ಮಂಗಳೂರು: ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಗೆ ಇನ್‍ಫ್ಲಮೇಟರಿ ಬೊವೆಲ್ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗಾಗಿ ಅನುದಾನ ಲಭಿಸಿದೆ

ಮಂಗಳೂರು: ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಗೆ ಇನ್‍ಫ್ಲಮೇಟರಿ ಬೊವೆಲ್ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗಾಗಿ ಅನುದಾನ ಲಭಿಸಿದೆ. ಈ ಸಂಶೋಧನೆಯ ಚಿಕಿತ್ಸೆಗೆ ಹೊಸ ಔಷಧಿಗಳನ್ನು ಕಂಡು ಹುಡುಕಲು ಒಂದು ತಳಹದಿಯಾಗಿದೆ.

“ಇನ್‍ಫ್ಲಮೇಟರಿ ಬೊವೆಲ್ ಕಾಯಿಲೆಗಳಲ್ಲಿ ಥಿಯೋಪ್ಯೂರೈನ್ ಚಿಕಿತ್ಸೆ: ಲಭ್ಯವಿರುವ ಚಿಕಿತ್ಸಾ ತಂತ್ರಗಳಿಂದ ಗರಿಷ್ಠ ಪ್ರಯೋಜನ ಗಳಿಸುವುದು” ಎಂಬ ಶೀರ್ಷಿಕೆಯ ಪ್ರಾಜೆಕ್ಟ್‍ಗಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಗ್ಯಾಸ್ಟ್ರೊಎಂಟೆರಾಲಜಿ ಮತ್ತು ಹೆಪಾಟೊಲಾಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸಿ. ಗಣೇಶ್ ಪೈರವರಿಗೆ. 49,92,862/- ಮೊತ್ತದ ಸಂಶೋಧನಾ ಅನುದಾನ ಲಭಿಸಿದೆ. ಈ ಸಂಶೋಧನೆಗೆ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಆರ್ಥಿಕ ಸಹಾಯ ಒದಗಿಸಿದೆ.

ಇನ್‍ಫ್ಲಮೇಟರಿ ಬೊವೆಲ್ ಕಾಯಿಲೆಗಳು ಕರುಳಿಗೆ ಸಂಬಂಧಿಸಿದ ವಾಸಿಯಾಗದ ದೀರ್ಘಕಾಲೀನ ಕಾಯಿಲೆಗಳಾಗಿದ್ದು ಅತಿಯಾದ ನರಳುವಿಕೆಗೆ ಕಾರಣವಾಗುತ್ತವೆ.  ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಈ ಸ್ಥಿತಿಯಲ್ಲಿ ನರಳುತ್ತಿರುವ ಅರ್ಧದಷ್ಟು ರೋಗಿಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಹೆಚ್ಚಿನ ಪ್ರಮಾಣದ ಆವಶ್ಯಕತೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ.

ಪ್ರಸ್ತುತ ಲಭ್ಯವಿರುವ, ಕೈಗೆಟುಕುವ ದರದಲ್ಲಿ ಸಿಗುವ, ಥಿಯೋಪ್ಯೂರಿನ್ ಔಷಧಿ ವರ್ಗಕ್ಕೆ ಸೇರಿರುವ ಔಷಧಿಗಳಿಂದ ಪ್ರಯೋಜನ ಪಡೆಯುತ್ತಿರುವ, ರೋಗಿಗಳ ಪ್ರಮಾಣವನ್ನು ಹೆಚ್ಚಿಸುವ ವಿಧಾನಗಳನ್ನು ಗುರುತಿಸುವ ಮತ್ತು ಈ ಔಷಧಿಗಳಿಂದ ಸಂಭವಿಸುವ ಹಾನಿಕರ ಘಟನೆಗಳನ್ನು ಕಡಿಮೆ ಮಾಡುವ ನಿರೀಕ್ಷೆಯನ್ನು ಈ ಪ್ರಾಜೆಕ್ಟ್ ಹೊಂದಿದೆ. Iಃಆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವ ಥಿಯೋಪ್ಯೂರಿನ್ ಸಂಯುಕ್ತಗಳಿಗೆ ಸಂಬಂಧಿಸಿದ ಹೊಸ ಔಷಧಿಗಳನ್ನು ವಿನ್ಯಾಸ ಮಾಡಲು ಸಹ ಈ ಸಂಶೋಧನೆ ತಳಹದಿಯಾಗಿದೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ. (ಕರ್ನಲ್.) ಎಂ ದಯಾನಂದರವರು “ಈ ಬಗೆಯ ಆರ್ಥಿಕ ಅನುದಾನವು ತಮ್ಮ ತಮ್ಮ ಸಂಶೋಧನಾ ಕ್ಷೇತ್ರಗಳಲ್ಲಿ ಹೊಸ ದಿಶೆ ಮತ್ತು ಸುಧಾರಣೆಗಳಿಗೆ ಅನುವು ಮಾಡಿಕೊಡುವ ವಿನೂತನ, ಶ್ರೇಷ್ಠ ಪ್ರಾಜೆಕ್ಟ್‍ಗಳಲ್ಲಿ ತೊಡಗಿಸಿಕೊಂಡಿರುವ ಮಾನ್ಯತೆ ಪಡೆದ ಸಂಶೋಧನಾ ಮುಖಂಡರಿಗೆ ಮಾತ್ರ ಲಭ್ಯವಿದೆ. ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊಎಂಟೆರಾಲಜಿ ಮತ್ತು ಹೆಪಾಟೊಲಾಜಿ ವಿಭಾಗದ ಆಯ್ಕೆಯು ಇಲ್ಲಿ ರೋಗಿಗಳಿಗೆ ಒದಗಿಸುವ ಸುಧಾರಿತ ಚಿಕಿತ್ಸಾ ವಿಧಾನಗಳನ್ನು ಮತ್ತು ಆರೈಕೆಯ ಗುಣಮಟ್ಟವನ್ನು ಬಿಂಬಿಸುತ್ತದೆ” ಎಂದು ಹೇಳಿದರು.

ಮಣಿಪಾಲ ವಿಶ್ವವಿದ್ಯಾನಿಲಯದ, ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್ ಸಯನ್ಸಸ್‍ನ, ಫಾರ್ಮಾಸ್ಯೂಟಿಕಲ್ ಕ್ವಾಲಿಟಿ ಅಶ್ಶೂರೆನ್ಸ್‍ನ ಮುಖ್ಯಸ್ಥರಾಗಿರುವ ಡಾ. ಕೃಷ್ಣಮೂರ್ತಿ ಭಟ್ ಇವರು ಈ ಪ್ರಾಜೆಕ್ಟ್‍ನ ಸಹ-ಸಂಶೋಧಕರಾಗಿರುತ್ತಾರೆ. ಈ ಪ್ರಾಜೆಕ್ಟ್ ಮೂರು ವರ್ಷಗಳ ತನಕ ನಡೆಯಲಿದೆ.

Leave a Reply