ಮಾರ್ಚ್ 19 ರಿಂದ 21 ವರಗೆ ಉಡುಪಿಯಲ್ಲಿ “ ಮುರಾರಿ – ಕೆದ್ಲಾಯ ರಂಗೋತ್ಸವ”

ಉಡುಪಿ: ಸಾಂಸ್ಕøತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಆಶ್ರಯದಲ್ಲಿ ಮಾರ್ಚ್ 19 ರಿಂದ 21 ವರಗೆ “ ಮುರಾರಿ – ಕೆದ್ಲಾಯ ರಂಗೋತ್ಸವ “ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ದಿನ ಸಂಜೆ 6.15 ಕ್ಕೆ ಜರಗಲಿದೆ.

murari-kedlya-rangothsava

ತಾ. 19.03.2016 ಶನಿವಾರ ಸಂಜೆ ಗಂಟೆ 6,.15 ಕ್ಕೆ ರಂಗೋತ್ಸವವನ್ನು ಖ್ಯಾತ ರಂಗಕರ್ಮಿ, ಭರತ ನಾಟ್ಯ ಕಲಾವಿದೆ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಉಧ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಿ. ದೇವದಾಸ್ ಪೈ ಮತ್ತು ಉಡುಪಿ ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕುಸುಮಾ ಕಾಮತ್ ಭಾಗವಹಿಸಲಿರುವರು ಅಂದು ಥೇಮಾ – ಬೆಂಗಳೂರು ಕಲಾವಿದರು “ ಅನಾಹತ” ( ರಚನೆ : ಭಾರತಿ ಬಿ.ವಿ. ನಿರ್ದೇಶನ:ಎಸ್. ವಿ. ಸುಷ್ಮಾ, ಸಂಗೀತ : ಎಂ. ಡಿ. ಪಲ್ಲವಿ)ನಾಟಕ ಪ್ರದರ್ಶಿಸಲಿರುವರು.
ತಾ 20. 03. 2016 ಭಾನುವಾರ ನೀನಾಸಂ – ಹೆಗ್ಗೋಡು ಕಲಾವಿದರಿಂದ ಇಸ್ಕೈಲಸ್ ನ ತ್ರಿವಳಿ ನಾಟಕಗಳ ಸಂಕ್ಷಿಪ್ತ ರೂಪ “ ಒರೆಸ್ತಿಸ್ ಪುರಾಣ” ( ನಿರ್ದೇಶನ: ಬಿ, ಆರ್. ವೆಂಕಟರಮಣ ಐತಾಳ ) ಪ್ರದರ್ಶನಗೊಳ್ಳಲಿದೆ, ಅಂದು ರಂಗ ನಿರ್ದೇಶಕರುಗಳಾದ ಶ್ರೀ ಬಿ. ಆರ್. ವೆಂಕಟರಮಣ ಐತಾಳ ಮತ್ತು ಜೀವನ್ ರಾಮ್ ಸುಳ್ಯ ಅತಿಥಿಗಳಾಗಿ ಆಗಮಿಸಲಿರುವರು.
ರಂಗೋತ್ಸವದ ಸಮಾರೋಪ ಸಮಾರಂಭ ತಾ 21. 03. 2016 ಸೋಮವಾರ ಜರಗಲಿದ್ದು ಡಾ. ಕೆ. ಎಂ. ರಾಘವ ನಂಬಿಯಾರ್ ಸಮರೋಪ ಭಾಷಣ ಮಾಡಲಿದ್ದಾರೆ.ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರೋಹಿಣಿ ಮತ್ತು ರಂಗ ನಿರ್ದೇಶಕರಾದ ಶ್ರೀ ಕೆ.ಜಿ. ಕೃಷ್ಣಮೂರ್ತಿ ಅತಿಥಿಗಳಾಗಿ ಭಾಗವಹಿಸಲಿರುವರು ಅಂದು ಕಿನ್ನರ ಮೇಳ ತುಮರಿ ತಂಡದಿಂದ ಡಾ. ಮೊಗಳ್ಳಿ ಗಣೇಶ್ ಸಣ್ಣ ಕಥೆ ಆಧಾರಿತ ನಾಟಕ “ ಬುಗುರಿ “ ( ನಿರ್ದೇಶನ : ಡಾ.ಎಂ. ಗಣೇಶ್) ಪ್ರದರ್ಶನಗೊಳ್ಳಲಿದೆ.
ಉಡುಪಿಯಲ್ಲಿ ಪ್ರದರ್ಶನಗೊಳ್ಳಲಿರುವ ಈ ಮೂರು ಹೊಚ್ಚ ಹೊಸ ನಾಟಕಗಳನ್ನು ವೀಕ್ಷಿಸುವ ಅವಕಾಶವನ್ನು ಉಡುಪಿಯ ರಂಗ ಪ್ರೇಕ್ಷಕರು ಸದುಪಯೋಗ ಪಡಿಸಿ ಕೊಳ್ಳ ಬೇಕೆಂದು ರಥಬೀಧಿ ಗೆಳೆಯರು ಸಂಘಟನೆಯ ನಾಟಕ ವಿಭಾಗದ ಸಂಚಾಲಕರಾದ ಶ್ರೀ ಸಂತೋಷ ಶೆಟ್ಟಿ ಹಿರಿಯಡ್ಕ ಮತ್ತು ಶ್ರೀ ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Please enter your comment!
Please enter your name here