ಮಕ್ಕಳ ವಿದ್ಯಾರ್ಜನೆಗಾಗಿ ನೆರವು ನೀಡುವುದು ಪುಣ್ಯದ ಕೆಲಸ- ಪ್ರೊ. ವಿ.ಕೆ.ಉದ್ಯಾವರ

ಉಡುಪಿ : ಮಕ್ಕಳ ವಿದ್ಯಾರ್ಜನೆಗೆ ಯಾವ ರೂಪದಲ್ಲಾದರೂ ನೆರವು ನೀಡುವುದು ಒಂದು ಪಣ್ಯದ ಕೆಲಸ. ಈ ಕೆಲಸದಿಂದಾಗಿ ಒಂದು ಮಗುವಿನ ಭವಿಷ್ಯ ರೂಪುಗೊಳ್ಳುತ್ತದೆ. ಇದರಿಂದಾಗಿ ಒಂದು ಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ. ನೆರವು ಪಡೆದು ಕೊಂಡ ಮಕ್ಕಳು ಅದನ್ನು ಸದುಪಯೋಗ ಪಡೆದು ಕೊಳ್ಳ ಬೇಕು. ಈ ನೆರವು ಬಳಸಿ ಕೊಂಡು ತಮ್ಮ ವಿದ್ಯಾರ್ಜನೆಯನ್ನು ಯಶಸ್ವೀಯಾಗಿ ಪೂರೈಸಿ ನಾಡಿನ ಸತ್ಪ್ರಜೆಗಳಾಗ ಬೇಕು.ಮತ್ತು ತಾವು ಆರ್ಥಿಕವಾಗಿ ಸುದೃಡರಾದಾಗ ತಮ್ಮ ಮುಂದಿರುವ ಅರ್ಹ ವಿದ್ಯಾರ್ಥಿಗಳಿಗೆ ತಮ್ಮಿಂದ ಆದಷ್ಟು ನೆರವನ್ನು ನೀಡಿದಾಗ ಮಾತ್ರ ಈ ಸಂಸ್ಥೆಯ ಈ ಕೆಲಸಕ್ಕೆ ಅರ್ಥ ಬರುತ್ತದೆ. ಎಂದು ಕಾಪು ವಿದ್ಯಾನಿಕೇತನ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ, ಪ್ರೊ. ವಿ.ಕೆ. ಉದ್ಯಾವರ್ ಇವರು ಸೇವಾ ಮತ್ತು ಸಾಂಸ್ಕತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಪ್ರಾಯೋಜಕತ್ವದ “ ಯು. ಎಫ್. ಸಿ. ಪುಸ್ತಕ ಭಂಡಾರ “ ದಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣಾ ಸಮಾರಂಭದ ಅತಿಥಿಗಳಾಗಿ ಆಗಮಿಸಿ ನುಡಿದರು.

udyavara-friends-club

ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್ ರವರು ಮಾತನಾಡುತ್ತಾ ನಿರಂತರವಾಗಿ ಸಂಸ್ಥೆ ಜನಪರ ಕೆಲಸಗಳಲ್ಲಿ ತೊಡಗಿ ಕೊಂಡಿರುವುದು ಒಂದು ಶ್ಲಾಘನೀಯ ಕೆಲಸ . ಈ ಸಂಸ್ಥೆಯಿಂದ ಉಪಕೃತರಾದ ವಿದ್ಯಾರ್ಥಿಗಳು ಸಾವಿರಾರು ಮಂದಿ ಇದ್ದಾರೆ . ಇದೊಂದು ದೇವರ ಕೆಲಸ ಇದು ನಿರಂತರವಾಗಿ ಮುಂದುವರಿಯಲಿ. ಮತ್ತು ನೆರವು ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವೀಯಾಗಲಿ. ಎಂದು ಹಾರೈಸಿದರು

ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ , ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಿರೀಶ್ ಕುಮಾರ್ ಉಪಸ್ಥಿತರಿಧ್ಧರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಯು. ಆರ್. ಇವರು ಸ್ವಾಗತಿಸಿದರು. ನಿದೇರ್ಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲ್ಯಾನ್ ವಂದಿಸಿದರು, ಹಿರಿಯ ಸದಸ್ಯರಾದ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದ್ದರು. ಸುಮಾರು 150 ವಿದ್ಯಾರ್ಥಿಗಳು ಯು. ಎಫ್. ಸಿ ಪುಸ್ತಕ ಭಂಡಾರದ ಫಲಾನುಭವಿಗಳಾದರು.

Leave a Reply