ಮಂಗಳೂರು: ಕೋಣಾಜೆಯಲ್ಲಿ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮಂಗಳೂರು: ಯುವಕನೋರ್ವನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಪದವು ಕೊಣಾಜೆ ಬಳಿ ಜುಲೈ 17 ರಂದು ಜರುಗಿದೆ.

ಗಾಯಗೊಂಡ ಯುವಕನನ್ನು ನಡುಪದವು ಕೊಣಾಜೆ ಬಳಿಯ ಸಿರಾಜ್ (24) ಎಂದು ಗುರುತಿಸಲಾಗಿದೆ.  ಸಿರಾಜ್ ಮಂಗಳೂರಿನ ಮಹಿಂದ್ರಾ ಶೋರೂಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

09-attack-20150718-008 07-attack-20150718-006 06-attack-20150718-005

ಪೋಲಿಸ್ ಮೂಲಗಳ ಪ್ರಕಾರ ಜುಲೈ 17 ರ ರಾತ್ರಿ 9.45 ರ ವೇಳೆ ಸಿರಾಜ್ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಿರಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಸಿರಾಜ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಯೆನಪೋಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸ್ಥಳಕ್ಕೆ ಪೋಲಿಸ್ ಕಮೀಷನರ್ ಮುರುಗನ್ ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.  ಘಟನೆಯ ಬಳಿಕ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಇತ್ತೀಚೆಗೆ ಕೋಣಾಜೆ ಪರಿಸರಿದಲ್ಲಿ ಇಂತಹ ಹಲವು ಘಟನೆಗಳು ಜರುಗಿದ್ದು ರಸ್ತೆಯಲ್ಲಿ ನಡೆದಾಡಲು ಜನ ಹೆದರುತ್ತಿದ್ದಾರೆ. ಪೋಲಿಸರು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸ್ ಕಮೀಷನರ್ ಅವರಿಗೆ ಆಗ್ರಹಿಸಿದರು.

ಕೊಣಾಜೆ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply