ಯೋಗ ತರಬೇತಿ ಶಿಬಿರ ಉದ್ಘಾಟನೆ

ಯೋಗ ತರಬೇತಿ ಶಿಬಿರ ಉದ್ಘಾಟನೆ

ಮ0ಗಳೂರು: ನಗರದ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ, ಸಂಸ್ಥೆಯ ಮಹಿಳಾ ಅಭಿವೃದ್ಧಿ ಘಟಕದ ವತಿಯಿಂದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರ ಮಾರ್ಗದರ್ಶನದಲ್ಲಿ ಜುಲೈ 4 ರಿಂದ ಆಗಸ್ಟ್ 3 ರವರೆಗೆ ಒಂದು ತಿಂಗಳ ಕಾಲ “ಯೋಗ ತರಬೇತಿ ಶಿಬಿರ” ವನ್ನು ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭವು  ಸಂಸ್ಥೆಯ ಪ್ರಾಂಶುಪಾಲರಾದ ಸುಶೀಲಾ ಕುಮಾರಿ ವಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

yoga-KPT

ಸಮಾರಂಭದ ಉದ್ಘಾಟನೆಯನ್ನು ಗೋಪಾಲಕೃಷ್ಣ ದೇಲಂಪಾಡಿ, ಮಾಡಿದರು. ಸಂಸ್ಥೆಯ ಕುಲಸಚಿವರಾದ ರಾಜೇಂದ್ರ ಪ್ರಸಾದ್, ಮಹಿಳಾ ಅಭಿವೃದ್ಧಿ ಘಟಕದ ಅಧಿಕಾರಿಗಳಾದ ಮೃದುಲಾ ವಿ. ಮತ್ತು ಮಮತಾ ಎನ್., ಸಂಸ್ಥೆಯ ವಿವಿಧ ವಿಭಾಗಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here