ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಶೃದ್ಧಾಂಜಲಿ

ಮಂಗಳೂರು: ಆಗಸ್ಟ್ 20 ರಂದು ನಿಧನ ಹೊಂದಿದ ಕೊಂಕಣಿ ಅಕಾಡೆಮಿಯ ನಾಲ್ಕನೇ ಅಧ್ಯಕ್ಷರಾಗಿದ್ದ ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಕೊಂಕಣಿ ಅಕಾಡೆಮಿ ವತಿಯಿಂದ ನಗರದ ಕಲಾಂಗಣದಲ್ಲಿ ಆಗಸ್ಟ್ 21ರಂದು ನಡೆದ ಕೊಂಕಣಿ ಯುವ ಮಹೋತ್ಸವ ಕಾರ್ಯಕ್ರಮದಲ್ಲಿ ಶೃದ್ಧಾಂಜಲಿ ಅರ್ಪಿಸಲಾಯಿತು.

2

ಯುವಜನರಿಗೆ ಮೊನ್ಸಿ ಇವರ ಮತ್ತು ಅವರು ಕೊಂಕಣಿಗಾಗಿ ಮಾಡಿದ ಕೆಲಸ ಕಾರ್ಯಗಳನ್ನು ಪರಿಚಯಿಸಿದ ಕೊಂಕಣಿ ಕವಿ ಟೈಟಸ್ ನೊರೊನ್ಹಾ ಇಂದು ಮಂಗಳೂರಿನ ಚರ್ಚುಗಳಲ್ಲಿ ಕೊಂಕಣಿ ಉಳಿದಿದ್ದರೆ ಅದರ ಹಿಂದಿನ ಕತೃಶಕ್ತಿಗಳಲ್ಲಿ ಓರ್ವರು ಫಾದರ್ ಅಲೆಕ್ಸಾಂಡರ್. ಕೊಂಕಣಿ ಭಾಷೆ, ಸಮುದಾಯ ಮತ್ತು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿ, ಯುವಶಕ್ತಿಯನ್ನು ಪ್ರೋತ್ಸಾಹಿಸಿ ಸಲುಹಿದ ವಂ. ಅಲೆಕ್ಸಾಂಡರ್ ಡಿಸೋಜ ಇವರಿಗೆ ಹೃತ್ಪೂರ್ವಕ ವಿದಾಯವನ್ನು ಬಯಸುತ್ತೇನೆ ಎಂದು ಶೃದ್ಧಾಂಜಲಿ ಅರ್ಪಿಸಿದರು.

ಪೋಪ್ ಆಗಮನಕ್ಕಾಗಿ 5 ಲಕ್ಷಕ್ಕೂ ಮಿಕ್ಕಿ ಜನ ಸೇರಿದ ಕಾರ್ಯಕ್ರಮದ ಬೃಹತ್ ತಯಾರಿ, ತ್ಯಾಗಿ ಮಸೂದೆ ವಿರೋಧಿಸಿ ಜನಾಂದೋಲನ, ದಲಿತ ಕ್ರೈಸ್ತರ ಹಕ್ಕುಗಳಿಗಾಗಿ ಹೋರಾಟ, ರಾಕ್ಣೊ ಪತ್ರಿಕೆಯ ಮುಂದಾಳತ್ವ, ನಿತ್ಯಾಧರ್ ನಗರದಲ್ಲಿ ಬಡವರಿಗಾಗಿ 135 ಮನೆಗಳು, ಕೊಂಕಣಿ ಅಕಾಡೆಮಿಯ ಅಧ್ಯಕ್ಷತೆ, 13 ವರ್ಷಗಳ ಕಾಲ ಮಂಗಳೂರಿನ ಕ್ರೈಸ್ತ ಯುವಜನರ ನಿರ್ದೇಶಕರಾಗಿ ಯುವಶಕ್ತಿಗೆ ಮುಂದಾಳತ್ವ ಇವು ಅಲೆಕ್ಸಾಂಡರ್ ಡಿಸೋಜ ಇವರ ಕತೃಶಕ್ತಿಯ ಕೆಲ ಉದಾಹರಣೆಗಳು.

1

ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ. ದೇವದಾಸ್ ಪೈ, ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೊಜಾ, ಲುಲ್ಲುಸ್ ಕುಟಿನ್ಹಾ, ಉದ್ಯಮಿ ಜೊಸೆಫ್ ಮತಾಯಸ್, ಎರಿಕ್ ಒಝೇರಿಯೊ, ಲುವಿ ಪಿಂಟೊ, ರೋಶನ್ ಕ್ಯಾಸ್ತೆಲಿನೊ, ಸ್ಟ್ಯಾನಿ ಆಲ್ವಾರಿಸ್, ಎಂ. ಆರ್. ಕಾಮತ್, ಸ್ಮಿತಾ ಶೆಣೈ, ಕ್ರಿಸ್ಟೋಫರ್ ಡಿಸೊಜಾ, ಹಾಗೂ ಯುವಪ್ರತಿನಿಧಿಗಳು ಪುಷ್ಪಾಂಜಲಿ ಅರ್ಪಿಸಿದರು.

ವಿತೊರಿ ಕಾರ್ಕಳ್ ಕಾರ್ಯಕ್ರಮ ನಿರೂಪಿಸಿದರು.

Leave a Reply