ಮೂಡುಬಿದಿರೆ: ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ ದಾಳಿ: 4 ಆಡು, ಕರು ಸಾವು

ಮೂಡುಬಿದಿರೆ: ಕಾಂತಾವರ ಮತ್ತು ನಿಡ್ಡೋಡಿಯಲ್ಲಿ ಚಿರತೆ ದಾಳಿ ನಡೆಸಿ ನಾಲ್ಕು ಆಡು ಮತ್ತು ಒಂದು ಕರುವನ್ನು ಕೊಂದು ಹಾಕಿದೆ. ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಎಂಬವರ ಮನೆ ಹಟ್ಟಿಗೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ 3 ಆಡುಗಳನ್ನು ಕೊಂದುಹಾಕಿದೆ.

ಮೃತ ಆಡುಗಳ ಪೈಕಿ ಒಂದು ಹಾಲು ಕರೆಯುವ ಆಡು ಹಾಗೂ ಇನ್ನೊಂದು ಗರ್ಭಿಣಿಯಾಗಿತ್ತು. ಮೂರು ಆಡುಗಳ ಪೈಕಿ ಎರಡು ಆಡುಗಳ ಕುತ್ತಿಗೆಯಲ್ಲಿ ಮಾತ್ರ ಗಾಯಗಾಗಿದ್ದು, ಇನ್ನೊಂದು ಆಡನ್ನು ಚಿರತೆ ಅರ್ಧ ತಿಂದು ಬಿಟ್ಟ ಸ್ಥಿತಿಯಲ್ಲಿ ಇತ್ತು. ಎರಡು ದಿನಗಳ ಹಿಂದೆ ನಿಡ್ಡೋಡಿಯ ರಾಬರ್ಟ್ ಮಾರ್ಷಲ್ ಡಿಸೋಜ ಅವರ ಜರ್ಸಿ ಡೈರಿಗೆ ಚಿರತೆ ದಾಳಿ ನಡೆಸಿ ಒಂದು ಆಡು ಮತ್ತು ಒಂದು ಕರುವನ್ನು ಅರ್ಧ ತಿಂದು ಕೊಂದುಹಾಕಿದೆ.

ಮೂಡುಬಿದಿರೆ ವಲಯ ಉಪ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ, ಸಾಣೂರು ಪಶುವೈದ್ಯಾಧಿಕಾರಿ ನಾಗರಾಜ ಬಳೆಗಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply