ಮಂಗಳೂರು: ಕಣ್ಣೂರಿನಲ್ಲಿ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರ

ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ನಾಯಕತ್ವದಲ್ಲಿ ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಹಾಗು 52ನೇ ಕಣ್ಣೂರು ವಾರ್ಡ್ ಇದರ ಜಂಟಿ ಆಶ್ರಯದಲ್ಲಿ ನಗರದ ಕೆ.ಎಂ.ಸಿ. ಆಸ್ಪತ್ರೆ, ಎ.ಜೆ. ಶೆಟ್ಟಿ ಆಸ್ಪತ್ರೆ ಮತ್ತು ರೆಡ್‍ಕ್ರಾಸ್ ಬ್ಲಡ್ ಬ್ಯಾಂಕ್ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರ, ದಂತ ವ್ಯೆದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವು ದಿನಾಂಕ ಆಕ್ಟೋಬರ್ 4ರಂದು ಆದಿತ್ಯವಾರ ಬೆಳಿಗ್ಗೆ 9.00 ಗಂಟೆಗೆ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲ್ಲಿ ನಡೆಸಲಾಗುವುದು.

ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರಿ ರೋಗ, ಚರ್ಮ, ಸಾಮನ್ಯ ಕಾಯಿಲೆಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು. ಶಿಬಿರದಲ್ಲಿ ಅಗತ್ಯವುದಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವುಳ್ಳವರಿಗೆ ಔಷದಿ ನೀಡಲಾಗುವುದು.

ಈ ಮೊದಲು ಮಂಗಳಾದೇವಿ, ಕುದ್ರೋಳಿ, ಕಂಕನಾಡಿ, ಶಕ್ತಿನಗರದಲ್ಲಿ ನಡೆದ ವ್ಯೆದ್ಯಕೀಯ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಲಬಿಸಿದ್ದು, ಕಣ್ಣೂರಿನಲ್ಲಿ ನಡೆಯುವ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪತ್ರಿಕಾ ಪ್ರಕಾಟನೆಯಲ್ಲಿ, ಅಯೋಜಕರು ತಿಳಿಸಿದ್ದಾರೆ.

Leave a Reply

Please enter your comment!
Please enter your name here