ಬೇಸಿಗೆ ಕಾಲದ ಯೋಗ, ಪ್ರಾಣಾಯಾಮಗಳು ಮುದ್ರೆಗಳು

Spread the love

ಈ ವರ್ಷದ ಬೇಸಿಗೆ ಕಾಲದ ಉಷ್ಣಾಂಶ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಜೀವನ ನಡೆಸಲು ಕಷ್ಟವಾಗಿದೆ. ದೇಹವು ಬಳಲುತ್ತದೆ ಮತ್ತು ಬಲು ಬೇಗನೇ ಆಯಾಸಗೊಳ್ಳುತ್ತದೆ. ಈ  ಬಾರಿಯ ಬೇಸಿಗೆ ಕಾಲದ ಉಷ್ಣಾಂಶವನ್ನು ಮಾನವನಿಗೆ ತಡೆದುಕೊಳ್ಳಲು ತುಂಬಾ  ಕಷ್ಟವಾಗುತ್ತದೆ. ದೇಹಕ್ಕೆ ನೀರಿನ ಕೊರತೆಯು ಕಂಡು ಬರುತ್ತದೆ. ಈ ಹವಮಾನದಲ್ಲಿ ಉಂಟಾದ ಉಷ್ಣತೆಯ (ಬಿಸಿಯ) ಏರಿಕೆಯ ಸಮಸ್ಯೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳನ್ನು ಯೋಗ, ಮುದ್ರೆಗಳು , ಪ್ರಾಣಾಯಾಮಗಳು ಹಾಗೂ ವರ್ಣ ಮುದ್ರೆಯ ಮೂಲಕ ನಿಯಂತ್ರಣಗೊಳಿಸಬಹುದು. ಇದರೊಂದಿಗೆ ಉತ್ತಮ ಪೋಷಕಾಂಶ ಆಹಾರಗಳನ್ನು ಸೇವಿಸಬೇಕು. ಸ್ವಚ್ಛ ನೀರನ್ನು ಸೇವಿಸಬೇಕು.

ಉಷ್ಣಾಂಶದಲ್ಲಿ ಜೀವಿಸಲು ಇರುವ ಸರಳ ವಿಧಾನಗಳು (ದೇಹವನ್ನು ತಂಪನ್ನಾಗಿಸುವ ಪ್ರಾಣಯಾಮಗಳ ವಿವರಗಳು ಈ ಕೆಳಗೆ ತಿಳಿಸಲಾಗಿದೆ)

image002yoga-pranayama-020160507-002 image003yoga-pranayama-020160507-003 image004yoga-pranayama-020160507-004 image008yoga-pranayama-020160507-008

  1. ಪ್ರಥಮವಾಗಿ ವಿಶ್ರಾಂತಿಯ ವಿಧಾನವಾಗಿರುವ ಶವಾಸನ ಮತ್ತು ಮಕರಾಸನ (7 ನಿಮಿಷ ದಿಂದ 10 ನಿಮಿಷ)ವನ್ನು ದಿನಕ್ಕೆ ಎರಡು ಯಾ ಮೂರು ಬಾರಿ ಶವಾಸನ ಅಭ್ಯಾಸ ಮಾಡಬೇಕು. [ ಈ ಆಸನದಿಂದ ಮುಖ್ಯವಾಗಿ ದೇಹ ಮನಸ್ಸುಗಳಿಗೆ ವಿಶ್ರಾಂತಿಯೂ, ನೆಮ್ಮದಿಯೂ ದೊರೆಯುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸುಲಭವಾಗುತ್ತದೆ. ಈ ಆಸನದಿಂದ ಕೆಲಸ ಮಾಡಿ ಆಯಾಸವಾದವರಿಗೆ ಹೊಸ ಹುರುಪು, ಹೊಸ ಚೈತನ್ಯ ಉಂಟಾಗುತ್ತದೆ. ರಕ್ತದೊತ್ತಡ, ಮಾನಸಿಕ ಒತ್ತಡ, ಹೃದಯದ ಕಾಯಿಲೆ, ಶ್ವಾಸಕೋಶ ವಿಕಾರ ಮೊದಲಾದ ರೋಗಗಳನ್ನು ಪರಿಹರಿಸುತ್ತದೆ. ಚಿಂತೆಯು ಪರಿಹಾರವಾಗುತ್ತದೆ. ನಿದ್ರೆಯು ಚೆನ್ನಾಗಿ ಬರುತ್ತದೆ.]
  2. ಸಾಧ್ಯವಾದರೆ ದೇಹಕ್ಕೆ ವ್ಯಾಯಾಮದ ಕೊರತೆ ಇರುವವರು ಸರಳ ಯೋಗಾಸನವನ್ನು ಅಭ್ಯಾಸ ಮಾಡಬಹುದು. (ಉದಾ : ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಅರ್ಧಕಟ ಚಕ್ರಾಸನ, ಪವನಮುಕ್ತಾಸನ, ಸೇತುಬಂಧ ಸರ್ವಾಂಗಾಸನ, ಭುಜಂಗಾಸನ, ಶವಾಸನ ಇತ್ಯಾದಿಗಳು)
  3. ಪ್ರಾಣಾಯಾಮದಲ್ಲಿ ದೇಹವನ್ನು ತಂಪನ್ನಾಗಿಸುವ ಪ್ರಾಣಯಾಮ, ಶೀತಲೀ, ಸಿತ್ಕಾರಿ, ಸದಂತ ಪ್ರಾಣಯಾಮಗಳು ಹಾಗೂ ಚಂದ್ರನೋಲೋಮ ಪ್ರಾಣಯಾಮ ಅಭ್ಯಾಸ ಮಾಡಬೇಕು. ಇದರ ಜೊತೆಯಲ್ಲಿ ನಾಡಿಶುದ್ಧಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಹಾಗೂ ಚಿಕ್ಕ ಧ್ಯಾನವನ್ನು ಮನಸ್ಸಿನ ನೆಮ್ಮದಿ ಶಾಂತಿಗೆ ಅಭ್ಯಾಸ ಮಾಡಬೇಕು. ಈ ಮಾಹಿತಿಗಳನ್ನು ಗುರುವಿನ  ತರಬೇತಿ ಮೂಲಕ ಕಲಿತು ಅಭ್ಯಾಸ ಮಾಡಬೇಕು. ಈ ರೀತಿಯ ಸರಳ ಉಲ್ಲಾಸಕರ ಚಿಕ್ಕ ವ್ಯಾಯಾಮಗಳು, ಅಗತ್ಯದ ಯೋಗಾಸನಗಳು, ಕೂಲಿಂಗ್ ಪ್ರಾಣಾಯಾಮ,

image009yoga-pranayama-020160507-009

ವರ್ಣ ಚಿಕಿತ್ಸೆಯಲ್ಲಿ ಕಾಮನ ಬಿಲ್ಲಿನ ಬಣ್ಣಗಳಲ್ಲಿ ಇರುವ ನೀಲಿ ಬಣ್ಣ ಹಾಗೂ ಹಸಿರು ಬಣ್ಣವನ್ನು ಹಾಗೂ ಹಳದಿ ಬಣ್ಣ ತಲಾ 20 ರಿಂದ 40 ನಿಮಿಷ ನೋಡಬೇಕು. (ಬಣ್ಣಗಳನ್ನು ನೋಡಿದಾಗ ಕಣ್ಣ ಹೀರುತ್ತದೆ. ಮನಸ್ಸು ಹೀರುತ್ತದೆ ಹಾಗೂ ಚರ್ಮ ಹೀರುತ್ತದೆ) (ಬಣ್ಣಗಳನ್ನು ಕಣ್ಣಿನಿಂದ ನೋಡಿದರೆ ಸಾಕು.) ಬಣ್ಣಗಳು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಮಹತ್ತರವಾದ ಕಾರ್ಯ ನಿರ್ವಹಿಸುತ್ತದೆ ಎಂಬ ಸತ್ಯ ಬಹಳ ಹಿಂದೆಯೇ ಗೋಚರವಾಗಿತ್ತಾದರೂ ಇತ್ತೀಚೆಗೆ ಬಣ್ಣಗಳ ಚಿಕಿತ್ಸೆ ಎಂಬ ಹೊಸ ಚಿಕಿತ್ಸಾ ಪದ್ಧತಿ ನಮ್ಮ ನಡುವೆ ಗಟ್ಟಿಯಾಗಿ ಬೆಳೆದು ಬರುತ್ತಿದೆ. ಬಣ್ಣಗಳಿಂದ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ರಹಸ್ಯ ಇದೀಗ ಜಗಜ್ಜಾಹೀರಾಗಿದೆ.

ದೇಹದ ಆರೋಗ್ಯಕ್ಕೆ ಹಾಗೂ ತಂಪನ್ನಾಗಿಸುವ, ಮುದ್ರೆಗಳ ವಿವರಗಳು ಈ ಕೆಳಗೆ ತಿಳಿಸಲಾಗಿದೆ.

ಮುದ್ರೆಗಳಲ್ಲಿ ಆಯಾಸ ಪರಿಹಾರಕ್ಕೆ ಇರುವ ಹುರುಪನ್ನು ನೀಡುವ ಪ್ರಾಣಮುದ್ರೆ 20 ನಿಮಿಷ ದೇಹದ ನೀರಿನ ಅಂಶದ  ಸಮತೋಲನಕ್ಕೆ  ವರಣ ಮುದ್ರೆ 10 ರಿಂದ 20, 40 ನಿಮಿಷ, ಚಿತ್ತಶುದ್ಧಿ ನೆಮ್ಮದಿ ಶಾಂತಿಗೆ ಪೃಥ್ವಿ ಮುದ್ರೆ 10 ನಿಮಿಷ, ಒತ್ತಡ ನಿಯಂತ್ರಣಕ್ಕೆ  ಚಿನ್ ಮುದ್ರೆ 10 ನಿಮಿಷ, ಮನಸ್ಸು ದೃಡತೆ, ನೆನಪು ಶಕ್ತಿ ಹೆಚ್ಚಿಸಲು ಹಕಿನಿ ಮುದ್ರೆ, ಕೊನೆಯಲ್ಲಿ ಪುನಃ 10 ನಿಮಿಷ ಪ್ರಾಣ ಮುದ್ರೆ ಮಾಡಬೇಕು. ಮುದ್ರೆಗಳನ್ನು ಯಾವ ಹೊತ್ತಿನಲ್ಲಿಯೂ ಯಾವ ಸ್ಥಳದಲ್ಲಿಯೂ ಅಭ್ಯಾಸ ಮಾಡಬಹುದು.

image007yoga-pranayama-020160507-007

ಸದಂತ ಪ್ರಾಣಾಯಾಮ (ದೇಹವನ್ನು ತಂಪಾಗಿಸಿಕೊಳ್ಳಬಹುದು).

ಸದಂತ ಪ್ರಾಣಾಯಾಮದಿಂದ ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆಯನ್ನು ನಿಯಂತ್ರಣಗೊಳಿಸಬಹುದು. ಹಲ್ಲಿನ ನೋವಿನ ಉಪಶಮನಕ್ಕೆ ಸಹಕಾರಿ ಮತ್ತು ದೇಹವನ್ನು ತಂಪಾಗಿಸಿಕೊಳ್ಳಬಹುದು. ನಿಧಾನವಾಗಿ ಹಿಸ್ ಶಬ್ದದಂತೆ ಗಾಳಿಯನ್ನು ಹಲ್ಲುಗಳ ಅಂತರದಲ್ಲಿ ತೆಗೆದುಕೊಳ್ಳಬೇಕು. ಬಾಯಿ ಹುಣ್ಣಿನ ಸಮಸ್ಯೆ ಇರುವವರಿಗೆ ಈ ಪ್ರಾಣಾಯಾಮ ಸಹಕಾರಿಯಾಗುತ್ತದೆ.

image006yoga-pranayama-020160507-006

ಅಭ್ಯಾಸ ಕ್ರಮ: ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು, ಬಾಯಿಯನ್ನು ತುಸು ಅಗಲಿಸಿ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಜೋಡಿಸಬೇಕು. ನಂತರ ಹಲ್ಲುಗಳ ಸಂಧಿಗಳ ಮೂಲಕ ಗಾಳಿಯನ್ನು ಒಳಕ್ಕೆ ಎಳೆದುಕೊಂಡು ತುಸು ಹೊತ್ತು ಒಳಗೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ. ಈ ರೀತಿ 3, 6ಯಾ 9ಬಾರಿ ಅಭ್ಯಾಸ ಮಾಡಬೇಕು.

ಪ್ರಯೋಜನಗಳು: ಸದಂತ ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ತಂಪಾಗಿಸಿಕೊಳ್ಳÀಬಹುದು. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿಯಾಗಿದೆ. ನಿದ್ರಾಹೀನತೆ, ಪಿತ್ತವಿಕಾರ ಸಮಸ್ಯೆಗಳಿಂದಬಳಲುತ್ತಿರುವವರಿಗೆ ಹಾಗೂ ವಸಡಿನ ತೊಂದರೆಯಿಂದ ಬಳಲುವವರಿಗೂ ಇದು ಸಹಕಾರಿಯಾಗಿದೆ. : ಕಣ್ಣಿನ ಆಯಾಸ ಪರಿಹಾರವಾಗುತ್ತದೆ. ರಾತ್ರಿ ಕೆಲಸ ಮಾಡಿ ಬರುವ ಖಿನ್ನತೆ, ಒತ್ತಡ ನಿವಾರಣೆಗೆ ಸದಂತ ಪ್ರಾಣಾಯಾಮ ಸಹಕಾರಿಯಾಗುತ್ತದೆ. ಮಾನಸಿಕ ಒತ್ತಡ ಆತಂಕ ನಿವಾರಣೆಯಾಗುತ್ತದೆ.

ಕೊನೆಯಲ್ಲಿ ಶವಾಸನ ಮಾಡಬೇಕು (ಸಿಗುವಂತೆ 10,20 ಮಿನಿಟು)

ಶೀತಲೀ ಪ್ರಾಣಾಯಾಮ: ಶೀತಲಿ ಎಂದರೆ ತಂಪಾಗಿಸುವುದು ದೇಹ ಮತ್ತು ಮನಸ್ಸು ತಣ್ಣಗಾಗಿಸುವುದು.(ಉಸಿರನ್ನು ತಂಪಾಗಿಸುವುದು)

ಶೀತಲೀ ಎಂದರೆ ಸಂಸ್ಕøತ ಪದವು ಶೀತ ಎಂಬ ಮೂಲ ಪದದಿಂದ ಬಂದದ್ದು. ಶೀತ ಎಂದರೆ ತಂಪು ಎಂಬ ಅರ್ಥ. ಶೀತಲ ಎಂದರೆ ಶಾಂತ, ಉದ್ರೇಕವಿಲ್ಲದೆ ಮತ್ತು ಶಮನಕಾರಿಯಾದ ಎಂದು ಅರ್ಥವಾಗಿದೆ.

image001yoga-pranayama-020160507-001

ಇಲ್ಲಿ ನಾಲಿಗೆಯನ್ನು ಪ್ರಯಾಸವಿಲ್ಲದಂತೆ ಬಾಯಿಯಿಂದ  ಆದಷ್ಟು ಹೊರಚಾಚಬೇಕು.

ಉಸಿರನ್ನು ಹೊರಕ್ಕೆ ಮತ್ತು ಒಳಕ್ಕೆ [ಕೊಳವೆ ಮಾಡಿದ ನಾಲಗೆಯ ಮೂಲಕ] ತೆಗೆದುಕೊಳ್ಳುವಾಗ ಗಾಳಿಯು ರಭಸವಾಗಿ ಬೀಸಿದಾಗ ಉಂಟಾಗುವ ಶಬ್ಧವು ಬರಬೇಕು.

ನಾಲಿಗೆ  ಮತ್ತು ಬಾಯಿಯ ಒಳ ಮೇಲ್ಭಾಗದಲ್ಲಿ ತಂಪಿನ ಅನುಭವ ಉಂಟಾಗುತ್ತದೆ. ಸಾಮಾನ್ಯವಾಗಿ                ಬೇಸಿಗೆಗಾಲದಲ್ಲಿ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇರಬಹುದು.

ಅಭ್ಯಾಸ ಕ್ರಮ: ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು, ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಳ್ಳಬೇಕು. ಕೈಗಳು ಚಿನ್ಮುದ್ರೆಯಲ್ಲಿರಲಿ. ನಾಲಗೆಯನ್ನು ಹೊರಗೆ ಚಾಚಿ ಅದರ ಪಕ್ಕಗಳನ್ನು ಮಡಚಿ ಕೊಳವೆಯಾಕಾರ ಮಾಡಿ.(ಚಿತ್ರದಲ್ಲಿರುವಂತೆ) ನಂತರ ನಿಧಾನವಾಗಿ, ದೀರ್ಘವಾಗಿ ಗಾಳಿಯನ್ನು ನಾಲಗೆಯ ಮೂಲಕ ಒಳಕ್ಕೆಳೆದುಕೊಂಡು(ಪೂರಕ), ಕೆಲವು ಸೆಕೆಂಡುಗಳ ಕಾಲ ಗಾಳಿಯನ್ನು ಒಳಗೆ ಹಿಡಿದಿಡಿ. ನಂತರ ಮೂಗಿನ ಮೂಲಕ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ(ರೇಚಕ). ಈ ಶೀತಲೀ ಪ್ರಾಣಾಯಾಮ 9 ರಿಂದ 12 ಬಾರಿ  ಅಭ್ಯಾಸ ಮಾಡಬೇಕು.

