ಯುವಪೀಳಿಗೆ ದೇಶದ ದೊಡ್ಡ ಸಂಪತ್ತು: ವಿನಯಕುಮಾರ್ ಸೊರಕೆ

ಪಡುಬಿದ್ರಿ: ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಯುವಜನಾಂಗಕ್ಕೆ ತಿಳಿಸುವಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಭಾನುವಾರ ಎರ್ಮಾಳು ತೆಂಕ ರಾಜೀವಗಾಂಧಿ ತರಬೇತಿ ಕೇಂದ್ರದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಕಾಪು ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗ, ಕಾಪು ಬ್ಲಾಕ್ ಕಾಂಗ್ರೆಸ್ ಸೇವಾದಳದ ಸಂಯುಕ್ತ ಆಶ್ರಯದಲ್ಲಿ ಪಕ್ಷದ ಸಂಘ ಟನೆ ಮತ್ತು ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರೇರಣಾ-2016 ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

image001vinay-kumar-sorake-press-20160425-001

ಕೋಮುಭಾವನೆ ಕೆರಳಿಸುವ ಬಿಜೆಪಿಯು ಈ ಬಾರಿ ಕಾಪು ಪುರಸಭಾ ಚುನಾವಣೆಯಲ್ಲಿ ನಾನಾ ರೀತಿಯ ಆಸೆ ಆಮಿಷ ಒಡ್ಡಿದರೂ ಅದಕ್ಕೆ ಕಾಂಗ್ರೆಸ್ ಪಕ್ಷದ ಯಾರೊಬ್ಬರೂ ಬಲಿಯಾಗಿಲ್ಲ. ಜನಾದೇಶಕ್ಕೆ ಪೂರಕವಾಗಿ ಅಲ್ಲಿ ಕಾಂಗ್ರೆಸ್ ಅಧಿಕಾರ ಹೊಂದಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ನಿರಂತರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದರು.

ಅಂಬೇಡ್ಕರ್ ಜಯಂತಿ: ಕಾಪು ಕ್ಷೇತ್ರದ ಎಲ್ಲಾ ದಲಿತ ಕಾಲೊನಿಗಳಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ 125ನೇ ಜಯಂತಿಯನ್ನು ಆಚರಿಸಲಾಗುವುದು. ಮೀಸಲಾತಿಯಿಂದ ದೇಶದಲ್ಲಿ ಸಮಾ ನತೆ ಮೂಡಿದೆ. ಕೆಲವರು ಮೀಸಲಾತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸನ್ಮಾನ: ಪಿಯುಸಿ ಪರೀಕ್ಷೆಯಲ್ಲಿ ಶೇ 97.5 ಅಂಕ ಗಳಿಸಿದ ಫಲಿಮಾರಿನ ದೀಕ್ಷಾ, ಶೇ 91 ಅಂಕ ಗಳಿಸಿದ ಎರ್ಮಾಳು ತೆಂಕದ ಪ್ರತೀಕ್ಷಾ, ಶೇ 100 ಫಲಿತಾಂಶ ಪಡೆದ ಎರ್ಮಾಳು ತೆಂಕ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯರಾದ ಎಚ್.ಸುನೀತಾ, ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯಾ, ಉಪಾ ಧ್ಯಕ್ಷ ಉಸ್ಮಾನ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕಾಪು ಪುರ ಸಭೆ ಚುನಾಯಿತ ಸದಸ್ಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಜೆ.ಶೆಟ್ಟಿ, ಸೇವಾ ದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ದಿವಾಕರ ಶೆಟ್ಟಿ, ಮೋಹನ್ ನಂಬಿಯಾರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ತೆಂಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾ ಕುಮಾರಿ, ಹಿಂದುಳಿದ ವರ್ಗ ಗಳ ಬ್ಲಾಕ್ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್, ಕಾರ್ಯದರ್ಶಿ ದೇವರಾಜ್ ಕೋಟ್ಯಾನ್, ಸೇವಾದಳ ಬ್ಲಾಕ್ ಅಧ್ಯಕ್ಷ ಕಿಶೋರ್ ಕುಮಾರ್ ಎರ್ಮಾಳ್, ಕಾರ್ಯಕ್ರಮ ನಿರ್ದೇಶಕರಾದ ನಾಗೇಶ್ ಕುಮಾರ್, ದಿನೇಶ್ ಕೋಟ್ಯಾನ್, ಗಣೇಶ್ ಎನ್.ಕೋಟ್ಯಾನ್, ಪ್ರಭಾಕರ ಪಾಲನ್, ರೇಣುಕಾ ಪುತ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜೆಸಿಐ ವಲಯ 15ರ ತರಬೇತು ದಾರರಾದ ಪ್ರಭಾಕರ ಪೂಜಾರಿ ಕಾರ್ಕಳ ಮತ್ತು ಮನೋಜ್ ಕಡಬ ಮಣಿಪಾಲ್ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Leave a Reply