ಮಂಗಳೂರು: ನೀರು ಪೊರೈಸಲು ಅಸಮರ್ಥವಾದ ಪಾಲಿಕೆ; ಕ್ಷಮೆ ಯಾಚಿಸಲು ಬಿಜೆಪಿ ಆಗ್ರಹ

Spread the love

ಮಂಗಳೂರು: ಮಂಗಳೂರು ಮಹಾನಗರಕ್ಕೆ ಕಳೆದ ಐದು ದಿನಗಳಿಂದ ಸಮರ್ಪಕವಾಗಿ ನೀರು ಪೊರೈಸಲು ಅಸಮರ್ಥವಾದ ನಗರಪಾಲಿಕೆ ಆಡಳಿತ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಭಾರತೀಯ ಜನತಾ ಪಕ್ಷ ನಗರ ದಕ್ಷಿಣ ಇದರ ಅಧ್ಯಕ್ಷರಾದ ರವಿಶಂಕರ್ ಆಗ್ರಹಿಸಿದ್ದಾರೆ.

ಕಳೆದ ಶನಿವಾರ ತಾ.01.08.2015 ರಿಂದ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಇವತ್ತಿನವರೆಗೆ ಮಂಗಳೂರಿನ ಮಹಾಜನತೆಗೆ ಆದ ಕಠಿಣ ಪರಿಸ್ಥಿತಿ. ಮಕ್ಕಳಿಗೆ, ಮಹಿಳೆಯರಿಗೆ ಆದ ಕಷ್ಟ ಹೇಳಲು ಅಸಾಧ್ಯ. ಇಷ್ಟೊಂದು ದೊಡ್ಡ ಸಂಖ್ಯೆಯ ಮಹಾನಗರಪಾಲಿಕೆ ನೀರಿನ ಮೂಲ ಮತ್ತು ಸರಬರಾಜಿನ ಕೊಳವೆ ಹಾದು ಬರುವ ಸ್ಥಳ ಕೊಳವೆಗಳ ಅಳವಡಿಕೆ ಕುಡ್ಸೆಂಪ್ ಮುಖಾಂತರ ನಡೆದಿರುವಾಗ ಆಗಿನ ಮಹಾನಗರಪಾಲಿಕೆಯ ಮುಖ್ಯ ಅಧಿಕಾರಿ ಈಗಿನ ಶಾಸಕರಾದ ಶ್ರೀ ಜೆ.ಆರ್.ಲೋಬೋ ಅವರು ಅಧಿಕಾರದಲ್ಲಿದ್ದರು. ಸರಕಾರದ 360 ಕೋಟಿ ರೂಪಾಯಿಯಲ್ಲಿ ಕುಡ್ಸೆಂಪ್ ಯೋಜನೆಯ ಮುಖಾಂತರ 120 ಕೋಟಿ ರೂಪಾಯಿಯನ್ನು 2002 ರಿಂದ 2007ರ ಒಳಗಾಗಿ ನೀರಿನ ಸರಬರಾಜಿಗೆ ವಿನಿಯೋಗಿಸಿ ಕ್ರಮಬದ್ಧವಾಗಿ ಕೆಲಸಕಾರ್ಯಗಳನ್ನು ಮಾಡಬೇಕಿತ್ತು. ಆದರೆ ತುಂಬೆಯಿಂದ ಬರುವ ನೀರಿನ ಪೈಪ್ ಲೈನ್‍ಗಳು ಅವೈಜ್ಞಾನಿಕವಾಗಿ ಖಾಸಗೀ ಭೂಮಿಯಲ್ಲಿ ಅಳವಡಿಸಿಕೊಂಡು ಬರುವಾಗ ಪೈಪ್ ಲೈನ್‍ಗಳನ್ನು ಭೂಮಿಯ ಮಟ್ಟಕ್ಕಿಂತ ಸುಮಾರು 5 ಅಡಿ ಎತ್ತರದ ಕಂಬಗಳನ್ನು ನಿರ್ಮಿಸಿ ಹಾಕಬೇಕಿತ್ತು. ಅದೇನನ್ನು ಮಾಡದೆ ಭೂಮಿಯ ಮೇಲೆ ಪೈಪ್‍ಗಳನ್ನು ಇಟ್ಟು ಅದರ  ಮೇಲೆ ಖಾಸಗೀ ಭೂಮಾಲಕರು, ಹೊರವಲಯದ ಮಣ್ಣನ್ನು ಪೈಪ್‍ನ ಮೇಲೆ ಹಾಕಿದರ ಪರಿಣಾಮ ಪೈಪ್‍ಗಳು ಒಡೆದು ದುಸ್ತರಗೊಂಡಿದ್ದರಿಂದ ಜನರು ಈ ಮಳೆಗಾಲದಲ್ಲಿ ನೀರಿಗಾಗಿ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಇದಕ್ಕೆ ಕಾಂಗ್ರೆಸ್ ಸರಕಾರ ಮತ್ತು ಮಹಾನಗರಪಾಲಿಕೆ ಸಂಪೂರ್ಣ ಜವಾಬ್ದಾರರು. ಇಂತಹ ಬೇಜವಾಬ್ದಾರಿ ವರ್ತನೆಯು ಮುಂದಕ್ಕೆ ನಡೆಯಬಾರದು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪ್ರಕ್ಷ ನಡೆಸುತ್ತಿರುವ ಮಂಗಳೂರು ಮಹಾನಗರಪಾಲಿಕೆ ಈ ಬಗ್ಗೆ ಎಚ್ಚರವಹಿಸಿ ಮಹಾ ಜನತೆಗೆ ಆದ ಅನಾನುಕೂಲಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಆಗ್ರಹಿಸುತ್ತದೆ ಎಂದು ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಹೇಳಿಕೆ ನೀಡಿದ್ದಾರೆ.


Spread the love