಂದು ರಾಮಣ್ಣ ಸಾಲ್ಯಾನ್‌ರ ಪುತ್ರಿ ವಿದ್ಯಾರ್ಥಿನಿ ಭಾಗ್ಯಶ್ರೀ ತನ್ನ ಮನೆಯಲ್ಲಿ ಬೆಂಕಿ ತಗಲಿ ಮೃತಪಟ್ಟಿದ್ದಳು. ಇದು ಹಲವಾರು ವಿವಾದಗಳಿಗೆ ಕಾರಣವಾಗಿ ಕೊನೆಗೂ ಪೊಲೀಸ್ ತನಿಖೆಯಲ್ಲಿ ಆಕೆ ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಬಹಿರಂಗಗೊಂಡಿತ್ತು. ಇದೀಗ ಇದೇ ಮನೆಯಲ್ಲಿ ಆಕೆಯ ತಂದೆಯು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿವಾರ ಮನೆಯಲ್ಲಿ ರಾಮಣ್ಣ ಒಬ್ಬರೇ ಇದ್ದರು ಎನ್ನಲಾಗಿದೆ. ಮನೆಯವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಪುತ್ರಿಯ ಸಾವಿನ ನೋವಿನಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಇನ್ಯಾವುದೇ ಕಾರಣವಿದೆಯೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ವೇಣೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply