ಮಂಗಳೂರು: ಕಾಂಗ್ರೆಸ್ ಲೋಕಸಭಾ ಸದಸ್ಯರ ಅಮಾನತು; ಪ್ರತಿಭಟನೆ

ಮಂಗಳೂರು: ಲೋಕಾಸಭಾ ಸ್ಪೀಕರ್ ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರು ವುದನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು.

7-congress-protest-20150804-006 4-congress-protest-20150804-003

ಪ್ರತಿಭಟನೆಯಲ್ಲಿ  ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬಿಜೆಪಿ ಪಕ್ಷದ ಅನೇಕ ಅಕ್ರಮಗಳನ್ನು ಮಂಡಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅವರು ಅಮಾನತು ಮಾಡಿರುವ ದಿನ ಕರಾಳ ದಿನವಾಗಿದೆ ಎಂದರು.

 ಪ್ರತಿಭಟನೆಯಲ್ಲಿ ಎಐಸಿಸಿ ಸದಸ್ಯ ಪಿ.ವಿ. ಮೋಹನ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಬಾಲಕೃಷ್ಣ ಶೆಟ್ಟಿ, ಕಣಚೂರು ಮೋನು, ಸದಾಶಿವ ಉಳ್ಳಾಲ, ಅಬ್ಬಾಸ್ ಅಲಿ, ನಾಗೇಂದ್ರ ಕುಮಾರ್, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜ,   ರತಿಕಲಾ, ಕವಿತಾ ವಾಸು, ನಮಿತಾ ಡಿ. ರಾವ್, ಧರ್ನೇಂದ್ರ ಕುಮಾರ್, ಆಶಿತ್ ಪಿರೇರಾ, ವಿಜಯ ಕುಮಾರ್ ಸೊರಕೆ, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ನಾಸಿರ್, ರಮಾನಂದ ಪೂಜಾರಿ, ಮನುರಾಜ್, ಲಾರೆನ್ಸ್, ಸಿರಾಜ್ ಕಿನ್ಯಾ, ಜಬ್ಬಾರ್ ಬೋಳ್ಯಾರ್, ಸಂತೋಷ್ ಶೆಟ್ಟಿ ಅಸೈಗೋಳಿ, ಅಮೀರ್ ತುಂಬೆ, ನಝೀರ್ ಬಜಾಲ್, ಪದ್ಮನಾಭ ನರಿಂಗಾಣ ಮೊದಲಾದವರು ಉಪಸ್ಥಿತರಿದ್ದರು.

Leave a Reply