ಈ ಸಂದರ್ಭದಲ್ಲಿ ಗಮನ ನಾಲಗೆ ಮತ್ತು ಉಸಿರಿನ ಕಡೆಗೆ ಗಮನವಿರಲಿ,

ಪ್ರಯೋಜನಗಳು: ಶೀತಲೀ, ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿಯಾಗಿದೆ. ನಿದ್ರಾಹೀನತೆ, ಪಿತ್ತವಿಕಾರ ಸಮಸ್ಯೆಗಳಿಂದಬಳಲುತ್ತಿರುವವರಿಗೆ ಇದು ಸಹಕಾರಿಯಾಗಿದೆ. ಈ ಪ್ರಾಣಾಯಾಮ ಹೈಪರ್ ಅಸಿಡಿಟಿ ಯಾ ಹುಣ್ಣುಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ಹೆಚ್ಚಿನ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ನರಮಂಡಲವನ್ನು ಶಾಂತಗೊಳಿಸುತ್ತದೆ. ಈ ಪ್ರಾಣಾಯಾಮದಿಂದ ಹಸಿವು ಮತ್ತು ಬಾಯಾರಿಕೆಯನ್ನು ನಿಯಂತ್ರಣಗೊಳಿಸಬಹುದು. ಮನಸ್ಸಿನ ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತದೆ.

ಚಳಿಗಾಲದಲ್ಲಿ ಯಾ ತಂಪು ಹವಾಮಾನವಿರುವ ಸಂದರ್ಭದಲ್ಲಿ ಶೀತಲೀ ಪ್ರಾಣಾಯಾಮವನ್ನು ಮಾಡಬಾರದು. ಪ್ರಾಣಾಯಮವನ್ನು ಕಲುಷಿತವಾದ ಹಾಗೂ ಧೂಳಿನಿಂದ ಕೂಡಿದ ವಾತಾವರಣದಲ್ಲಿ ಅಭ್ಯಾಸ ಮಾಡಬಾರದು. ಕಡಿಮೆ  ರಕ್ತದೊತ್ತಡದಿಂದ ಬಳಲುವವರು, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಇರುವವರು ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಾರದು.

ಗುರುಗಳ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿಯೇ ಪ್ರಾಣಾಯಾಮ ಕಲಿಯಬೇಕು.

ಕೊನೆಯಲ್ಲಿ ಶವಾಸನ ಮಾಡಬೇಕು

ಸೀತ್ಕಾರೀ ಪ್ರಾಣಾಯಾಮ (ದೇಹವನ್ನು ತಂಪಾಗಿಸಿಕೊಳ್ಳಬಹುದು)

ಬೇಸಿಗೆಗಾಲದಲ್ಲಿ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇರಬಹುದು.

ಇದು ಶೀತಳೀ ಪ್ರಾಣಾಯಾಮದ ಇನ್ನೊಂದು ವಿಧವಾಗಿದೆ. ಎರಡು ತುಟಿಗಳ ಮಧ್ಯೆ ‘ಸ್, ಸ್, ಯಾ  “ಹಿಸ್ಸ್” ಮಾಡುವ ರೀತಿಯಲ್ಲಿ ಉಸಿರನ್ನು ತೆಗೆದುಕೊಳ್ಳುವ ಕ್ರಮವಾಗಿದೆ.

image005yoga-pranayama-020160507-005

ಅಭ್ಯಾಸ ಕ್ರಮ: ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು, ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಳ್ಳಬೇಕು. ಕೈಗಳು ಚಿನ್ಮುದ್ರೆಯಲ್ಲಿರಲಿ.  ನಾಲಗೆಯನ್ನು ಹಿಂದಕ್ಕೆ ಮಡಿಚಿ ಬಾಯಿಯೊಳಗೆ ಇಟ್ಟುಕೊಂಡು ನಿಧಾನವಾಗಿ ಗಾಳಿಯನ್ನು ಬಾಯಿಯ ಮೂಲಕ ಒಳಕ್ಕೆ “ಹಿಸ್ಸ್” ಶಬ್ದ ಮಾಡುತ್ತಾ ತೆಗೆದುಕೊಳ್ಳಬೇಕು. (ಚಿತ್ರದಲ್ಲಿರುವಂತೆ) ಸ್ವಲ್ಪ ಹೊತ್ತು ಗಾಳಿಯನ್ನು ಒಳಕ್ಕೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ. ಈ ರೀತಿ 3, 6ಯಾ 9ಬಾರಿ ಅಭ್ಯಾಸ ಮಾಡಬೇಕು.

ದೇಹ ಸಡಿಲಗೊಂಡಿರಬೇಕು. ಹಲ್ಲುಗಳನ್ನು ಹಗುರವಾಗಿ ಕಚ್ಚಬೇಕು. ಹಲ್ಲು ಇಲ್ಲದವರು ಈ ಪ್ರಾಣಾಯಾಮದ ಬದಲು ಶೀತಲೀ ಪ್ರಾಣಾಯಾಮವನ್ನು ಮಾಡಬಹುದು. ಇಲ್ಲಿ ನಾಲಿಗೆಯು ಚಪ್ಪಟೆಯಾಗಿರಿಸಬೇಕು.

ಪ್ರಯೋಜನಗಳು: ಸೀತ್ಕಾರೀ, ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿಯಾಗಿದೆ. ಇದು ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ.

ಪಿತ್ತವಿಕಾರ ಕಡಿಮೆಯಾಗಲು ಈ ಪ್ರಾಣಾಯಾಮ ಸಹಕಾರಿಯಾಗಿದೆ. ಸಿತ್ಕಾರಿ ಹಾರ್ಮೋನು ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ. ಇದು ಹಸಿವು, ಬಾಯಾರಿಕೆ ಸೋಮಾರಿತನ ಮತ್ತು ನಿದ್ರೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಟಾನ್ಸಿಲ್ ಸಮಸ್ಯೆಯು ನಿಯಂತ್ರಣವಾಗುತ್ತದೆ.

ಪ್ರಾಣಯಾಮ ಕಲಿಯುವ ಮುಂಚೆ ಯಾವುದಾದರೂ ಒಂದು ಭಂಗಿಯಲ್ಲಿ ತುಂಬಾ ಹೊತ್ತು ನೋವಿಲ್ಲದೆ (ಸುಖಾಸನ/ಪದ್ಮಸನ ಇತ್ಯಾದಿ) ಕುಳಿತುಕೊಳ್ಳಲು ಅಭ್ಯಾಸ ಇರಬೇಕು.

ಪ್ರಾಣಯಾಮಕ್ಕೆ ಸೂಕ್ರವಾದ ಭಂಗಿ ಸುಖಾಸನ/ಸ್ವಸ್ತಿಕಾಸನ/ಪದ್ಮಸನ/ವಜ್ರಾಸನ/ ವೀರಾಸನ/ ಸಿದ್ಧಾಸನ ಆಗಿರುತ್ತದೆ. ಆದ್ದರಿಂದ ಪ್ರಾಣಯಾಮಕ್ಕೆ ಮೊದಲು ಅಭ್ಯಾಸಿಯು ಕಡ್ಡಾಯವಾಗಿ ಕೆಲವು ಆಸನಗಳನ್ನು ಕಲಿತಿರಲೇ ಬೇಕು. ಕೆಲವು ಯೋಗಾಸನ ಅಭ್ಯಾಸ ಮಾಡದೇ ಪ್ರಾಣಯಾಮ ಕಲಿಯಲೇಬಾರದು. ಪ್ರಾಣಯಾಮ  ಮಾಡುವಾಗ ನೋವಿನ ಅನುಭವ ಬಂದರೆ, ಪ್ರಾಣಾಯಾಮದ ಪ್ರಯೋಜನ ಖಂಡಿತಾ ದೊರಕಲಾರದು. ಆದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ದೇಹವೇ ಮೂಲ ಸಾಧನವಾಗಿದೆ.

ಮೇಲಿನ ಆಸನದಲ್ಲಿ ಕುಳಿತುಕೊಳ್ಳಲು ಆಗದವರಿಗೆ ಕುರ್ಚಿಯಲ್ಲಿ ಕುಳಿತು ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು. ಗುರುಗಳ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿಯೇ ಪ್ರಾಣಾಯಾಮ ಕಲಿಯಬೇಕು.

ಕೊನೆಯಲ್ಲಿ ಶವಾಸನ ಮಾಡಬೇಕು.


Spread the love