ಮಂಗಳೂರು :ಪಾಂಡೇಶ್ವರ ಪೋಲಿಸರಿಂದ ಕಳ್ಳತನದ ಆರೋಪಿಯ ಬಂಧನ; ಸ್ವತ್ತುಗಳ ವಶ

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೊಬೈಲ್ ಅಂಗಡಿ ಕಳವು ಪ್ರಕರಣದ ಆರೋಪಿಯನ್ನು , ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿ, ಕಳವು ಮಾಡಿದ ಸುಮಾರು 25,000/- ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿರುತ್ತಾರೆ.
ಆರೋಪಿಯನ್ನು ಘಸಿಪುರ್ ಪುರ್ಬಾ ಪಾರಾ ಘಸಿಪುರ್ ಮಹಿಶಾದಾಲ್ ಪುರ್ಬೊ ಮೆದಿನಿಪುರ್ ಜಿಲ್ಲೆ ಪಶ್ಚಿಮ ಬಂಗಾಳ. ರಾಜ್ಯದ ನಿವಾಸಿ ಸಿಕಂದರ್ ಪಾಷಾ ಎಂದು ಗುರುತಿಸಲಾಗಿದೆ.
ದಿನಾಂಕ 28-09-2015 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ದಿನಕರಶೆಟ್ಟಿ ಹಾಗೂ ಅಪರಾಧ ವಿಭಾಗದ ಪಿಎಸ್ ಐ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿ ಬೆಳಿಗ್ಗೆ 10-45 ಗಂಟೆಗೆ ಮಂಗಳೂರು ರೈಲ್ಪೆ ನಿಲ್ದಾಣದಲ್ಲಿ ಬಳಿ ಬಂದಾಗ ಒಬ್ಬಾತನು ಕಪ್ಪು ಬಣ್ಣದ ಬ್ಯಾಗ್ ಹಿಡಿದುಕೊಂಡು ರೈಲ್ಪ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿರುವ ಮೇಲೆ ಸಂಶಯಗೊಂಡು ವಿಚಾರಿಸಿ, ಕೂಲಂಕುಶವಾಗಿ ವಿಚಾರಿಸಿ ತನ್ನ ಬಳಿ ಇದ್ದ ಬ್ಯಾಗ್ ನಲ್ಲಿರುವ ಸೊತ್ತುಗಳ ಬಗ್ಗೆ ವಿಚಾರಿಸಿದಾಗ ಸದ್ರಿ ಬ್ಯಾಗ್ ನಲ್ಲಿ ದಿನಾಂಕ 11-09-2015 ರಂದು ಸುರತ್ಕಲ್ ಮಾರ್ಕೆಟ್ ಬಳಿ ಮೊಬೈಲ್ ಅಂಗಡಿಯಿಂದ ಕಳವು ಮಾಡಿದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಪೋನ್ ಗಳು ಇರುವುದಾಗಿ ತಿಳಿಸಿರುತ್ತಾನೆ ಹಾಗೂ ದಿನಾಂಕ 08-09-2015 ರಂದು ಸುರತ್ಕಲ್ ನಲ್ಲಿ ಜ್ಯುವೆಲ್ಲರ್ ಅಂಗಡಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾನೆ. ಈ ದಿನ ಆರೋಪಿಯು ಕಳವು ಮಾಡಿದ ಸೊತ್ತುಗಳನ್ನು ತನ್ನ ಊರಾದ ಪಶ್ಚಿಮ ಬಂಗಾಳದಲ್ಲಿ ಮಾರಾಟ ಮಾಡಲು ರೈಲ್ಪ ಮೂಲಕ ಪಶ್ಚಿಮ ಬಂಗಾಳಕ್ಕೆ ಹೋಗಲು ಯತ್ನಿಸಿದ ಆರೋಪಿಯನ್ನು ಮಂಗಳೂರು ರೈಲ್ಪೆ ನಿಲ್ದಾಣದ ಬಳಿ ದಸ್ತಗಿರಿ ಮಾಡಿ ಕಳವು ಮಾಡಿದ ಸೊತ್ತುಗಳನ್ನು ಸ್ವಾಧೀನಪಡಿಸಿರುವುದಾಗಿದೆ.
ಪೊಲೀಸ್ ಆಯುಕ್ತರಾದ ಶ್ರೀ ,ಎಸ್ ಮುರುಗನ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ ಶಾಂತರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ| ಸಂಜೀವ .ಎಂ ಪಾಟೀಲ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್,ಆರ್ ಕಲ್ಯಾಣ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿಯರವರು ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿರುತ್ತಾರೆ. ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರವರು ಸಿಬ್ಬಂದಿಗಳಾದ, ,ವಿಶ್ವನಾಥ, ಗಂಗಾಧರ, ಧನಂಜಯ, ಸತ್ಯನಾರಾಯಣ , ನೂತನ್ ಕುಮಾರ್ ಚಂದ್ರಶೇಖರ ಪುರುಷೋತ್ತಮ ಭೀಮಪ್ಪ ಆರೋಪಿ ಪತ್ತೆಗೆ ಸಹಕರಿಸಿದರು.

Leave a Reply