ಮಂಗಳೂರು: ಬಜಿಲಕೇರಿ ಮಸೀದಿ ಮೇಲೆ ಕಲ್ಲು ತೂರಾಟ ನಾಲ್ವರ ಬಂಧನ

ಮಂಗಳೂರು: ಬಜಿಲಕೇರಿ ಮಸೀದಿಯ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂದರು ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಭವಂತಿ ನಗರ ನಿವಾಸಿಗಳಾದ ನಿತಿನ್ ಶೆಟ್ಟಿ (21), ಸುಶಾಂತ್ (19), ಗುರುಕಿರಣ್ (18) ಹಾಗೂ ಬಜಿಲಕೇರಿ ನಿವಾಸಿ ಮಂಜು (24) ಎಂದು ಗುರುತಿಸಲಾಗಿದೆ.

mosque-13112015

ಪ್ರತ್ಯಕ್ಷದರ್ಶಿಗಳ ಪ್ರಕಾರ ನಾಲ್ವರು ಯುವಕರು ಸ್ಕಾರ್ಪಿಯೋ ವಾಹನ ಸಂಖ್ಯೆ ಕೆಎ 19ಝಡ್ 5180 ಯಲ್ಲಿ ಆಗಮಿಸಿ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದರು. ಮಾಹಿತಿ ಪಡೆದ ಬಂದರು ಪೋಲಿಸ್ ಶಾಂತರಾಮ್ ನಾಯಕತ್ವದಲ್ಲಿ ಕೂಡಲೇ ಆರೋಪಿಗಳನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮಂಗಳೂರು ಬಂದರು ಪೋಲಿಸ್ ಠಾಣೆಗೆ ಕರೆತರಲಾಗಿದ್ದು ವಿಚಾರಣೆ ನಡೆಸಲಾಗುತ್ತದೆ. ಆರೋಪಿಗಳ ವಿರುದ್ದ ಜಾಮೀನು ರಹಿತ ಕೇಸುಗಳನ್ನು ದಾಖಲಿಸಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

Leave a Reply