ಮೂಡಬಿದ್ರಿ: ಆಳ್ವಾಸ್‍ನಲ್ಲಿ ಪತ್ರಿಕೋದ್ಯಮ ಉಪನ್ಯಾಸ ಕಾರ್ಯಗಾರ

ಮೂಡಬಿದ್ರಿ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಆಯ್ಕೆಗಳಿಗೆ ಅವಕಾಶವಿದೆ. ಮುದ್ರಣ, ಶ್ರಾವ್ಯ ಮತ್ತು ದೃಶ್ಯ ಮಾಧ್ಯಮಗಳು ಇದಕ್ಕೆ ವಿಫುಲ ಅವಕಾಶವನ್ನು ನೀಡುತ್ತಿದೆ ಎಂದು ವಿ4 ಟಿ.ವಿ ವಾಹಿನಿಯ ನಿರೂಪಕಿ ಮಧು ಮೈಲಂಕೋಡಿ ಹೇಳಿದರು.

a

ಆಳ್ವಾಸ್ ಕಾಲೇಜಿನಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ “ಆಳ್ವಾಸ್ ವಿಷನ್” ಎಂಬ ಪ್ರಾಯೋಗಿಕ ಫೋಟೋ ಜರ್ನಲನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳಿಗೆ ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು. ಪತ್ರಿಕೋದ್ಯಮವನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರಿಸದೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರೆ ಮುಂದೆ ಉಪಯೋಗುವಾಗುತ್ತದೆ. ಭಾಷಾ ಕೌಶಲ್ಯ ಮತ್ತು ಬರವಣಿಗೆಯಲ್ಲಿ ಹಿಡಿತ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಹಾಗೂ ಉಪನ್ಯಾಸಕರಾದ ಜಿಷ್ಣು, ರೇಶ್ಮಾ ಉಪಸ್ಥಿತರಿದ್ದರು. ಅಕ್ಷಯ ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ವಂದಿಸಿದರು.

Leave a Reply

Please enter your comment!
Please enter your name here