ಮಂಗಳೂರು: ದುಷ್ಮರ್ಮಿಗಳಿಂದ ಹಲ್ಲೆಗೊಳಗಾದ 27 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಗೋಸ್ತ್  7 ರಂದು ನಡೆದಿದೆ

ಮೃತರನ್ನು ಮೇಲ್ಕಾರ್ ನಿವಾಸಿ ನಾಸಿರ್ (27) ಎಂದು ಗುರುತಿಸಲಾಗಿದೆ.

3-stabbed-20150807-002 2-stabbed-20150807-001 4-stabbed-20150807-003

ಮಾಹಿತಿಗಳ ಪ್ರಕಾರ ಅಗೋಸ್ತ್ 6 ರಂದು ನಾಸಿರ್ ಅವರು ಮುಸ್ತಾಫ ಎಂಬವರ ಆಟೋ ರಿಕ್ಷಾದಲ್ಲಿ ಸಜೀಪ ಸಮೀಪದ ಹಾಲಾಡಿಗೆ ತೆರಳುತ್ತಿದ್ದರು. ಆ ವೇಳೆ ರಿಕ್ಷಾ ಮೇಲ್ಕಾರ್ ತಲುಪಿತ್ತದ್ದಂತೆ ರಿಕ್ಷಾದಲ್ಲಿ ಬಂದ ನಾಲ್ವರಲ್ಲಿ ಒರ್ವ ರಿಕ್ಷಾವನ್ನು ನಿಲ್ಲಿಸಿ ಕುಕ್ಕಾಜೆಗೆ ಹೋಗುವ ದಾರಿಯನ್ನು ಕೇಳಿದ್ದು, ಮುಸ್ತಾಫ ಅವರು ದಾರಿಯನ್ನು ತೋರಿಸುತ್ತಿದ್ದ ವೇಳೆ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಮುಸ್ತಾಫ ಅವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ನಾಸಿರ್ ಅವರ ಮೇಲೆ ಕೂಡ ಹಲ್ಲೆ ನಡೆಸಿದರು ಎನ್ನಲಾಗಿದೆ.

ಕೂಡಲೇ ಸ್ಥಳೀಯರು ಮುಸ್ತಾಫ ಹಾಗೂ ನಾಸಿರ್ ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡಿರುವುದರಿಂದ ಇಬ್ಬರನ್ನೂ ಕೂಡ ಬಳಿಕ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಗಾಯಗೊಂಡ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.

ಬೃಹತ್ ಜನಸಮೂಹ ಆಸ್ಪತ್ರೆಯ ಬಳಿ ಜಮಾಯಿಸಿದ್ದು, ನಾಸಿರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎ ಜೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತ ನಾಸಿರ್ ಹೆತ್ತವರು, ಗರ್ಭೀಣಿ ಪತ್ನಿ, ಮಗಳು ಹಾಗೂ ಸಹೋದರರನ್ನು ಅಗಲಿದ್ದಾರೆ

ಬಂಟ್ವಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply