ಮೂಡಬಿದರೆ: ಹೂವಿನ ವ್ಯಾಪಾರಿ ಪ್ರಶಾಂತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೊರ್ಟ್ ಜಾಮೀನು

ಮೂಡಬಿದರೆ: ಹೂವಿನ ವ್ಯಾಪಾರಿ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿದೆ.
ಗಂಟಾಲ್ ಕಟ್ಟೆಯ ಬದ್ರುದ್ದೀನ್ ಮತ್ತು ಇಂತಿಯಾಸ್ ಜಾಮೀನು ಪಡೆದುಕೊಂಡ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ: ಅ9 ರಂದು ಮೂಡಬಿದರೆಯ ಸಮಾಜ ಮಂದಿರದ ಬಳಿ ಇರುವ ಹೂವಿನ ಅಂಗಡಿಯ ವ್ಯಾಪಾರ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪ್ರಶಾಂತ್ ಪೂಜಾರಿಯನ್ನು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು 11 ಮಂದಿಯನ್ನು ಬಂಧಿಸಿದ್ದು, ಬದ್ರುದ್ದಿನ್ ಅವರನ್ನು ಪೋಲಿಸರು ಮೆನೆಯಿಂದ ವಶಕ್ಕೆ ಪಡೆದುಕೊಂಡರೆ, ಇಂತಿಯಾಸ್ ವಿಮಾನದ ಮೂಲಕ ದುಬಾಯಿಗೆ ತೆರಲು ಮುಂಬೈ ಏರ್ ಪೋರ್ಟಿನಲ್ಲಿ ಇರುವ ವಶಕ್ಕೆ ಪಡೆದಿದ್ದರು.
ಆರೋಪಿಗಳ ಪರ ಹೈಕೋರ್ಟ್ ವಕೀಲ ಅಸ್ಮತ್ ಪಾಷಾ ವಾದಿಸಿದ್ದರು.

Leave a Reply