ಮಂಗಳೂರು: ಅತ್ಯುತ್ತಮ ಬಜೆಟ್ : ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಮಂಗಳೂರು: ಕೇಂದ್ರದ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಸೋಮವಾರ ಮಂಡಿಸಿದ ಬಜೆಟ್ ಅತ್ಯುತ್ತಮ ಹಾಗೂ ಕೃಷಿಪರ ಬಜೆಟ್ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರಕಾರವು ಜನಪರವಾದ, ಕೃಷಿಪರವಾದ ಅತ್ಯುತ್ತಮ ಬಜೆಟ್‍ನ್ನು ನೀಡಿದೆ. ಗ್ರಾಮೀಣಾಭಿವೃದ್ದಿ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ವಿಚಾರಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಜನರ ಮೂಲಭೂತ ಆಶಯಗಳಿಗೆ ಸ್ಪಂದಿಸಿದೆ. ಕರಾವಳಿಗೆ ಸಂಬಂಸಿದಂತೆ ಮಂಗಳೂರು ಬಂದರು ಅಭಿವೃದ್ಧಿಗೆ 71ಕೋಟಿ ರೂ.ಗಳನ್ನು ಹಾಗೂ ಎಂಆರ್‍ಪಿಎಲ್ ಯೋಜನೆಗೆ 2270ಕೋಟಿ ರೂ.ಗಳನ್ನು ಮೀಸಡಲಿಟ್ಟಿದೆ. ಇದು ವಿಶೇಷ ವಾಗಿ ಕರಾವಳಿಗೆ ದೊಡ್ಡ ಕೊಡುಗೆಯಾಗಿದೆ. ಈ ಅತ್ಯುತ್ತಮ ಬಜೆಟ್ ನೀಡಲು ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೆಟ್ಲಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

Leave a Reply