ಯುಪಿಎಲ್ ಕ್ರಿಕೆಟ್ ಪಂದ್ಯಾಟ – ಟ್ರೋಫಿ ಅನಾವರಣ

ಉಡುಪಿ : ಏಪ್ರಿಲ್ ತಿಂಗಳ 26ರಿಂದ ಮೇ 1ರವರೆಗೆಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಉಡುಪಿ ಪ್ರೀಮಿಯರ್‌ ಲೀಗ್‌(ಯುಪಿಎಲ್‌) ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಹಾರ್ಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾಟದ ಟ್ರೋಫಿ ಉದ್ಘಾಟನೆ ಶನಿವಾರ ಜರುಗಿತು.

upl-trophy-udupi

ಟ್ರೋಫಿಯನ್ನು ಉಡುಪಿ ಶಾಸಕ ಪ್ರಮೋದ್‌ ಮಧ್ವರಾಜ್‌ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಜನರಲ್‌ ಮ್ಯಾನೇಜರ್‌ ಜಯಕರ್‌ ಶೆಟ್ಟಿ ಇಂದ್ರಾಳಿ, ಬಿರ್ತಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಗಂಗಾಧರ್‌ ಭಂಡಾರಿ, ನಗರಸಭಾ ಸದಸ್ಯೆ ಗೀತಾ ಶೇಟ್‌, ಆಬ್ರೊ ಗ್ರೂಪ್‌ನ ಜನರಲ್‌ ಮ್ಯಾನೇಜರ್‌ ಹಿದಾಯತ್‌ ಕಾಝಿ, ಸುನೀಲ್‌ ಕುಮಾರ್‌ ಗೋವಾ, ಶಿವರಾಜ್‌ ಗೋವಾ, ಸುಕೇಶ್‌ ಶೆಟ್ಟಿ, ಉಡುಪಿ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಸಾಧಿಕ್‌ ಕಾಪು ಮೊದಲಾದವರು ಉಪಸ್ಥಿತರಿದ್ದರು.

ಈ ಪಂದ್ಯಾಟದಲ್ಲಿ ಕೊಲ್ಲಿ ರಾಷ್ಟ್ರಗಳಿಂದ 10 ತಂಡ ಗಳು ಹಾಗೂ ಕೇರಳ, ಆಂಧ್ರಪ್ರದೇಶ, ಗೋವಾ, ಮುಂಬೈ, ಕರ್ನಾಟಕ ರಾಜ್ಯಗಳಿಂದ 24 ತಂಡಗಳು ಭಾಗವಹಿಸಲಿವೆ.

Leave a Reply