ಮಂಗಳೂರು : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರ ಸೆರೆ

ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕಿ ಯೋರ್ವಳನ್ನು ಮನೆಯೊಂದರಲ್ಲಿ ಕೂಡಿಹಾಕಿ ಐದು ಮಂದಿ ಸಾಮೂಹಿಕವಾಗಿ ಅತ್ಯಾಚಾರಗೈದಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಐದು ಮಂದಿ ಆರೋಪಿಗಳನ್ನು ಕಾವೂರು ಪೊಲೀಸರು ಇಂದು ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಬಾಲಕ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಕುಂಜತ್ತಬೈಲ್ ನಿವಾಸಿ ಪ್ರಶಾಂತ್ ಶೆಟ್ಟಿ (23) ಹಾಗೂ ಆತನ ಸ್ನೇಹಿತರಾದ ಸಲ್ಮಾನ್ (20), ಸುರೇಶ್ (23) ನೌಫಲ್ (23) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಶಾಮೀಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಬಾಲಕಿ ದೂರು ನೀಡಿದ ಕೆಲವೇ ತಾಸಿನೊಳಗೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಾವೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಶಾಂತ್ ಶೆಟ್ಟಿ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿದ್ದು, ಈತ ಸಂತ್ರಸ್ತೆ ಬಾಲಕಿಯ ನೆರೆ ಮನೆಯನಾಗಿದ್ದಾನೆ. ಬಾಲಕಿಯ ಜೊತೆ ಸಲುಗೆ ಹೊಂದಿದ್ದ ಪ್ರಶಾಂತ್ ಶೆಟ್ಟಿ ಪದೇ ಪದೇ ಬಾಲಕಿಯ ಮನೆಗೆ ಬಂದು ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಪ್ರಶಾಂತ್ ಶೆಟ್ಟಿ ಡಿ.27ರಂದು ಸಂಜೆ ಬಾಲಕಿಯನ್ನು ಪುಸಲಾಯಿಸಿ ಕುಂಜತ್ತಬೈಲ್‌ನಲ್ಲಿದ್ದ ಮನೆಯೊಂದಕ್ಕೆ ಕರೆತಂದಿದ್ದ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಗೈದಿರುವುದಲ್ಲದೆ ತನ್ನ ಇತರ ನಾಲ್ಕು ಮಂದಿ ಸ್ನೇಹಿತರಿಗೂ ಬಾಲಕಿಯನ್ನು ಒಪ್ಪಿಸಿದ್ದ. ಆರೋಪಿಗಳು ಅತ್ಯಾಚಾರಗೈದ ಬಳಿಕ ಈ ವಿಷಯ ಯಾರಲ್ಲೂ ಬಾಯಿ ಬಿಡದಂತೆ ಜೀವ ಬೆದರಿಕೆಯೊಡ್ಡಿದ್ದಾರೆ. ಘಟನೆಯಿಂದ ತೀರಾ ಝರ್ಜರಿತಳಾದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು ಮನೆಮಂದಿ ವಿಚಾರಿಸಿದಾಗ ಸತ್ಯ ಸಂಗತಿ ಬಾಯ್ಬಿಟ್ಟಿದ್ದಳು. ಈ ಬಗ್ಗೆ ಮನೆಮಂದಿ ಕೂಡಲೇ ಕಾವೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Leave a Reply

Please enter your comment!
Please enter your name here