ಮಂಗಳೂರಿನಲ್ಲಿ ಗ್ರಾಹಕ ಹಿತ ರಕ್ಷಣಾ ಕಾಯಿದೆ ಉಪನ್ಯಾಸ

ಮಂಗಳೂರು: ಸ್ಥಳೀಯ ರೋಟರಿ ಹಿಲ್ ಸೈಡ್ ಕ್ಲಬ್ ನವರ ವಿಶೇಷ ಸಭೆ ಸಪ್ಟಂಬರ್ 9 ರಂದು ಮಣ್ಣಗುಡ್ಡೆಯ ರೋಟರಿ ಬಾಲ ಭವನದಲ್ಲಿ ನಡೆಯಿತು. ಈ ಸಂದರ್ಭ ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ, ಮೂಡುಬಿದಿರೆ ಗ್ರಾಹಕ ಸಂಘಟನೆಯ ಅಧ್ಯಕ್ಷ, ಜೈನ್ ಹೈಸ್ಕೂಲಿನ ಅಧ್ಯಾಪಕ, ಸಂಪನ್ಮೂಲ ವ್ಯಕ್ತಿ ರಾಯೀ ರಾಜ ಕುಮಾರರು ಮುಖ್ಯ ಅತಿಥಿಗಳಾಗಿದ್ದು ಗ್ರಾಹಕ ಹಿತ ರಕ್ಷಣಾ ಕಾಯಿದೆಯ ಬಗೆಗೆ ಉಪನ್ಯಾಸವನ್ನು ನೀಡಿದರು. ಇದೇ ಸಂದರ್ಭದಲ್ಲಿ 2015 ನೇ ಸಾಲಿನ ದ.ಕ. ಜಿಲ್ಲೆಯ ಅತ್ಯತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀಯುತರನ್ನು ಪದಾಧಿಕಾರಿಗಳೆಲ್ಲರೂ ಸೇರಿ ಸನ್ಮಾನಿಸಿದರು.

ಅವರು ತಮ್ಮ ಉಪನ್ಯಾಸದಲ್ಲಿ ಕಾಯಿದೆಯ ಮೂಲ ಉದ್ದೇಸ, ದೊರಕುವ ಸಂಪೂರ್ಣ ಪ್ರಯೋಜನಗಳು, ನ್ಯಾಯ ಪಡೆಯುವ ಕ್ರಮ ಇತ್ಯಾದಿಗಳ ಬಗೆಗೆ ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ವೇದಿಕೆಯಲ್ಲಿ ಉಮಾಕಾಂತ್ ನಾಯಕ್, ಕಾರ್ಯದರ್ಶಿ ಸುರೇಶ್ ಕಿಣಿ ಹಾಜರಿದ್ದರು.

ರೋಟರಿ ಹಿಲ್ ಸೈಡ್ ನ ಅಧ್ಯಕ್ಷ ಅನಿಲ್ ರಾವ್ ಬಿ.ಎಸ್. ರವರು ಕಾರ್ಯಕ್ರಮವನ್ನು ಸಂಘಟಿಸಿ, ಅಧ್ಯಕ್ಷತೆಯನ್ನು ವಹಿಸಿದ್ದು ಸ್ವಾಗತಿಸಿದರು. ಪ್ರವೀಣ್ ಚಂದ್ರ ಶರ್ಮ ಅತಿಥಿಗಳ ಪರಿಚಯವನ್ನು ಮಾಡಿದರು. ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ತಾರಾ ರಾವ್ ರವರು ವಂದಿಸಿದರು. ಗ್ರಾಹಕ ಸಂಘಟನೆ ಒಕ್ಕೂಟದ ಮುಖವಾಣಿ ಗ್ರಾಹಕ ಛಾಯಾವನ್ನು ಉಚಿತವಾಗಿ ವಿತರಿಸಲಾಯಿತು.

Leave a Reply