ಮಂಗಳೂರು: ಹಾಸ್ಟೆಲಿನಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆ ; ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಹಾಸ್ಟೆಲ್ ವಾರ್ಡನ್ ಅಮಾನತಿಗೆ ಒತ್ತಾಯ

ಮಂಗಳೂರು: ಕಾಲೇಜಿನ ಹಾಸ್ಟೆಲಿನಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆ ಸಂಬಂಧಿಸಿ ಹಾಸ್ಟೆಲ್ ವಾರ್ಡನ್ ಅವರನ್ನು ಅಮಾನತುಗೊಳಿಸುಬೇಕು ಎಂದು ಒತ್ತಾಯಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯದ್ವಾರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.

1-all-college-students-association 3-all-college-students-association-002 4-all-college-students-association-003 5-all-college-students-association-004 2-all-college-students-association-001

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರ ಅಧ್ಯಕ್ಷ ಶೈಲೇಶ್ ನೋಯೆಲ್ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದು ತನ್ನ ಸಹಪಾಠಿಗಳಿಗೆ ತೋರಿಸಿದ್ದು, ಸಹಪಾಠಿಗಳು ಇದನ್ನು ಅಷ್ಟೋಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ನೋಯೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ತಿಳಿದ ವಿದ್ಯಾರ್ಥಿಗಳಿಗೆ ಹಾಗೂ ಆತನ ಗೆಳೆಯರಿಗೆ ನಿಜಕ್ಕೂ ಆಘಾತವಾಗಿತ್ತು. ನೋಯೆಲ್ ಬರೆದ ಡೆತ್ ನೋಟಿನಲ್ಲಿ ಹಾಸ್ಟೆಲಿನ ವಾರ್ಡನ್ ತನಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದನ್ನು ಉಲ್ಲೇಖಿಸಿದ್ದ. ಈ ಕುರಿತಾಗಿ ಹಾಸ್ಟೆಲಿನ ವಾರ್ಡನ್ ವರ್ತನೆಯ ಬಗ್ಗೆ ನಿರ್ದೇಶಕರಲ್ಲಿ ನೋಯೆಲ್ ದೂರಿದ್ದು, ನಿರ್ದೇಶಕರು ವಾರ್ಡನ್ ಅವರಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ವಾರ್ಡನ್ ನೊಯೆಲ್ ಅವರನ್ನು ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಕೆಯೊಡ್ಡಿದ್ದರು. ಘಟನೆ ನಡೆದ ಸಪ್ಟೆಂಬರ್ 30 ರಿಂದ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನಲ್ಲಿ ಇಲ್ಲ ಮತ್ತು ವಾರ್ಡನ್ ಅವರ ಮೊಬೈಲ್ ಕೂಡ ಸ್ವಿಚ್ಚ್ ಆಫ್ ಆಗಿದೆ. ಆದ್ದರಿಂದ ಘಟನೆಯಲ್ಲಿ ಒಂದು ರೀತಿಯ ಸಂಶಯ ಎದ್ದು ಕಾಣುತ್ತಿದ್ದು, ಕೂಡಲೇ ಹಾಸ್ಟೆಲಿನ ವಾರ್ಡನ್ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶೈಲೆಶ್ ಒತ್ತಾಯಿಸಿದರು. ಅಲ್ಲದೆ ನೊಯೇಲ್ ಅವರು ಇಂತಹ ನಿರ್ದಾರಕ್ಕೆ ಬರಲು ಏನು ಕಾರಣ ಎಂಬುದು ಬಯಲಾಗಬೇಕು ಮಾತ್ರವಲ್ಲದೆ ಆತ ಬರೆದ ಡೆತ್ ನೋಟ್ ಕೂಡ ನಾಪತ್ತೆಯಾಗಿದ್ದು ಇದನ್ನು ಹುಡುಕಿ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ಮಗನನ್ನು ಕಳೆದುಕೊಂಡ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಪರೀಕ್ಷೆಯ ಹಾಲ್ ಟಿಕೇಟ್ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದು, ಪ್ರತಿಭಟನೆಯ ವೀಡಿಯೊ ಚಿತ್ರೀಕರಣ ಕೂಡ ಮಾಡಿಸಿಕೊಂಡಿದ್ದಾರೆ. ಪ್ರತಿಭಟನೆ ಮಾಡುವುದು ವಿದ್ಯಾರ್ಥಿಗಳ ಹಕ್ಕು, ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ಒಂದುವೇಳೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನಿರಾಕರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಎಚ್ಚರಿಕೆಯನ್ನು ಶೈಲೆಶ್ ನೀಡಿದರು.

ಪ್ರತಿಭಟನೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾ ಸಂಚಾಲಕ ರಕ್ಷಿತ್, ವಿವೇಕ್, ಆರಾಫ್, ಸುಹಾಸ್ ಇನ್ನಿತರರು ಭಾಗವಹಸಿದ್ದರು

Leave a Reply