ಮಂಗಳೂರು: ಗಾನ ನಾಟ್ಯ ಪಯಣದಲ್ಲಿ ನಂದಗೋಕುಲ ಪ್ರಶಸ್ತಿ ಪ್ರದಾನ-ಸಾಧಕ ಸಂಮಾನ

ಮಂಗಳೂರು: ಅರೆಹೊಳೆ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ, ನಂದಗೋಕುಲ ವಾರ್ಷಿಕ ಕಾರ್ಯಕ್ರಮ ಗಾನ ನಾಟ್ಯ ಪಯಣದಲ್ಲಿ ನಂದಗೋಕುಲ ಪ್ರಶಸ್ತಿ-2016ನ್ನು ಖ್ಯಾತ ನೃತ್ಯ ಗುರು ವಿದ್ವಾನ್ ಚಂದ್ರಶೇಖರ ನಾವುಡರಿಗೆ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್ ಎಸ್ ಮಂಜುನಾಥ ಮೂರ್ತಿ ಪ್ರದಾನಿಸಿದರು.

2

ಇದೇ ಸಂದರ್ಭದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ ಹಾಗೂ ಸಂಸ್ಕøತಿ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಬಾಲಕೃಷ್ಣ (ಬಾಕೃ), ಪುತ್ತೂರಿನ ನೃತ್ಯ-ರಂಗಭೂಮಿ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ, ಕಿನ್ನಿಗೋಳಿಯ ಯುಗ ಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಅಬ್ಬಕ್ಕ ಸಂಶೋಧನಾ ಕೇಂದ್ರದ ಪ್ರೊ.ತುಕಾರಾಮ ಪೂಜಾರಿಯವರನ್ನು ಸಂಮಾನಿಸಲಾಯಿತು.

1

ಪ್ರೊ.ಕೃಷ್ಣಮೂರ್ತಿ ಪಿ ಅಭಿನಂದನಾ ಭಾಷಣ ಮಾಡಿದರು. ಹರಿಕೃಷ್ಣ ಪುನರೂರು, ವಿದುಷಿ ವಿದ್ಯಾಶ್ರೀ  ರಾಧಾಕೃಷ್ಣ, ದುರ್ಗಾ ಮೆನನ್, ಸುಬ್ರಾಯ ಭಟ್, ಮೋಹನ್ ಕೊಪ್ಪಳ, ಪ್ರಶಾಂತ್ ಪೈ, ಅರೆಹೊಳೆ ಸದಾಶಿವ ರಾವ್ ಹಾಗೂ ನಂದಗೋಕುಲದ ಶ್ವೇತಾ ಅರೆಹೊಳೆ ಉಪಸ್ಥಿತರಿದ್ದರು. ನಂತರ ಗಾನ ನೃತ್ಯ ಅಕಾಡೆಮಿ, ನಂದಗೋಕುಲ ಹಾಗೂ ತುಳಸಿ ಹೆಗಡೆಯವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು

Leave a Reply