ಮೋದಿ ರಕ್ತದ ದಲ್ಲಾಳಿ, ರಾಹುಲ್ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಮೋದಿ ರಕ್ತದ ದಲ್ಲಾಳಿ, ರಾಹುಲ್ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದಕ ಜಿಲ್ಲಾ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.

bjp-yuva-morcha-dk

ಜಗತ್ತಿನ ಎಲ್ಲಾ ದೇಶಗಳು ಇತ್ತೀಚೆಗೆ ನಡೆದಂತಹ ಸರ್ಜಿಕಲ್ ಸ್ಟ್ರೈಕ್ ಘಟನೆಯ ಬಗ್ಗೆ ಸಹಮತ ವ್ಯಕ್ತಪಡಿಸಿ ಅಮೇರಿಕಾ, ರಷ್ಯಾ, ಚೀನಾದಂತಹ ದೇಶಗಳೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದು, ಇಂತಹ ಒಂದು ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇಂತಹ ನೀಚ ಹೇಳಿಕೆ ಕೊಡುವ ಮೂಲಕ ಇಡೀ ದೇಶದ ಸೈನಿಕರಿಗೆ ಮತ್ತು ದೇಶದ ಜನತೆಗೆ ಅಪಮಾನ ಮಾಡಿದ್ದಾರೆ.

ಸೈನಿಕರ ನೈತಿಕ ಸ್ಥೈರ್ಯ ಕುಂದಿಸುವ ಈ ಹೇಳಿಕೆಯು ಅತೀ ಖಂಡನಾರ್ಹ ಮತ್ತು ರಾಹುಲ್‍ಗಾಂಧಿಯವರು ದೇಶದ ಸೈನಿಕರ ಮತ್ತು ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ದ.ಕ ಜಿಲ್ಲಾ ಯುವ ಮೋರ್ಚಾ ಆಗ್ರಹಿಸಿತು.

Leave a Reply